AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ಬಾಲಾಪರಾಧಿಗಳ ವಯೋಮಿತಿ 14 ರಿಂದ 12 ವರ್ಷಕ್ಕೆ ಇಳಿಕೆ

ಈ ಮೊದಲು, ಚೀನಾದಲ್ಲಿ 14ರಿಂದ 16 ವರ್ಷದವರೆಗಿನ ಮಕ್ಕಳಿಗೆ ಕ್ರಿಮಿನಲ್ ಅಪರಾಧದ ಶಿಕ್ಷೆ ಅನ್ವಯವಾಗುತ್ತಿತ್ತು. ಇದೀಗ ಮಕ್ಕಳ ಅಪರಾಧದ ವಯಸ್ಸನ್ನು 12ರಿಂದ 14 ವರ್ಷದೊಳಗೆ ತರಲಾಗಿದೆ.

ಚೀನಾದಲ್ಲಿ ಬಾಲಾಪರಾಧಿಗಳ ವಯೋಮಿತಿ 14 ರಿಂದ 12 ವರ್ಷಕ್ಕೆ ಇಳಿಕೆ
ಈ ಮೊದಲು, ಚೀನಾದಲ್ಲಿ 14ರಿಂದ 16 ವರ್ಷದವರೆಗಿನ ಮಕ್ಕಳಿಗೆ ಕ್ರಿಮಿನಲ್ ಅಪರಾಧದ ಶಿಕ್ಷೆ ಅನ್ವಯವಾಗುತ್ತಿತ್ತು.
TV9 Web
| Edited By: |

Updated on:Apr 06, 2022 | 11:13 PM

Share

ಬೀಜಿಂಗ್: ಚೀನಾ ದೇಶ ತನ್ನ ಅಪರಾಧ ಕಾನೂನಿನಲ್ಲಿ ಕೆಲ ಬದಲಾವಣೆಗಳನ್ನು ತರಲು ಮುಂದಾಗಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಂದ ನಡೆಯುತ್ತಿರುವ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಲಾಗಿದೆ. ಈ ಮೊದಲು 14 ವರ್ಷಗಳಿಗಿಂತ ದೊಡ್ಡವರು ಅಪರಾಧ ಮಾಡಿದರೆ ಅಂಥವರನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತಿತ್ತು. ಈಗ ಅಪರಾಧದ ವಯಸ್ಸಿನ ಮಿತಿಯನ್ನು 12 ವರ್ಷಗಳಿಗೆ ಇಳಿಕೆ ಮಾಡಲಾಗಿದೆ.

ಚೀನಾದ ಕೆಲ ಅಪರಾಧಗಳಿಗೆ ಈ ನಿಯಮ ಅನ್ವಯವಾಗಲಿದೆ. ಉದ್ದೇಶಪೂರ್ವಕ ಹತ್ಯೆ, ಹಲ್ಲೆಯಿಂದ ಆದ ಸಾವು ಅಥವಾ ಅಂಗವೈಕಲ್ಯ, ಹಿಂಸಾಚಾರ ಕೃತ್ಯಗಳು ಅಪರಾಧವೆಂದು ಪರಿಗಣನೆಯಾಗಲಿದೆ. ಈ ಅಪರಾಧಗಳಿಗೆ ಹೊರತಾಗಿ ಇತರ ಕೃತ್ಯಗಳನ್ನು ಎಸಗಿದರೆ, ಅಂತಹ ಮಕ್ಕಳಿಗೆ ಶಿಕ್ಷೆ ನೀಡಲಾಗುವುದಿಲ್ಲ. ಬದಲಾಗಿ, ಅವರಿಗೆ ತಪ್ಪನ್ನು ತಿದ್ದಿಕೊಳ್ಳುವಂತೆ ಶಿಕ್ಷಣ ನೀಡಲಾಗುವುದು ಎಂದು ತಿಳಿಸಲಾಗಿದೆ.

ಈ ಮೊದಲು, ಚೀನಾದಲ್ಲಿ 14ರಿಂದ 16 ವರ್ಷದವರೆಗಿನ ಮಕ್ಕಳಿಗೆ ಕ್ರಿಮಿನಲ್ ಅಪರಾಧದ ಶಿಕ್ಷೆ ಅನ್ವಯವಾಗುತ್ತಿತ್ತು. ಇದೀಗ ಮಕ್ಕಳ ಅಪರಾಧದ ವಯಸ್ಸನ್ನು 12ರಿಂದ 14 ವರ್ಷದೊಳಗೆ ತರಲಾಗಿದೆ. ಚೀನಾದಲ್ಲಿ ಇತ್ತೀಚೆಗೆ ಕೆಲವಾರು ಬಾಲಾಪರಾಧಗಳು ದಾಖಲಾದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಚೀನಾ ಶಾಸಕಾಂಗ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್​ನ ಸ್ಟಾಂಡಿಂಗ್ ಕಮಿಟಿಯಲ್ಲಿ ಈ ತಿದ್ದುಪಡಿ ಅಂಗೀಕಾರವಾಗಿದ್ದು, ಮಾರ್ಚ್ 1ರಿಂದ ಜಾರಿಗೆ ಬರಲಿದೆ. ನೂತನ ಕಾನೂನಿನ ಪ್ರಕಾರ ಗಂಭೀರ ಅಪರಾಧಗಳಲ್ಲಿ ಬಾಲಕರನ್ನೇ ಅಪರಾಧಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.

ಭಾರತದ ಕಾಯ್ದೆಯ ಪ್ರಕಾರ 18 ವರ್ಷಗಳಿಗಿಂತ ಕಡಿಮೆ ಇರುವವರನ್ನು ಬಾಲಾಪರಾಧಿ ಎಂದು ಪರಿಗಣಿಸಲಾಗುತ್ತಿದೆ. ಅದೇ ಕಾರಣಕ್ಕೆ ದೆಹಲಿ ನಿರ್ಭಯಾ ಪ್ರಕರಣದ ಒಬ್ಬ ಆರೋಪಿ ಶಿಕ್ಷೆಯಿಂದ ಪಾರಾಗಿದ್ದ. ಅಪರಾಧ ಕೃತ್ಯ ನಡೆದ ದಿನ ಆತನಿಗೆ 17 ವರ್ಷ, ಆರು ತಿಂಗಳು ಎಂದು ಗುರುತಿಸಲಾಗಿತ್ತು. ಹಾಗಾಗಿ ಆರು ಅಪರಾಧಿಗಳಲ್ಲಿ ಒಬ್ಬನಾಗಿದ್ದ ಆತನನ್ನು ಬಾಲಾಪರಾಧಿ ಎಂದು ಹೇಳಲಾಗಿತ್ತು. ಇದನ್ನು ವಿರೋಧಿಸಿ ಹಲವು ಜನರು ಧ್ವನಿ ಎತ್ತಿದ್ದರು. ಭಾರತೀಯ ಬಾಲಾಪರಾಧಿ ಕಾಯ್ದೆಯಲ್ಲಿ ತಿದ್ದುಪಡಿ ಆಗಬೇಕೆಂದು ಅಭಿಪ್ರಾಯಪಟ್ಟಿದ್ದರು.

5ತಿಂಗಳಲ್ಲಿ 4ಕೇಸ್.. ಆ ಐವರು ಅಪ್ರಾಪ್ತ ರಾಕ್ಷಸರು ಮಾಡಿದ ಕೃತ್ಯ ತಿಳಿದ್ರೆ ಬೆಚ್ಚಿ ಬೀಳ್ತೀರಾ!

Published On - 6:35 pm, Mon, 28 December 20

ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?