ಚೀನಾದ ಅತ್ಯಂತ ಹಿರಿಯ ವ್ಯಕ್ತಿ, 135 ವರ್ಷ ವಯಸ್ಸಿನ ಮಹಿಳೆ ನಿಧನರಾಗಿದ್ದಾರೆ. ಚೀನಾದ ‘ದೀರ್ಘಾಯುಷಿ ಪಟ್ಟಣ’ದವರಾದ ಮಹಿಳೆಯು ಕ್ಸಿನ್‌ಜಿಯಾಂಗ್ ಉಯ್ಘರ್ ಸ್ವಾಯತ್ತ ಪ್ರದೇಶದಲ್ಲಿ ನಿಧನರಾದರು ಎಂದು ಸ್ಥಳೀಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. “ಚೀನಾದ ಅತ್ಯಂತ ಹಿರಿಯ ವ್ಯಕ್ತಿ ಅಲಿಮಿಹಾನ್ ಸೆಯಿಟಿ ಅವರು ಡಿಸೆಂಬರ್ 16ರಂದು 135ನೇ ವಯಸ್ಸಿನಲ್ಲಿ ಕಶ್ಗರ್‌ನಲ್ಲಿ ನಿಧನರಾದರು,” ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೂನ್ 25, 1886ರಂದು ಜನಿಸಿದ ಸೆಯಿಟಿ ಕಶ್ಗರ್ ಪ್ರಿಫೆಕ್ಚರ್‌ನ ಶೂಲೆ ಕೌಂಟಿಯ ಕೊಮುಕ್ಸೆರಿಕ್ ಟೌನ್‌ಶಿಪ್‌ಗೆ ಸೇರಿದವರು. ಮಾಧ್ಯಮ ವರದಿಗಳ ಪ್ರಕಾರ, ಕೊಮುಕ್ಸೆರಿಕ್‌ನಲ್ಲಿ 90 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಾದ ಸಾಕಷ್ಟು ಜನರು ವಾಸಿಸುತ್ತಿದ್ದಾರೆ. ಇದನ್ನು “ದೀರ್ಘಾಯುಷಿಳ ಪಟ್ಟಣ” ಎಂದು ಕರೆಯಲಾಗುತ್ತದೆ.
2013ರಲ್ಲಿ ಚೀನಾ ಅಸೋಸಿಯೇಷನ್ ಆಫ್ ಜೆರೊಂಟಾಲಜಿ ಮತ್ತು ಜೆರಿಯಾಟ್ರಿಕ್ಸ್‌ನಿಂದ ಸೆಯಿಟಿ ಅವರನ್ನು ದೇಶದ ಅತ್ಯಂತ ಹಿರಿಯ ವ್ಯಕ್ತಿ ಎಂದು ಹೆಸರಿಸಲಾಯಿತು. ಮಾಧ್ಯಮ ವರದಿಗಳ ಪ್ರಕಾರ, ಸೆಯಿಟಿ ಸರಳ ಜೀವನಶೈಲಿಯನ್ನು ಅನುಸರಿಸುತ್ತಿದ್ದರು. ಹಾಡುವುದನ್ನು ಮತ್ತು ತನ್ನ ಹೊಲದಲ್ಲಿ ಸೂರ್ಯ ಸ್ನಾನ ಮಾಡಲು ಇಷ್ಟಪಡುತ್ತಿದ್ದರು. ಯಾವಾಗಲೂ ಸಂತೋಷದಿಂದ ಬದುಕುತ್ತಾ ಮತ್ತು ನಗುನಗುತ್ತಾ ಇರುತ್ತಿದ್ದರು.
ಇದನ್ನೂ ಓದಿ: ಸಾಲುಮರದ ತಿಮ್ಮಕ್ಕಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರದಾನ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್