AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಗಳ ಮೇಲೆ ಅತ್ಯಾಚಾರವೆಸಗಿ ಹೇಯ ಕೃತ್ಯವನ್ನು ಚಿತ್ರೀಕರಿಸಿದ್ದ ಬ್ರಿಟಿಷ್ ಮೊಸಳೆ ತಜ್ಞ ತಪ್ಪೊಪ್ಪಿಗೆ

ಬ್ರಿಟ್ಟನ್ 2014 ರಿಂದ ಪ್ರಾಣಿಗಳ ಮೇಲೆ "ಹಿಂಸಾತ್ಮಕ ಲೈಂಗಿಕ ಆಸಕ್ತಿಯನ್ನು" ಹೊಂದಿದ್ದಾನೆ. ಆತ ತನ್ನ ಬಳಿ ಇರುವ ಸಾಕುಪ್ರಾಣಿಗಳು ಮತ್ತು ಇತರ ಮಾಲೀಕರು ಬಿಟ್ಟುಕೊಟ್ಟ ನಾಯಿಗಳನ್ನು ಶೋಷಣೆ ಮಾಡಿದ್ದಾನೆ. ಪ್ರಯಾಣ ಅಥವಾ ಕೆಲಸದ ಬದ್ಧತೆಯ ಕಾರಣದಿಂದ ತಮ್ಮ ಸಾಕುಪ್ರಾಣಿಗಳನ್ನು ನೀಡುವ ಜನರನ್ನು ಬ್ರಿಟ್ಟನ್​​ ಹುಡುಕುತ್ತಿದ್ದರು.

ನಾಯಿಗಳ ಮೇಲೆ ಅತ್ಯಾಚಾರವೆಸಗಿ ಹೇಯ ಕೃತ್ಯವನ್ನು ಚಿತ್ರೀಕರಿಸಿದ್ದ ಬ್ರಿಟಿಷ್ ಮೊಸಳೆ ತಜ್ಞ ತಪ್ಪೊಪ್ಪಿಗೆ
ಆಡಮ್ ಬ್ರಿಟ್ಟನ್Image Credit source: Twitter/RWMaloneMD
Follow us
ರಶ್ಮಿ ಕಲ್ಲಕಟ್ಟ
|

Updated on: Sep 27, 2023 | 1:10 PM

ಲಂಡನ್ ಸೆಪ್ಟೆಂಬರ್ 27: ಬ್ರಿಟನ್​​ನ ಮೊಸಳೆ ತಜ್ಞನೊಬ್ಬ (crocodile expert) ನಾಯಿಗಳ ಮೇಲೆ ಅತ್ಯಾಚಾರ ಮಾಡಿ ಕೊಂದು, ತನ್ನ ಮೃಗೀಯ ಕೃತ್ಯಗಳನ್ನು ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಬಿಬಿಸಿ ಮತ್ತು ನ್ಯಾಷನಲ್ ಜಿಯಾಗ್ರಫಿಕ್‌ನೊಂದಿಗೆ ಕೆಲಸ ಮಾಡಿದ ಪ್ರಮುಖ ಪ್ರಾಣಿಶಾಸ್ತ್ರಜ್ಞ ಆಡಮ್ ಬ್ರಿಟ್ಟನ್(Adam Britton) , ಡಜನ್‌ಗಟ್ಟಲೆ ನಾಯಿಗಳನ್ನು ಹಿಂಸಿಸುತ್ತಿದ್ದರು ಎಂದು ಆಸ್ಟ್ರೇಲಿಯಾದ ನ್ಯಾಯಾಲಯಕ್ಕೆ ತಿಳಿಸಿದರು. ಇವೆಲ್ಲವನ್ನೂ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದೆ. 60 ಆರೋಪಗಳ ಪೈಕಿ ಆನ್‌ಲೈನ್‌ನಲ್ಲಿ ಮಕ್ಕಳ ನಿಂದನೆಯ ವಸ್ತುಗಳನ್ನು ಪ್ರವೇಶಿಸಿರುವುದನ್ನು ಒಪ್ಪಿಕೊಂಡ ಬ್ರಿಟ್ಟನ್​​​ಗೆ ಇನ್ನೂ ಶಿಕ್ಷೆ ವಿಧಿಸಲಾಗಿಲ್ಲ.

ನಾರ್ದರ್ನ್ ಟೆರಿಟರಿ ಸುಪ್ರೀಂಕೋರ್ಟ್‌ನಲ್ಲಿ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಲಯದ ಕೊಠಡಿಯಿಂದ ಹೊರಹೋಗುವಂತೆ ಜನರಿಗೆ ಹೇಳಿದ್ದಾರೆ. ಬ್ರಿಟ್ಟನ್ ಎಸಗಿದ ಕೃತ್ಯಗಳನ್ನು ನೋಡಿದರೆ ಜನರಿಗೆ ಆಘಾತವುಂಟಾಗಬಹುದು ಎಂದು ನ್ಯಾಯಾಧೀಶರು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬ್ರಿಟ್ಟನ್ 2014 ರಿಂದ ಪ್ರಾಣಿಗಳ ಮೇಲೆ “ಹಿಂಸಾತ್ಮಕ ಲೈಂಗಿಕ ಆಸಕ್ತಿಯನ್ನು” ಹೊಂದಿದ್ದಾನೆ. ಆತ ತನ್ನ ಬಳಿ ಇರುವ ಸಾಕುಪ್ರಾಣಿಗಳು ಮತ್ತು ಇತರ ಮಾಲೀಕರು ಬಿಟ್ಟುಕೊಟ್ಟ ನಾಯಿಗಳನ್ನು ಶೋಷಣೆ ಮಾಡಿದ್ದಾನೆ. ಪ್ರಯಾಣ ಅಥವಾ ಕೆಲಸದ ಬದ್ಧತೆಯ ಕಾರಣದಿಂದ ತಮ್ಮ ಸಾಕುಪ್ರಾಣಿಗಳನ್ನು ನೀಡುವ ಜನರನ್ನು ಬ್ರಿಟ್ಟನ್​​ ಹುಡುಕುತ್ತಿದ್ದು ಪ್ರಾಣಿಗಳ ಪಾಲನೆಯನ್ನು ಪಡೆಯಲು ಪ್ರಯತ್ನಿಸುತ್ತಿದ್ದರು ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದರು.

ಅವರು “ಸುಳ್ಳು ನಿರೂಪಣೆಗಳನ್ನು” ಬಳಸುತ್ತಾರೆ ಅಥವಾ ಹಿಂದಿನ ಮಾಲೀಕರಿಗೆ ತಮ್ಮ ಹಳೆಯ ಸಾಕುಪ್ರಾಣಿಗಳ ಅಪ್ಡೇಟ್​​ಗಾಗಿ ಹಳೆಯ ಫೋಟೋಗಳನ್ನು ಕಳುಹಿಸುತ್ತಾರೆ ಎಂದು ಅವರು ಹೇಳಿದರು.

ಪ್ರಾಣಿಗಳ ಮೇಲೆ ಈ ರೀತಿ ಅತ್ಯಾಚಾರ ಮಾಡುವಾಗ ಅದನ್ನು ಚಿತ್ರೀಕರಿಸಲು ಬೇಕಾದ ಉಪಕರಣಗಳನ್ನಿಟ್ಟು ಶಿಪ್ಪಿಂಗ್ ಕಂಟೇನರ್ ಅನ್ನು ಸಜ್ಜುಗೊಳಿಸಿದ್ದರು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಅವರು ಅದನ್ನು “ಚಿತ್ರಹಿಂಸೆ ಕೊಠಡಿ” ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿಆ ಒಂದು ಕಾರಣಕ್ಕಾಗಿ ಕೆನಡಾ ಭಾರತದ ಮೇಲೆ ಇಂತಹ ಆರೋಪ ಮಾಡುತ್ತಿದೆ: ಎಸ್ ಜೈಶಂಕರ್

ಪ್ರಾಣಿಶಾಸ್ತ್ರದಲ್ಲಿ ಪಿಎಚ್‌ಡಿ ಮತ್ತು ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾನಿಲಯದಲ್ಲಿ ಶೈಕ್ಷಣಿಕ ಸ್ಥಾನವನ್ನು ಹೊಂದಿರುವ ಬ್ರಿಟ್ಟನ್ ಅವರನ್ನು 2022 ರಲ್ಲಿ ನಾರ್ದರ್ನ್ ಪೊಲೀಸರು ಅಂತಹ ಒಂದು ವಿಡಿಯೊವನ್ನು ಕಂಡ ನಂತರ ಬಂಧಿಸಿದ್ದಾರೆ. ಡಿಸೆಂಬರ್‌ನಲ್ಲಿ ಇವರಿಗೆ ಶಿಕ್ಷೆಯಾಗಲಿದೆ.

ಬಂಧನಕ್ಕೂ ಮುನ್ನ 18 ತಿಂಗಳುಗಳಲ್ಲಿ ಬ್ರಿಟ್ಟನ್ ಶೋಷಣೆ ಮಾಡಿದ 42 ನಾಯಿಗಳ ಪೈಕಿ 39 ನಾಯಿಗಳು ಸತ್ತಿವೆ ಎಂದು ವರದಿ ಹೇಳಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ