ಪ್ರಪಂಚ ಎಷ್ಟೇ ಅಭಿವೃದ್ಧಿಯತ್ತ ಸಾಗಿದರೂ, ಎಷ್ಟೇ ಬದಲಾದರೂ ಕೆಲವೊಂದು ದೇಶಗಳಲ್ಲಿ ಇನ್ನೂ ಕೂಡ ಕೆಲವೊಂದು ಆಚರಣೆಗಳು ಜಾರಿಯಲ್ಲಿವೆ. ಆದ್ರೆ ಇಲ್ಲಿ ವಿಪರ್ಯಾಸವೆಂಬಂತೆ ಎಲ್ಲಾ ರೀತಿಯ ಸಮಸ್ಯೆಗಳಲ್ಲಿ ಮೊದಲು ಬಲಿಯಾಗುವುದೇ ಹೆಣ್ಣು ಮಕ್ಕಳು. ದಕ್ಷಿಣ ಸುಡಾನ್‌ನಲ್ಲಿ(South Sudan) ಹೆಣ್ಣು ಹೆತ್ತ ಕುಟುಂಬಗಳು ತಮ್ಮ ಕುಟುಂಬದ ನಿರ್ವಹಣೆಗಾಗಿ, ಹಸುಗಳಿಗಾಗಿ ಪ್ರತಿಯಾಗಿ ಹೆಣ್ಣು ಮಕ್ಕಳನ್ನು ವಯಸ್ಸಾದವರಿಗೆ ಬಾಲ್ಯ ವಿವಾಹ(Child marriage) ಮಾಡಿಕೊಡುತ್ತಿದ್ದಾರೆ. ಅಲ್ಲಿನ ಹೆಣ್ಣು ಮಕ್ಕಳು ಈಗಲೂ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯಿಂದ ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ.
ಅಲ್ಲಿನ ಒಬ್ಬ ಕಾರ್ಯಕರ್ತೆ ಹೇಳುವಂತೆ, ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆ ಮಾಡಿಕೊಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಆ ಹುಡುಗಿಯ ಕುಟುಂಬಕ್ಕೆ ವ್ಯಕ್ತಿಯ ಕುಟುಂಬಸ್ಥರು ಅಥವಾ ಆ ವ್ಯಕ್ತಿ ಹಸುಗಳನ್ನು ನೀಡುತ್ತಾನೆ. ಇದರಿಂದ ಆ ಹುಡುಗಿಯ ಕುಟುಂಬ ತಮ್ಮ ಜೀವನ ನಡೆಸಲು ಸಹಾಯವಾಗುತ್ತೆ. ಈ ರೀತಿ ತಮ್ಮ ಹೆಣ್ಣು ಮಕ್ಕಳನ್ನು ಮದುವೆಯ ಮೂಲಕ ಮಾರಾಟ ಮಾಡಿ ಹೆಣ್ಣು ಮಕ್ಕಳ ಕುಟುಂಬಗಳು ಬಡತನದಿಂದ ಜೀವನ ನಡೆಸುತ್ತಿವೆ ಎಂದಿದ್ದು ಈ ಸಮಸ್ಯೆ ಬಗ್ಗೆ ಪೋಪ್ ಫ್ರಾನ್ಸಿಸ್ ಅವರ ಭೇಟಿ ವೇಳೆ ಪ್ರಸ್ತಾಪಿಸಲು ಕಾರ್ಯಕರ್ತೆಯೊಬ್ಬರು ಮುಂದಾಗಿದ್ದಾರೆ. ಆದ್ರೆ ಅನಾರೋಗ್ಯದ ಹಿನ್ನೆಲೆ ಪೋಪ್ ಫ್ರಾನ್ಸಿಸ್ ತಮ್ಮ ಭೇಟಿಯನ್ನು ಮುಂದೂಡಿದ್ದಾರೆ. ಇದನ್ನೂ ಓದಿ: ‘ನಿಮ್ಮ ಖುಷಿಯ ಕ್ಷಣದಲ್ಲಿ ನಾವು ಖಂಡಿತವಾಗಿಯೂ ಇರಲಿಲ್ಲ’: ವೈರಲ್ ಆಯ್ತು ಕಾಂಡೋಮ್ ಕಂಪನಿಯ ಟ್ವೀಟ್
ಒಂದು ಹುಡುಗಿಯ ಬೆಲೆಯನ್ನು ಆಕೆಯ ತಂದೆ ಮತ್ತು ಆಕೆಯ ಪತಿಯಾಗುವವನ ನಡುವಿನ ಮಾತುಕತೆಗಳಲ್ಲಿ ನಿರ್ಧರಿಸಲಾಗುತ್ತದೆ. ಮತ್ತು ಸಾಮಾನ್ಯವಾಗಿ ಮದುವೆಯಾದ ಬಳಿಕ ಪತಿ, ಹೆಂಡತಿಯ ಮನೆಯವರಿಗೆ 50 ರಿಂದ 100 ಹಸುಗಳನ್ನು ನೀಡುತ್ತಾನೆ. ಆದ್ರೆ ಹೆಣ್ಣು ಸುಂದರವಾಗಿ ಆಕರ್ಷಕವಾಗಿದ್ದರೆ ಮತ್ತು ಉನ್ನತ ಸಾಮಾಜಿಕ ಸ್ಥಾನಮಾನದ ಹುಡುಗಿ ಆದ್ರೆ 200 ಹಸುಗಳನ್ನು ನೀಡಬೇಕು. ಇತ್ತೀಚೆಗೆ ಕುಖ್ಯಾತ ಪ್ರಕರಣವೊಂದರಲ್ಲಿ ಒಂದು ಹುಡುಗಿಯನ್ನು 520 ಹಸುಗಳು ಮತ್ತು ಕಾರುಗಳನ್ನು ನೀಡಿ ಮದುವೆ ಮಾಡಿಕೊಡಲಾಗಿದೆ.
ಇನ್ನು ದಕ್ಷಿಣ ಸುಡಾನ್ನಲ್ಲಿ 17 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರನ್ನು ಮದುವೆಯಾಗುವುದನ್ನು ನಿಷೇಧಿಸಲಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಘಟನೆಗಳು ಅಪರೂಪವಾಗಿ ಕಾಣಬಹುದು. ದಕ್ಷಿಣ ಸುಡಾನ್ 2011 ರಲ್ಲಿ ಸುಡಾನ್‌ನಿಂದ ಸ್ವಾತಂತ್ರ್ಯಗೊಂಡು ಅಸ್ತಿತ್ವಕ್ಕೆ ಬಂದಿದೆ. ಇದಾದ ನಂತರ ದೇಶದ 12 ಮಿಲಿಯನ್ ಜನರಿಗೆ ಸಮೃದ್ಧಿ ಮತ್ತು ಶಾಂತಿಗಾಗಿ ವ್ಯಾಪಕ ಭರವಸೆಯನ್ನು ತಂದಿತು, ಆದರೆ ಇಲ್ಲಿ ಮಹಿಳೆಯರು ಆಗಾಗ್ಗೆ ಸಂಘರ್ಷ-ಸಂಬಂಧಿತ ಲೈಂಗಿಕ ಹಿಂಸೆಗೆ ಬಲಿಯಾಗುತ್ತಿದ್ದಾರೆ.
Published On - 9:26 pm, Mon, 27 June 22