AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದೇಶದಲ್ಲಿ ಬುರ್ಖಾ ಧರಿಸುವ ಮಹಿಳೆಯರಿಗೆ 83,000 ರೂ. ದಂಡ!

ಸ್ವಿಜರ್ಲೆಂಡ್​ನಲ್ಲಿ ಬುರ್ಖಾದ ಮೇಲಿನ ನಿಷೇಧವನ್ನು ಉಲ್ಲಂಘಿಸುವವರಿಗೆ ಭಾರತೀಯ ಮೌಲ್ಯದ ಪ್ರಕಾರ ಸುಮಾರು 83,000 ರೂ.ವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಈ ದೇಶದಲ್ಲಿ ಬುರ್ಖಾ ಧರಿಸುವ ಮಹಿಳೆಯರಿಗೆ 83,000 ರೂ. ದಂಡ!
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on:Oct 14, 2022 | 1:06 PM

Share

ನವದೆಹಲಿ: ಕೆಲವು ದೇಶಗಳಲ್ಲಿ ಬುರ್ಖಾ (Burqa) ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವಂತಿಲ್ಲ ಎಂಬ ನಿಯಮವಿದೆ. ಇನ್ನು ಕೆಲವು ದೇಶಗಳಲ್ಲಿ ಬುರ್ಖಾ ಧರಿಸಲು ಅವಕಾಶವೇ ಇಲ್ಲ. ಇದೀಗ ಸ್ವಿಜರ್ಲೆಂಡ್ ಸರ್ಕಾರ “ಬುರ್ಖಾ ನಿಷೇಧ”ವನ್ನು ಜಾರಿಗೊಳಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಸ್ವಿಸ್ ಸರ್ಕಾರವು ಸಂಸತ್ತಿಗೆ ಈ ಕುರಿತ ಕರಡು ಪ್ರತಿಯನ್ನು ಸಲ್ಲಿಸಿದೆ. ಆ ಕರಡಿನ ಪ್ರಕಾರ, ಸ್ವಿಜರ್ಲೆಂಡ್​ನಲ್ಲಿ ಬುರ್ಖಾದ ಮೇಲಿನ ನಿಷೇಧವನ್ನು ಉಲ್ಲಂಘಿಸುವವರಿಗೆ ಭಾರತೀಯ ಮೌಲ್ಯದ ಪ್ರಕಾರ ಸುಮಾರು 83,000 ರೂ.ವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಈ ಕರಡು ಕಾನೂನಿಗೆ 51.2% ಮತದಾರರು ಪ್ರಸ್ತಾವಿತ ನಿಷೇಧವನ್ನು ಅನುಮೋದಿಸಿದರೂ, ಅದು ಇಸ್ಲಾಮೋಫೋಬಿಕ್ ಮತ್ತು ಸ್ತ್ರೀದ್ವೇಷ ಎಂದು ಆ ಸಮಯದಲ್ಲಿ ಟೀಕಿಸಲಾಗಿತ್ತು. ಬಲಪಂಥೀಯ ಸ್ವಿಸ್ ಪೀಪಲ್ಸ್ ಪಾರ್ಟಿ ಸದಸ್ಯರು ಎಗರ್‌ಕಿಂಗರ್ ಸಮಿತಿಯನ್ನು ರಚಿಸಿದ್ದಾರೆ.

ಇದನ್ನೂ ಓದಿ: Shocking News: ಬುರ್ಖಾ ಧರಿಸಲಿಲ್ಲ ಎಂದು ಹಿಂದೂ ಹೆಂಡತಿಯ ಕತ್ತು ಸೀಳಿ ಕೊಂದ ಗಂಡ!

ನಿಷೇಧವನ್ನು ಬೆಂಬಲಿಸಿದವರು ಬುರ್ಖಾವನ್ನು ರಾಜಕೀಯ ಇಸ್ಲಾಂನ ತೀವ್ರತೆಯ ಸಂಕೇತವೆಂದು ವಿವರಿಸಿದ್ದಾರೆ. ಮುಸ್ಲಿಂ ಸಂಘಟನೆಗಳು ಇದನ್ನು ಜನಾಂಗೀಯ ದ್ವೇಷ ಎಂದು ಟೀಕಿಸಿದ್ದಾರೆ. ಅಲ್ಲದೆ, ಈ ಕುರಿತು ಕಾನೂನು ಕ್ರಮದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಸ್ವಿಜರ್ಲೆಂಡ್‌ನಲ್ಲಿರುವ ಶೇ. 5ರಷ್ಟು ಮುಸ್ಲಿಂ ಜನರು ಬಹುಪಾಲು ಟರ್ಕಿ, ಬೋಸ್ನಿಯಾ ಮತ್ತು ಕೊಸೊವೊದಿಂದ ಬಂದವರಾಗಿದ್ದಾರೆ.

ಈ ಕರಡು ಹಲವಾರು ಕಾನೂನು ವಿನಾಯಿತಿಗಳನ್ನು ಸಹ ಒಳಗೊಂಡಿದೆ. ವಿಮಾನಗಳು, ರಾಜತಾಂತ್ರಿಕ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಕ್ಕೆ ವಿನಾಯಿತಿ ನೀಡಲಾಗಿದೆ. ಆರೋಗ್ಯ, ಸುರಕ್ಷತೆ, ಹವಾಮಾನ ಮತ್ತು ಪ್ರಾದೇಶಿಕ ಪದ್ಧತಿಗಳಿಗೆ ಸಂಬಂಧಿಸಿದ ವ್ಯಾಪ್ತಿಗಳಲ್ಲಿ ಕೂಡ ಬುರ್ಖಾ ಧರಿಸಲು ಅನುಮತಿಯಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:03 pm, Fri, 14 October 22