Breakfast ತಿಂಡಿಯಲ್ಲಿ 25 ಮಕ್ಕಳಿಗೆ ವಿಷವುಣಿಸಿದ್ದ ಶಿಕ್ಷಕಿಗೆ ಗಲ್ಲು ಶಿಕ್ಷೆ!

ಚೀನಾದಲ್ಲಿ ಮನುಷ್ಯರಿಗಿಂತ ದಾನವರೇ ಹೆಚ್ಚಿದ್ದಾರೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇಡೀ ಜಗತ್ತಿಗೆ ಕೊರೊನಾ ವಿಷವುಣಿಸಿರುವ ಚೀನಾದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಶಿಶುವಿಹಾರದಲ್ಲಿ ಶಿಕ್ಷಕಿಯಾಗಿದ್ದ ಮಹಾತಾಯಿಯೊಬ್ಬಳು ಯಾರದೋ ಮೇಲಿನ ಕೋಪಕ್ಕೆ 25 ಮಕ್ಕಳಿಗೆ ವಿಷವುಣಿಸಿದ್ದಾಳೆ. ಸೋಡಿಯಂ ನೈಟ್ರೇಟ್​ ಎಂಬ ಮಾರಕ ರಾಸಾಯನಿಕವನ್ನು ಊಟದಲ್ಲಿ ಬೆರೆಸಿಕೊಟ್ಟಿದ್ದಕ್ಕೆ 25 ಮಕ್ಕಳ ಪೈಕಿ ಒಂದು ಮಗು ಅಸುನೀಗಿತ್ತು. ಚೀನಾದ ಮಧ್ಯ ಪ್ರಾಂತ್ಯವಾದ ಹೆನಾನ್​ನಲ್ಲಿ ವಾಂಗ್ ಯುನ್​ ಎಂಬ ಶಿಕ್ಷಕಿ ಒಂದು ವರ್ಷದ ಹಿಂದೆ ತುಚ್ಛ ಮತ್ತು ಹೇಯವಾಗಿ […]

Breakfast ತಿಂಡಿಯಲ್ಲಿ 25 ಮಕ್ಕಳಿಗೆ ವಿಷವುಣಿಸಿದ್ದ ಶಿಕ್ಷಕಿಗೆ ಗಲ್ಲು ಶಿಕ್ಷೆ!
Follow us
ಸಾಧು ಶ್ರೀನಾಥ್​
|

Updated on:Sep 30, 2020 | 11:37 AM

ಚೀನಾದಲ್ಲಿ ಮನುಷ್ಯರಿಗಿಂತ ದಾನವರೇ ಹೆಚ್ಚಿದ್ದಾರೆ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇಡೀ ಜಗತ್ತಿಗೆ ಕೊರೊನಾ ವಿಷವುಣಿಸಿರುವ ಚೀನಾದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ಶಿಶುವಿಹಾರದಲ್ಲಿ ಶಿಕ್ಷಕಿಯಾಗಿದ್ದ ಮಹಾತಾಯಿಯೊಬ್ಬಳು ಯಾರದೋ ಮೇಲಿನ ಕೋಪಕ್ಕೆ 25 ಮಕ್ಕಳಿಗೆ ವಿಷವುಣಿಸಿದ್ದಾಳೆ. ಸೋಡಿಯಂ ನೈಟ್ರೇಟ್​ ಎಂಬ ಮಾರಕ ರಾಸಾಯನಿಕವನ್ನು ಊಟದಲ್ಲಿ ಬೆರೆಸಿಕೊಟ್ಟಿದ್ದಕ್ಕೆ 25 ಮಕ್ಕಳ ಪೈಕಿ ಒಂದು ಮಗು ಅಸುನೀಗಿತ್ತು.

ಚೀನಾದ ಮಧ್ಯ ಪ್ರಾಂತ್ಯವಾದ ಹೆನಾನ್​ನಲ್ಲಿ ವಾಂಗ್ ಯುನ್​ ಎಂಬ ಶಿಕ್ಷಕಿ ಒಂದು ವರ್ಷದ ಹಿಂದೆ ತುಚ್ಛ ಮತ್ತು ಹೇಯವಾಗಿ ಉದ್ದೇಶಪೂರ್ವಕವಾಗಿ ಮುಗ್ಧ ಮಕ್ಕಳಿಗೆ ಬ್ರೇಕ್​ಫಾಸ್ಟ್​ ತಿಂಡಿಯಲ್ಲಿ ವಿಷವಿಟ್ಟಿದ್ದಳು. ಶಾಲಾ ಮಕ್ಕಳನ್ನು ಹೇಗೆ ನಿಭಾಯಿಸಬೇಕು, ಅವರಲ್ಲಿ ಹೇಗೆ ಶಿಸ್ತು ಮೂಡಿಸಬೇಕು ಎಂಬ ವಿಷಯದ ಬಗ್ಗೆ ಆಕೆ ಮತ್ತೊಬ್ಬ ಶಿಕ್ಷಕಿಯ ಜೊತೆ ಜಗಳವಾಡಿದ್ದು ಈ ರಾದ್ಧಾಂತಕ್ಕೆ ಕಾರಣವಾಗಿತ್ತು.

ವಿಷಯುಕ್ತ ತಿಂಡಿ ತಿಂದ ಎಲ್ಲ 25 ಮಕ್ಕಳೂ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಅವರ ಪೈಕಿ ಒಂದು ಮಗು ಸುಮಾರು 8 ತಿಂಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ, ಅಸುನೀಗಿತ್ತು. ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ವಿಚಾರಣೆ ವೇಳೆಯೇ ಆರೋಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅದಕ್ಕೆಂದೇ ಶಿಕ್ಷಕಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಅದಕ್ಕೂ ಮುನ್ನ 3 ವರ್ಷದ ಹಿಂದೆ ಇದೇ ಮಹಿಳೆ ತನ್ನ ಗಂಡನೊಂದಿಗೆ ಖ್ಯಾತೆ ತೆಗೆದು ಆತನಿಗೂ ಇದೇ ರೀತಿ ಊಟದಲ್ಲಿ ವಿಷಯ ಬೆರೆಸಿಕೊಟ್ಟಿದ್ದಳು. ಆತ ಅದುಹೇಗೋ ಪ್ರಾಣಾಪಾಯದಿಂದ ಬಚಾವಾಗಿದ್ದ.

Published On - 11:29 am, Wed, 30 September 20

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ