ಮೊದಲ ಡೋಸ್​​ ಆಸ್ಟ್ರಾಜೆನೆಕಾ ಲಸಿಕೆ ಪಡೆದವರು ಎರಡನೇ ಡೋಸ್​ಗೆ ಫೈಜರ್​-ಬಯೋಎನ್​ಟೆಕ್ ಅಥವಾ ಮಾಡೆರ್ನಾ ಪಡೆಯಿರಿ

| Updated By: Skanda

Updated on: Jun 18, 2021 | 8:48 AM

Corona Vaccine: ಈ ಹಿಂದೆ ಮೊದಲ ಮತ್ತು ಎರಡನೇ ಡೋಸ್​ಗೆ ಒಂದೇ ಸಂಸ್ಥೆಯ ಲಸಿಕೆ ನೀಡುತ್ತಿದ್ದಾಗಲಿಗಿಂತಲೂ ಸದರಿ ಪ್ರಯೋಗವು ಹೆಚ್ಚು ಪರಿಣಾಮಕಾರಿ ಎನ್ನುವುದು ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಡಾ.ಶೆಲ್ಲಿ ಡೀಕ್ಸ್ ತಿಳಿಸಿದ್ದಾರೆ.

ಮೊದಲ ಡೋಸ್​​ ಆಸ್ಟ್ರಾಜೆನೆಕಾ ಲಸಿಕೆ ಪಡೆದವರು ಎರಡನೇ ಡೋಸ್​ಗೆ ಫೈಜರ್​-ಬಯೋಎನ್​ಟೆಕ್ ಅಥವಾ ಮಾಡೆರ್ನಾ ಪಡೆಯಿರಿ
ಕೊರೊನಾ ಲಸಿಕೆ (ಸಾಂಕೇತಿಕ ಚಿತ್ರ)
Follow us on

ಕೆನಡಾ: ಜಗತ್ತಿನ ಬಹುಪಾಲು ರಾಷ್ಟ್ರಗಳು ಕೊರೊನಾ ವೈರಾಣುವಿನ ವಿರುದ್ಧ ಹೋರಾಡಲು ಲಸಿಕೆಯೇ ಪ್ರಮುಖ ಅಸ್ತ್ರ ಎನ್ನುವುದನ್ನು ಒಪ್ಪಿಕೊಂಡಿವೆ. ಅದರಂತೆಯೇ, ಜನರಿಗೆ ಲಸಿಕೆ ನೀಡಲು ವಿಶೇಷ ಶ್ರಮ ವಹಿಸುತ್ತಿವೆ. ಇನ್ನೊಂದೆಡೆ, ತಜ್ಞರು ಕೊರೊನಾ ಲಸಿಕೆ ಬಗ್ಗೆ ನಿರಂತರ ಅಧ್ಯಯನ ನಡೆಸುತ್ತಿದ್ದು ದೇಹದಲ್ಲಿ ಲಸಿಕೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಏನು ಮಾಡಬೇಕು ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಈ ಅಧ್ಯಯನಗಳ ಫಲವಾಗಿ ಇದೀಗ ಕೆನಾಡದಲ್ಲಿ ಲಸಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸಲಹಾ ಸಮಿತಿಯು ಮಹತ್ತರ ವಿಚಾರವೊಂದನ್ನು ವ್ಯಕ್ತಪಡಿಸಿದ್ದು ಇನ್ನುಮುಂದೆ ಯಾರು ಆಸ್ಟ್ರಾಜೆನೆಕಾ ಕೊರೊನಾ ಲಸಿಕೆಯ ಮೊದಲ ಡೋಸ್​ ಪಡೆದಿರುತ್ತಾರೋ ಅವರು ಫೈಜರ್​-ಬಯೋಎನ್​ಟೆಕ್ ಅಥವಾ ಮಾಡೆರ್ನಾ ಲಸಿಕೆಯನ್ನು ಎರಡನೇ ಡೋಸ್​ ವೇಳೆಗೆ ಪಡೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.

ಜೂನ್​ 1ರಂದು ಈ ಬಗ್ಗೆ ಮಾತನಾಡಿದ್ದ ತಜ್ಞರು ಮೊದಲು ಆಸ್ಟ್ರಾಜೆನೆಕಾ ಪಡೆದವರು ಎರಡನೇ ಬಾರಿಗೆ ಫೈಜರ್​-ಬಯೋಎನ್​ಟೆಕ್ ಅಥವಾ ಮಾಡೆರ್ನಾ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದ್ದರು. ಆದರೆ, ಇದೀಗ ಮೊದಲ ಡೋಸ್​ ಆಸ್ಟ್ರಾಜೆನೆಕಾ ಲಸಿಕೆ ಪಡೆದರೆ ಎರಡನೇ ಬಾರಿಗೆ ಫೈಜರ್​-ಬಯೋಎನ್​ಟೆಕ್ ಅಥವಾ ಮಾಡೆರ್ನಾ ಪಡೆಯುವುದಕ್ಕೆ ಪ್ರಾಶಸ್ತ್ಯ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ.

ಈ ಹಿಂದೆ ಮೊದಲ ಮತ್ತು ಎರಡನೇ ಡೋಸ್​ಗೆ ಒಂದೇ ಸಂಸ್ಥೆಯ ಲಸಿಕೆ ನೀಡುತ್ತಿದ್ದಾಗಲಿಗಿಂತಲೂ ಸದರಿ ಪ್ರಯೋಗವು ಹೆಚ್ಚು ಪರಿಣಾಮಕಾರಿ ಎನ್ನುವುದು ಅಧ್ಯಯನದಲ್ಲಿ ಕಂಡುಬಂದಿದೆ ಎಂದು ಡಾ.ಶೆಲ್ಲಿ ಡೀಕ್ಸ್ ತಿಳಿಸಿದ್ದಾರೆ. ಅಲ್ಲದೇ ಈಗಾಗಲೇ ಎರಡು ಡೋಸ್​ ಆಸ್ಟ್ರಾಜೆನೆಕಾ ಲಸಿಕೆ ತೆಗೆದುಕೊಂಡವರು ತಾವು ಅಸುರಕ್ಷಿತ ಎಂದು ಭಯಪಡಬೇಕಾದ ಅವಶ್ಯಕತೆ ಇಲ್ಲ. ಅದು ಕೂಡಾ ಉತ್ತಮ ಪ್ರತಿಕಾಯಗಳನ್ನು ವೃದ್ಧಿ ಮಾಡಿರುತ್ತದೆ. ಹೀಗಾಗಿ ಮತ್ತೆ ಮೂರನೇ ಡೋಸ್​ ಮೊರೆಹೋಗುವ ತುರ್ತು ಸದ್ಯಕ್ಕಿಲ್ಲ ಎಂದಿದ್ದಾರೆ.

ಕೆನಾಡದಲ್ಲಿ ಈಗಾಗಲೇ ಸುಮಾರು 2.5ಕೋಟಿ ಜನರು ಕನಿಷ್ಠ ಪಕ್ಷ ಮೊದಲ ಡೋಸ್​ ಲಸಿಕೆಯನ್ನಾದರೂ ಪಡೆದಿದ್ದು, ಅಂದಾಜು 60 ಲಕ್ಷ ಮಂದಿ ಎರಡೂ ಡೋಸ್​ ಪೂರ್ಣಗೊಳಿಸಿದ್ದಾರೆ. ಜೂನ್​ 5ರ ಅಂಕಿ ಅಂಶಗಳ ಪ್ರಕಾರ 20ಲಕ್ಷಕ್ಕೂ ಅಧಿಕ ಮಂದಿ ಆಸ್ಟ್ರಾಜೆನೆಕಾ ಲಸಿಕೆಯ ಮೊದಲ ಡೋಸ್ ಪಡೆದಿದ್ದು ಸುಮಾರು 15,186 ಜನರು ಎರಡೂ ಡೋಸ್​ ಆಸ್ಟ್ರಾಜೆನೆಕಾ ಲಸಿಕೆ ಪಡೆದಿದ್ದಾರೆ ಎನ್ನುವುದು ತಿಳಿದುಬಂದಿದೆ.

ಇದನ್ನೂ ಓದಿ:
Corona Vaccine: ಡೆಲ್ಟಾ ಮಾದರಿ ವಿರುದ್ಧ ಕೊವಿಶೀಲ್ಡ್​ ಮೊದಲ ಡೋಸ್​ ಶೇ.61ರಷ್ಟು ಪರಿಣಾಮಕಾರಿ: ಡಾ.ಎನ್​.ಕೆ ಅರೋರಾ 

ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಲಸಿಕೆ ಪಡೆದವರಿಗೆ ಶುಭಸುದ್ದಿ; ಮೊದಲ ಡೋಸ್​ನಲ್ಲೇ ಹೆಚ್ಚು ಪ್ರತಿಕಾಯ ಸೃಷ್ಟಿ ಎಂದ ಅಧ್ಯಯನ

(Canada preferred Pfizer BioNtech or Moderna vaccine for Second Dose after taking AstraZeneca first new Guidelines on Corona Vaccine)

Published On - 8:47 am, Fri, 18 June 21