Syria Indians Evacuation: 75 ನಾಗರಿಕರನ್ನು ಸಿರಿಯಾದಿಂದ ಸುರಕ್ಷಿತವಾಗಿ ಸ್ಥಳಾಂತರಿಸಿದ ಭಾರತ
ಸಿರಿಯಾದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಅಸ್ಸಾದ್ ಸರ್ಕಾರ ಪತನಗೊಂಡಿದೆ, ಅಧ್ಯಕ್ಷ ಬೇರೆ ದೇಶಕ್ಕೆ ಪಲಾಯನ ಮಾಡಿದ್ದಾರೆ. ಬಂಡುಕೋರರು ರಾಜಧಾನಿ ಡಮಾಸ್ಕಸ್ ಸೇರಿದಂತೆ ಬಹುತೇಕ ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿರುವ ಭಾರತವು 75 ಭಾರತೀಯರನ್ನು ಇದೀಗ ಸುರಕ್ಷಿತವಾಗಿ ಲೆಬನಾನ್‌ಗೆ ಸ್ಥಳಾಂತರ ಮಾಡಿದ್ದು, ಶೀಘ್ರವೇ ಭಾರತಕ್ಕೆ ಕರೆತರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿರಿಯಾದಿಂದ ಸ್ಥಳಾಂತರಿಸಲ್ಪಟ್ಟವರಲ್ಲಿ ಜಮ್ಮು ಮತ್ತು ಕಾಶ್ಮೀರದ 44 ಯಾತ್ರಾರ್ಥಿಗಳೂ ಸೇರಿದ್ದಾರೆ.

ರಾಜಧಾನಿ ಡಮಾಸ್ಕಸ್‌ನಿಂದ 10 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಪಟ್ಟಣವಾದ ಸೈದಾ ಜೈನಾಬ್‌ನಲ್ಲಿ ಯಾತ್ರಿಕರು ಸಿಲುಕಿಕೊಂಡಿದ್ದರು. ಸಿರಿಯಾದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿ ಮತ್ತು ಭಾರತೀಯ ನಾಗರಿಕರ ನಿರಂತರ ವಿನಂತಿ ಬಳಿಕ ಅವರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಒಪ್ಪಿಗೆ ನೀಡಲಾಗಿತ್ತು.
ದಂಗೆಯ ನಂತರದ ಸೂಕ್ಷ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಇನ್ನೂ ಸಿರಿಯಾದಲ್ಲಿ ವಾಸಿಸುವ ಭಾರತೀಯ ನಾಗರಿಕರಿಗೆ ಎಚ್ಚರಿಕೆ ವಹಿಸಲು ಸಲಹೆ ನೀಡಿದೆ. ಡಮಾಸ್ಕಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಮಾರ್ಗಸೂಚಿಗಳ ಬಗ್ಗೆಯೂ ಗಮನ ಹರಿಸುವಂತೆ ಮನವಿ ಮಾಡಲಾಗಿದೆ.
ಮತ್ತಷ್ಟು ಓದಿ: ಮಹಿಳೆಯರ ಡ್ರೆಸ್ಕೋಡ್ ಬಗ್ಗೆ ಸಿರಿಯಾ ಬಂಡುಕೋರರಿಂದ ಮಹತ್ವದ ಘೋಷಣೆ
ಎಲ್ಲಾ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಲೆಬನಾನ್‌ಗೆ ದಾಟಿದ್ದಾರೆ ಮತ್ತು ಭಾರತಕ್ಕೆ ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಹಿಂತಿರುಗುತ್ತಾರೆ. ಬಂಡುಕೋರರು ಮೊಹಮ್ಮದ್ ಅಲ್-ಬಶೀರ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ.
ಪ್ರತಿಭಟನೆಗಳು ಹೆಚ್ಚಾದಂತೆ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ದೇಶದಿಂದ ಪಲಾಯನ ಮಾಡುವಂತೆ ಸೂಚಿಸಲಾಗಿತ್ತು. 2011 ರಲ್ಲಿ ಪ್ರಾರಂಭವಾದ ಸಿರಿಯಾದಲ್ಲಿ ಅಂತರ್ಯುದ್ಧವು ಡಿಸೆಂಬರ್ 8, 2024 ರಂದು ಬಶರ್ ಅಲ್-ಅಸ್ಸಾದ್ ಅನ್ನು ಬಂಡಾಯ ಪಡೆಗಳಿಂದ ಪದಚ್ಯುತಗೊಳಿಸುವುದರೊಂದಿಗೆ ಕೊನೆಗೊಂಡಿತು.
ಬಂಡುಕೋರರು ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ನಂತರ ಅಸ್ಸಾದ್ ತನ್ನ ಕುಟುಂಬದೊಂದಿಗೆ ಸಿರಿಯಾದಿಂದ ಪಲಾಯನ ಮಾಡಿದರು. ಅವರು ಪಲಾಯನ ಮಾಡಿದ ವಿಮಾನವು ರಾಡಾರ್ ಸಂಪರ್ಕವನ್ನು ಕಳೆದುಕೊಂಡಿದೆ ಎಂಬ ವರದಿಗಳೂ ಇವೆ.
ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರಬಹುದು ಎಂಬ ಊಹಾಪೋಹವೂ ಇತ್ತು. ಆದಾಗ್ಯೂ, ರಾಯಿಟರ್ಸ್ ವರದಿಯ ಪ್ರಕಾರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಸ್ಸಾದ್ ಮತ್ತು ಅವರ ಕುಟುಂಬಕ್ಕೆ ರಾಜಕೀಯ ಆಶ್ರಯ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ