ಭಾರತದಲ್ಲಿ ‘ಬೆದರಿಕೆ ಅಥವಾ ಕಿರುಕುಳ’ದ ಸಾಧ್ಯತೆಯ ಬಗ್ಗೆ ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿದ ಕೆನಡಾ
ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಅವರು ಶುಕ್ರವಾರದ ನಂತರ ದೇಶದಲ್ಲಿ ಉಳಿದುಕೊಂಡರೆ ರಾಜತಾಂತ್ರಿಕ ವಿನಾಯಿತಿಯನ್ನು ಕಸಿದುಕೊಳ್ಳಲಾಗುವುದು ಎಂದು ಭಾರತ ನೀಡಿದ ಆದೇಶ ನಂತರ ರಾಜತಾಂತ್ರಿಕರು ಕೆನಡಾಕ್ಕೆ ಮರಳುತ್ತಿದ್ದಾರೆ. ಮುಂದಿನ ಸೂಚನೆ ಬರುವವರೆಗೆ ಕಾನ್ಸುಲೇಟ್‌ಗಳಲ್ಲಿ ಎಲ್ಲಾ ವೈಯಕ್ತಿಕ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಾವಾ ಅಕ್ಟೋಬರ್ 20: ಶುಕ್ರವಾರ ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಕೆನಡಾವು (Canada) “ಕೆನಡಾ ವಿರೋಧಿ ಪ್ರತಿಭಟನೆಗಳು” ಮತ್ತು “ಬೆದರಿಕೆ ಅಥವಾ ಕಿರುಕುಳ” (harassment)ಸಾಧ್ಯತೆಯ ಬಗ್ಗೆ ನಾಗರಿಕರಿಗೆ ಪ್ರಯಾಣ ಸಲಹಾ ಎಚ್ಚರಿಕೆ ನೀಡಿದೆ. ಬೆಂಗಳೂರು, ಚಂಡೀಗಢ ಮತ್ತು ಮುಂಬೈನಲ್ಲಿರುವ ಕೆನಡಾದ ಕಾನ್ಸುಲೇಟ್ ಜನರಲ್‌ಗಳು ವೈಯಕ್ತಿಕವಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದಾರೆ ಎಂದು ಸಲಹೆ ತಿಳಿಸಿದೆ. ನವದೆಹಲಿಯಲ್ಲಿರುವ ಕೆನಡಾದ ಹೈ ಕಮಿಷನ್‌ನಿಂದ ನಾಗರಿಕರು ಕಾನ್ಸುಲರ್ ನೆರವು ಮತ್ತು ಹೆಚ್ಚಿನ ಕಾನ್ಸುಲರ್ ಮಾಹಿತಿಯನ್ನು ಪಡೆಯಬಹುದು ಎಂದು ಅದು ಹೇಳಿದೆ.
ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಅವರು ಶುಕ್ರವಾರದ ನಂತರ ದೇಶದಲ್ಲಿ ಉಳಿದುಕೊಂಡರೆ ರಾಜತಾಂತ್ರಿಕ ವಿನಾಯಿತಿಯನ್ನು ಕಸಿದುಕೊಳ್ಳಲಾಗುವುದು ಎಂದು ಭಾರತ ನೀಡಿದ ಆದೇಶ ನಂತರ ರಾಜತಾಂತ್ರಿಕರು ಕೆನಡಾಕ್ಕೆ ಮರಳುತ್ತಿದ್ದಾರೆ. ಮುಂದಿನ ಸೂಚನೆ ಬರುವವರೆಗೆ ಕಾನ್ಸುಲೇಟ್‌ಗಳಲ್ಲಿ ಎಲ್ಲಾ ವೈಯಕ್ತಿಕ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸುರಕ್ಷತೆ ಮತ್ತು ಭದ್ರತೆ ವಿಭಾಗದ ಅಡಿಯಲ್ಲಿನ ಸಲಹೆಯು “ಕೆನಡಾ ಮತ್ತು ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು” ಉಲ್ಲೇಖಿಸಿದೆ. ಸಾಂಪ್ರದಾಯಿಕ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕೆನಡಾದ ಬಗ್ಗೆ ಪ್ರತಿಭಟನೆಗಳು ಮತ್ತು ಕೆಲವು ನಕಾರಾತ್ಮಕ ಭಾವನೆಗಳಿಗೆ ಕರೆಗಳಿವೆ ಎಂದು ಅದರಲ್ಲಿ ಹೇಳಿದೆ. ಕೆನಡಾ ವಿರೋಧಿ ಪ್ರತಿಭಟನೆಗಳು ಸೇರಿದಂತೆ ಪ್ರದರ್ಶನಗಳು ಸಂಭವಿಸಬಹುದು ಮತ್ತು ಕೆನಡಿಯನ್ನರು ಬೆದರಿಕೆ ಅಥವಾ ಕಿರುಕುಳಕ್ಕೆ ಒಳಗಾಗಬಹುದು” ಎಂದು ಸಲಹಾ ಪ್ರಕಟಣೆಲ್ಲಿ ಹೇಳಿದೆ. ಇದನ್ನು ಒಟ್ಟಾವಾದಲ್ಲಿ ಜೋಲಿ ಅವರ ಪತ್ರಿಕಾಗೋಷ್ಠಿಯ ನಂತರ ಅಪ್ಡೇಟ್ ಮಾಡಲಾಗಿದೆ.
ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ, ನೀವು ಅಪರಿಚಿತರೊಂದಿಗೆ ಹೆಚ್ಚು ಬೆರೆಯಬಾರದು. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳಬಾರದು. ಸಾರ್ವಜನಿಕ ಸಾರಿಗೆ ಸೇರಿದಂತೆ ಜನನಿಬಿಡ ಪ್ರದೇಶಗಳನ್ನು ತಪ್ಪಿಸಿ. ನೀವು ಯಾವಾಗಲೂ ಯಾರೊಂದಿಗಾದರೂ ಪ್ರಯಾಣಿಸಬೇಕು ಮತ್ತು ನಿಮ್ಮ ಪ್ರಯಾಣದ ಯೋಜನೆಗಳ ಬಗ್ಗೆ ಸ್ನೇಹಿತರಿಗೆ ಅಥವಾ ಕುಟುಂಬದ ಸದಸ್ಯರಿಗೆ ತಿಳಿಸಬೇಕು ಎಂದು ಈ ಸಲಹಾ ಸೂಚನೆ ಹೇಳಿದೆ.
ಇದನ್ನೂ ಓದಿ: ಹಮಾಸ್ ಮತ್ತು ವ್ಲಾಡಿಮಿರ್ ಪುಟಿನ್ ಇಬ್ಬರೂ ನೆರೆಯ ಪ್ರಜಾಪ್ರಭುತ್ವಗಳನ್ನು ನಾಶಮಾಡಲು ಬಯಸುತ್ತಾರೆ: ಜೋ ಬೈಡನ್
ಜೂನ್ 18 ರಂದು ಖಲಿಸ್ತಾನಿ ವ್ಯಕ್ತಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ಏಜೆಂಟರಿಗೆ ಸಂಭಾವ್ಯ ಸಂಪರ್ಕವಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್ 18 ರಂದು ನೀಡಿದ ಹೇಳಿಕೆಯ ನಂತರ ಭಾರತವು ಕೆನಡಿಯನ್ನರಿಗೆ ವೀಸಾಗಳನ್ನು ಪ್ರಕ್ರಿಯೆಗೊಳಿಸುವುದನ್ನು ಅನಿರ್ದಿಷ್ಟವಾಗಿ ನಿಲ್ಲಿಸಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:57 am, Fri, 20 October 23