China Covid: ದೈನಂದಿನ ಕೋವಿಡ್ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡುವಂತೆ ಚೀನಾಗೆ ಡಬ್ಲ್ಯುಎಚ್ಒ ತಾಕೀತು
ಚೀನಾದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಪರಿಸ್ಥಿತಿ ಶೋಚನೀಯವಾಗಿದೆ. ಕೊರೊನಾ ಸ್ಥಿತಿಗತಿ ಬಗ್ಗೆ ನಿಖರ ಮಾಹಿತಿ ನೀಡುವಂತೆ ಚೀನಾಗೆ ಡಬ್ಲ್ಯುಎಚ್ಒ ತಾಕೀತು ಮಾಡಿದೆ.
ಜಿನಿವಾ (ಸ್ವಿಟ್ಜರ್ಲೆಂಡ್): ಚೀನಾದಲ್ಲಿ ಮತ್ತೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು (Covid Cases) ಇದೀಗ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಚೀನಾದಲ್ಲಿ (China Coronavirus Variant) ಕಾಣಿಸಿಕೊಂಡಿರುವ ಕೋವಿಡ್ನ ಬಿಎಫ್.7 (BF.7) ಉಪರೂಪಾಂತರಿ ಕೊವಿಡ್ ಪ್ರಕರಣಗಳ ಭಾರೀ ಏರಿಕೆಗೆ ಕಾರಣವಾಗಬಹುದು ಎನ್ನಲಾಗುತ್ತಿದೆ. ಚೀನಾದಲ್ಲಿ ಕೊರೊನಾ ಸ್ಥಿತಿಗತಿ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು, ಕೊರೊನಾ ಸ್ಥಿತಿಗತಿ ಬಗ್ಗೆ ನಿಖರ ಮಾಹಿತಿ ನೀಡುವಂತೆ ಸೂಚನೆ ನೀಡಿದೆ. ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಪರಿಸ್ಥಿತಿ ಶೋಚನೀಯವಾಗಿದೆ. ದೈನಂದಿನ ಕೋವಿಡ್ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡುವಂತೆ ಚೀನಾಗೆ ಡಬ್ಲ್ಯುಹೆಚ್ಒ (WHO) ತಾಕೀತು ಮಾಡಿದೆ.
ಕೊರೊನಾವೈರಸ್‌ನ ಬಿಎ.5 ಉಪರೂಪಾಂತರಿ ಕೂಡ ಮನುಷ್ಯನ ಮೆದುಳಿನ ಮೇಲೆ ದಾಳಿ ಮಾಡಲು ವಿಕಸನಗೊಳ್ಳುತ್ತಿರಬಹುದು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜ್ಞಾನಿಗಳ ಹೊಸ ಅಧ್ಯಯನವು ಕೊವಿಡ್ ವೈರಸ್‌ಗಳು ವಿಕಸನಗೊಂಡಂತೆ ಕಡಿಮೆ ಅಪಾಯಕಾರಿಯಾಗುತ್ತವೆ ಎಂಬ ಊಹೆಗಳಿಗೆ ಸವಾಲು ಹಾಕಿದೆ. ಕೊವಿಡ್ -19 ಮಾನವನ ದೇಹದ ಮೇಲೆ ದಾಳಿ ಮಾಡುವ ಮಾರ್ಗವನ್ನು ಬದಲಾಯಿಸುತ್ತಿರಬಹುದು ಮತ್ತು ಮನುಷ್ಯನ ಉಸಿರಾಟದ ವ್ಯವಸ್ಥೆಯ ಬದಲಿಗೆ ಮೆದುಳನ್ನು ಹೆಚ್ಚು ಗುರಿಯಾಗಿಸಿಕೊಳ್ಳುತ್ತಿರಬಹುದು ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಇದನ್ನೂ ಓದಿ: Covid-19 4th Wave: ಚೀನಾದ ಹೊಸ ಕೊವಿಡ್ ರೂಪಾಂತರಿ ಮನುಷ್ಯನ ಮೆದುಳಿನ ಮೇಲೆ ದಾಳಿ ಮಾಡುತ್ತದಾ?; ತಜ್ಞರು ಹೇಳೋದಿಷ್ಟು
ಹಿಂದಿನ BA.1 ಸಬ್‌ವೇರಿಯಂಟ್‌ಗೆ ಹೋಲಿಸಿದರೆ ಚೀನಾದಲ್ಲಿ ಇದೀಗ ಕಾಣಿಸಿಕೊಂಡಿರುವ BF.7 ಉಪರೂಪಾಂತರಿ ಹೆಚ್ಚು ಆತಂಕಕಾರಿಯಾಗಿದೆ. ಇದಕ್ಕೂ ಹಿಂದೆ ಇದ್ದ BA.5 ಎಂಬ ಸಬ್‌ವೇರಿಯಂಟ್ ಇಲಿಗಳ ಮಿದುಳುಗಳು ಮತ್ತು ಮಾನವ ಮೆದುಳಿನ ಅಂಗಾಂಶಗಳಿಗೆ ತೀವ್ರ ಹಾನಿಯನ್ನುಂಟುಮಾಡಿದೆ ಎಂದು ಆಸ್ಟ್ರೇಲಿಯಾ ಮತ್ತು ಫ್ರಾನ್ಸ್‌ನ ಸಂಶೋಧಕರು ಹೇಳಿದ್ದಾರೆ. ಮೆದುಳಿನ ಮೇಲಿನ ದಾಳಿಯು ಮೆದುಳಿನ ಉರಿಯೂತ, ತೂಕ ಕಡಿಮೆಯಾಗುವುದು ಮತ್ತು ಸಾವಿಗೂ ಕಾರಣವಾಗಿದೆ ಎಂದು ಚೀನಾ ಮೂಲದ ದಿನಪತ್ರಿಕೆ ವರದಿ ಮಾಡಿದೆ.
ವಿದೇಶದ ಮತ್ತಷ್ಟು ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:41 am, Sat, 31 December 22