AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧೀಜಿ ಬಳಸಿದ ಬಟ್ಟಲು, ಚಮಚ ಹರಾಜಿಗಿದೆ.. ಆರಂಭಿಕ ಬೆಲೆ ಕೇಳಿದರೆ ಹೌಹಾರುತ್ತೀರಿ!

ಮಹಾತ್ಮ ಗಾಂಧೀಜಿ ಬಳಸಿದ ಲೋಹದ ಬಟ್ಟಲು, ಮರದ ಚಮಚ, ಫೋರ್ಕ್ ಎಲ್ಲವನ್ನೂ ಹರಾಜಿಗಿಡಲಾಗಿದೆ. ಬ್ರಿಟನ್​ನ ಬ್ರಿಸ್ಟೋಲ್​ನಲ್ಲಿ ಜನವರಿ 10ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು ಹರಾಜಿನ ಆರಂಭಿಕ ಬೆಲೆ ಭಾರತೀಯ ಮೌಲ್ಯದಲ್ಲಿ ₹54,59,808.20 (GBP 55,000) ಆಗಿರಲಿದೆ.

ಗಾಂಧೀಜಿ ಬಳಸಿದ ಬಟ್ಟಲು, ಚಮಚ ಹರಾಜಿಗಿದೆ.. ಆರಂಭಿಕ ಬೆಲೆ ಕೇಳಿದರೆ ಹೌಹಾರುತ್ತೀರಿ!
ಮಹಾತ್ಮ ಗಾಂಧೀಜಿ
Skanda
| Edited By: |

Updated on: Dec 30, 2020 | 2:35 PM

Share

ಒಂದು ಕಾಲದಲ್ಲಿ ಮಹಾತ್ಮ ಗಾಂಧೀಜಿ ಬಳಸಿದ ಲೋಹದ ಬಟ್ಟಲು, ಮರದ ಚಮಚ, ಫೋರ್ಕ್ ಎಲ್ಲವಕ್ಕೂ ಈಗ ಭರಪೂರ ಡಿಮ್ಯಾಂಡ್ ಬಂದಿದೆ. ಬ್ರಿಟನ್​ನ ಬ್ರಿಸ್ಟಲ್​ನಲ್ಲಿ ಜನವರಿ 10ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು ಹರಾಜಿನ ಆರಂಭಿಕ ಬೆಲೆ ಭಾರತೀಯ ಮೌಲ್ಯದಲ್ಲಿ ₹54,59,808.20 (GBP 55,000) ಆಗಿರಲಿದೆ. ಅದರೊಂದಿಗೆ ಹರಾಜು ಸಮಿತಿಯ ಕಮಿಷನ್, ಜಿಎಸ್​ಟಿ, ವಿಮೆ, ಭಾರತದಿಂದ ಆಮದು ಮಾಡಿಕೊಂಡ ಮೊತ್ತ ಇತ್ಯಾದಿ ಸೇರಿಕೊಂಡು ಒಟ್ಟು ಮೊತ್ತ ₹ 1.2 ಕೋಟಿ ಆಗಬಹುದು ಎಂದು ಆಯೋಜಕರು ತಿಳಿಸಿದ್ದಾರೆ.

ಇದು ಆಯೋಜಕರು ನಿರೀಕ್ಷಿಸುತ್ತಿರುವ ಕನಿಷ್ಠ ಮೌಲ್ಯವಾಗಿದ್ದು ಹರಾಜಿನ ಸಂದರ್ಭದಲ್ಲಿ 2-3 ಪಟ್ಟು ಹೆಚ್ಚು ಮೌಲ್ಯಕ್ಕೆ ಹೋಗುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ. ಈ ವಸ್ತುಗಳನ್ನು ಮಹಾತ್ಮ ಗಾಂಧೀಜಿಯವರು 1942ರಿಂದ 1944ರ ಅವಧಿಯಲ್ಲಿ ಪುಣೆಯ ಅಗಾ ಖಾನ್​ ಅರಮನೆಯಲ್ಲಿ ಸೆರೆಯಾಳಾಗಿದ್ದಾಗ ಹಾಗೂ ಮುಂಬೈನ ಪಂಬನ್​ ಹೌಸ್​ನಲ್ಲಿದ್ದಾಗ ಬಳಕೆ ಮಾಡಿದ್ದರು ಎಂದು ಹರಾಜು ಪ್ರಕ್ರಿಯೆ ಆಯೋಜಕರು ತಿಳಿಸಿದ್ದಾರೆ.

ಯಾರ ಸಂಗ್ರಹಣೆಯಲ್ಲಿತ್ತು ಇದು? ಈ ವಸ್ತುಗಳು ಗಾಂಧೀಜಿಯವರ ಕಟ್ಟಾ ಅನುಯಾಯಿ ಆದ ಸುಮತಿ ಮೊರಾರ್ಜಿ ಅವರ ಸಂಗ್ರಹಣೆಯಲ್ಲಿತ್ತು. ಈ ಕುರಿತು 1970ರಲ್ಲಿ ಸುಮತಿ ಮೊರಾರ್ಜಿ ಅವರ ಗೌರವಾರ್ಥವಾಗಿ ಪ್ರಕಟಿಸಿದ ಸ್ಮರಣ ಗ್ರಂಥ ಮತ್ತು ವಿಠ್ಠಲ ಭಾಯಿ ಝಾವೇರಿ ಬಯೋಪಿಕ್​ನಲ್ಲೂ ಉಲ್ಲೇಖವಿದೆ. ಈ ವಸ್ತುಗಳು ಗಾಂಧೀಜಿಯವರಿಗೆ ಸಂಬಂಧಿಸಿದ್ದಷ್ಟೇ ಅಲ್ಲದೇ ಭಾರತೀಯ ಇತಿಹಾಸಕ್ಕೂ ಸಂಬಂಧಿಸಿದ್ದಾಗಿದ್ದರಿಂದ ಹರಾಜು ಪ್ರಕ್ರಿಯೆ ಬಹಳಷ್ಟು ಕುತೂಹಲ ಮೂಡಿಸಿದೆ.

ಬ್ರಿಟನ್ನಲ್ಲಿರುವ ಗಾಂಧಿ ಹಾಗೂ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಪ್ರತಿಮೆ ತೆರವು ಸಾಧ್ಯತೆ.. ಕಾರಣವೇನು..?

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ