ಚೀನಾ ಏರ್​ಶೋ ಮೇಲೆ ಕೊರೊನಾ ಕರಿಛಾಯೆ: ವೈಮಾನಿಕ ಪ್ರದರ್ಶನ ಕ್ಯಾನ್ಸಲ್​

| Updated By: ಸಾಧು ಶ್ರೀನಾಥ್​

Updated on: Sep 10, 2020 | 1:29 PM

ಇಡೀ ಜಗತ್ತನ್ನೇ ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟಿರುವ ಕ್ರೂರಿ ಕೊರೊನಾ ವೈರಸ್​ ತನ್ನ ತವರೂರಾದ ಚೀನಾವನ್ನು ಸಹ ಬಿಡದೆ ಕಾಡುತ್ತಿದೆ. ಇದೀಗ, ಮಹಾಮಾರಿಯ ಭೀತಿಯಿಂದ ಚೀನಾ ಸರ್ಕಾರ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಪ್ರದರ್ಶನವನ್ನು ರದ್ದುಗೊಳಿಸಿದೆ. ದ್ವೈವಾರ್ಷಿಕ ವಿಮಾನಯಾನ ಪ್ರದರ್ಶನವಾಗಿರುವ ಈ ಕಾರ್ಯಕ್ರಮವನ್ನು ಮುಂದಿನ ನವೆಂಬರ್​ನಲ್ಲಿ ಆಯೋಜಿಸಲಾಗಿತ್ತು. ಆದರೆ, ಕೊರೊನಾ ಆರ್ಭಟದಿಂದ ಅಧಿಕಾರಿಗಳು ಕಾರ್ಯಕ್ರಮವನ್ನು ರದ್ದುಪಡಿಸಿದ್ದು ಮುಂದಿನ ಪ್ರದರ್ಶನ 2022ರಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. Aero India 2020 Bengaluru  ಎಂದಿನಂತೆ ನಡೆಯಲಿದೆ ಚೀನಾದ ಈ ಬೃಹತ್ ಹಾಗೂ […]

ಚೀನಾ ಏರ್​ಶೋ ಮೇಲೆ ಕೊರೊನಾ ಕರಿಛಾಯೆ: ವೈಮಾನಿಕ ಪ್ರದರ್ಶನ ಕ್ಯಾನ್ಸಲ್​
Follow us on

ಇಡೀ ಜಗತ್ತನ್ನೇ ತನ್ನ ಕಪಿಮುಷ್ಟಿಯಲ್ಲಿ ಹಿಡಿದಿಟ್ಟಿರುವ ಕ್ರೂರಿ ಕೊರೊನಾ ವೈರಸ್​ ತನ್ನ ತವರೂರಾದ ಚೀನಾವನ್ನು ಸಹ ಬಿಡದೆ ಕಾಡುತ್ತಿದೆ.

ಇದೀಗ, ಮಹಾಮಾರಿಯ ಭೀತಿಯಿಂದ ಚೀನಾ ಸರ್ಕಾರ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನಯಾನ ಪ್ರದರ್ಶನವನ್ನು ರದ್ದುಗೊಳಿಸಿದೆ. ದ್ವೈವಾರ್ಷಿಕ ವಿಮಾನಯಾನ ಪ್ರದರ್ಶನವಾಗಿರುವ ಈ ಕಾರ್ಯಕ್ರಮವನ್ನು ಮುಂದಿನ ನವೆಂಬರ್​ನಲ್ಲಿ ಆಯೋಜಿಸಲಾಗಿತ್ತು. ಆದರೆ, ಕೊರೊನಾ ಆರ್ಭಟದಿಂದ ಅಧಿಕಾರಿಗಳು ಕಾರ್ಯಕ್ರಮವನ್ನು ರದ್ದುಪಡಿಸಿದ್ದು ಮುಂದಿನ ಪ್ರದರ್ಶನ 2022ರಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

Aero India 2020 Bengaluru  ಎಂದಿನಂತೆ ನಡೆಯಲಿದೆ
ಚೀನಾದ ಈ ಬೃಹತ್ ಹಾಗೂ ಪ್ರತಿಷ್ಠಿತ ವಿಮಾನಯಾನ ಪ್ರದರ್ಶನದಲ್ಲಿ ದೇಶ ವಿದೇಶಗಳಿಂದ ನೂರಾರು ವೈಮಾನಿಕ ಸಂಸ್ಥೆಗಳು ಮತ್ತು ಕಂಪನಿಗಳು ಭಾಗಿಯಾಗುತ್ತಾರೆ. ಗಮನಾರ್ಹವೆಂದ್ರೆ ಭಾರತದಲ್ಲಿಯೂ ಇಂತಹ ಪ್ರತಿಷ್ಠಿತ ವಿಮಾನಯಾನ ಪ್ರದರ್ಶನ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಆಯೋಜಿಸಲಾಗಿದೆ.