ಕೊರೊನಾ ಸೋಂಕು ಹಿಮ್ಮೆಟ್ಟಿಸಲು ಭಾರತಕ್ಕೆ ನೆರವಾಗುತ್ತೇವೆ: ಚೀನಾ

|

Updated on: Apr 30, 2021 | 11:13 PM

ದೆಹಲಿ: ಭಾರತದಲ್ಲಿ ಹೆಚ್ಚಾಗಿರುವ ಕೊರೊನಾ ಸೋಂಕು ತಡೆಗಟ್ಟಲು ಸಹಕರಿಸುವ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸೋಂಕನ್ನು ಹತೋಟಿಯಲ್ಲಿ ಇರಿಸಲು ಅಗತ್ಯ ಸಹಕಾರ ಮತ್ತು ಸಹಭಾಗಿತ್ವವನ್ನು ಮುಕ್ತವಾಗಿ ಒದಗಿಸುವುದಾಗಿ ಚೀನಾ ಅಧ್ಯಕ್ಷ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಈ ಕುರಿತು ಚೀನಾದ ಮಾಧ್ಯಮಗಳೂ ವರದಿ ಮಾಡಿವೆ. ಭಾರತದ ಪರಿಸ್ಥಿತಿ ನೋಡಿ ದುಃಖವೆನಿಸುತ್ತಿದೆ. ಭಾರತ ಎದುರಿಸುತ್ತಿರುವ ದುರದೃಷ್ಟಕರ ಸನ್ನಿವೇಶವನ್ನು ಎದುರಿಸಿ ಮುನ್ನಡೆಯಲು ಚೀನಾ ಸರ್ಕಾರ ಮತ್ತು ಚೀನಾದ ನಾಗರಿಕರು […]

ಕೊರೊನಾ ಸೋಂಕು ಹಿಮ್ಮೆಟ್ಟಿಸಲು ಭಾರತಕ್ಕೆ ನೆರವಾಗುತ್ತೇವೆ: ಚೀನಾ
ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us on

ದೆಹಲಿ: ಭಾರತದಲ್ಲಿ ಹೆಚ್ಚಾಗಿರುವ ಕೊರೊನಾ ಸೋಂಕು ತಡೆಗಟ್ಟಲು ಸಹಕರಿಸುವ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕೊರೊನಾ ಸೋಂಕನ್ನು ಹತೋಟಿಯಲ್ಲಿ ಇರಿಸಲು ಅಗತ್ಯ ಸಹಕಾರ ಮತ್ತು ಸಹಭಾಗಿತ್ವವನ್ನು ಮುಕ್ತವಾಗಿ ಒದಗಿಸುವುದಾಗಿ ಚೀನಾ ಅಧ್ಯಕ್ಷ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಈ ಕುರಿತು ಚೀನಾದ ಮಾಧ್ಯಮಗಳೂ ವರದಿ ಮಾಡಿವೆ. ಭಾರತದ ಪರಿಸ್ಥಿತಿ ನೋಡಿ ದುಃಖವೆನಿಸುತ್ತಿದೆ. ಭಾರತ ಎದುರಿಸುತ್ತಿರುವ ದುರದೃಷ್ಟಕರ ಸನ್ನಿವೇಶವನ್ನು ಎದುರಿಸಿ ಮುನ್ನಡೆಯಲು ಚೀನಾ ಸರ್ಕಾರ ಮತ್ತು ಚೀನಾದ ನಾಗರಿಕರು ಕೈಜೋಡಿಸಲಿದ್ದಾರೆ. ಭಾರತದ ಅತ್ಯಂತ ಕಠಿಣ ಪರಿಸ್ಥಿತಿಯ ಕುರಿತು ಅತೀವ ಸಂತಾಪವನ್ನು ಕೋರುತ್ತೇನೆ ಎಂದು ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಭಾರತದ ಕೇಂದ್ರ ಸರ್ಕಾರ ಹೊಂದಿರುವ ನಾಯಕತ್ವವನ್ನು ದೇಶವನ್ನು ಈ ಸಂಕಷ್ಟಕರ ಸನ್ನಿವೇಶದಿಂದ ಹೊರಗಡೆ ತರಲು ಯಶಸ್ವಿಯಾಗುವ ಸಾಮರ್ಥ್ಯ ಹೊಂದಿದೆ. ಭಾರತಕ್ಕೆ ಅಗತ್ಯವಿರುವ ಯಾವುದೇ ಸಹಾಯವನ್ನು ಸಹ ಮಾಡಲು ಚೀನಾ ಸಿದ್ಧವಿದೆ ಎಂದು ಚೀನಾ ತಿಳಿಸಿದೆ.

ವ ಕುರಿತು ದೇಶದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಚೀನಾ ಸರ್ಕಾರದ ಪ್ರತಿನಿಧಿ ವಾಂಗ್ ಯಿ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿದ್ದಾರೆ. ಭಾರತಕ್ಕೆ ಎದುರಾದ ಕೊವಿಡ್ ಅಪಾಯವನ್ನು ಹೆಡೆಮುರಿಕಟ್ಟಲು ಎರಡೂ ದೇಶಗಳ ನಡುವಿನ ಆಮದು ರಫ್ತು ವಹಿವಾಟು ಮತ್ತು ವಿಮಾನಯಾನದ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಭಾರತದಲ್ಲಿ ಕೊವಿಡ್ ಸೋಂಕು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಹಲವು ದೇಶಗಳು ಭಾರತಕ್ಕೆ ಸಹಾಯಹಸ್ತ ಚಾಚುತ್ತಿವೆ. ಈಗ ಭಾರತದ ನೆರವಿಗೆ ವಿಶ್ವದ ವಿವಿಧ ರಾಷ್ಟ್ರಗಳು ಮಾನವೀಯತೆಯಿಂದ ನೆರವಿನ ಹಸ್ತ ಚಾಚುತ್ತಿವೆ. ಇದುವರೆಗೂ ಭಾರತಕ್ಕೆ 14ಕ್ಕೂ ಹೆಚ್ಚು ರಾಷ್ಟ್ರಗಳು ನೆರವು ನೀಡುವುದಾಗಿ ಘೋಷಿಸಿವೆ. ಇಂಗ್ಲೆಂಡ್, ಪ್ರಾನ್ಸ್, ಐರ್ಲೆಂಡ್, ಜರ್ಮನ್, ಆಸ್ಟ್ರೇಲಿಯಾ, ಸಿಂಗಾಪೂರ್, ಸೌದಿ ಅರೇಬಿಯಾ, ಹಾಂಗ್​ಕಾಂಗ್, ಥಾಯ್ಲೆಂಡ್, ಯುಐಇ, ರಷ್ಯಾ, ಕುವೈತ್, ಆಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತಕ್ಕೆ ನೆರವಿನ ಹಸ್ತ ಚಾಚಿವೆ.

ಭಾರತಕ್ಕೆ ಇಂಗ್ಲೆಂಡ್ 495 ಆಕ್ಸಿಜನ್ ಕಾನ್​ಸೆಂಟ್ರೇಟರ್, 120 ವೆಂಟಿಲೇಟರ್​ಗಳನ್ನು ಈ ವಾರವೇ ಕಳಿಸುತ್ತಿದೆ. ಇವುಗಳ ಪೈಕಿ ಈಗಾಗಲೇ 100 ವೆಂಟಿಲೇಟರ್, 95 ಆಕ್ಸಿಜನ್ ಕನಸಂಟ್ರೇಟರ್ ಮಂಗಳವಾರವೇ ಭಾರತಕ್ಕೆ ಬಂದಿದೆ.

ಇದನ್ನೂ ಓದಿ: Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?

(China President Xi Jinping offers help to India )