ಬೀಜಿಂಗ್: ಚೀನಾದ ವ್ಯಕ್ತಿಯೊಬ್ಬರು ಬೀಜಿಂಗ್ ಕ್ಯಾಪಿಟಲ್ ಇಂಟರ್‌ನ್ಯಾಶನಲ್ ಏರ್ಪೋರ್ಟ್ನ ಟರ್ಮಿನಲ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ವಾಸಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರು ತಮ್ಮ ಮನೆಗೆ ವಾಪಾಸ್ ಹೋಗಲು ಇಷ್ಟವಿಲ್ಲ ಎಂದು ಹೇಳಿದ್ದಾರೆ. ವೀ ಜಿಯಾಂಗುವೋ ಅವರಿಗೆ ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸವಿತ್ತು. ಇದಕ್ಕೆ ಅವರ ಕುಟುಂಬದವರು ವಿರೋಧ ಮಾಡುತ್ತಿದ್ದರು. ಈ ಬಗ್ಗೆ ಮನೆಯಲ್ಲಿ ಸದಾ ಜಗಳವಾಗುತ್ತಿತ್ತು. ಇದೇ ಕಾರಣದಿಂದ ಕೋಪಗೊಂಡ ಅವರು ವಿಮಾನ ನಿಲ್ದಾಣದ ಟರ್ಮಿನಲ್‌ಗೆ ತೆರಳಿದರು. ಅಲ್ಲಿಯೇ ವಾಸವಾಗತೊಡಗಿದರು.
ಚೈನಾ ಡೈಲಿ ವರದಿಯ ಪ್ರಕಾರ, 60 ವರ್ಷದ ವೀ ಜಿಯಾಂಗುವೋ ಅವರು ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿದ್ದಾರೆ. 2008ರಿಂದ ಅವರು ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿಯೇ ವಾಸಿಸುತ್ತಿದ್ದಾರೆ.
ನಾನು ಮನೆಯಲ್ಲೇ ಇರಬೇಕೆಂದರೆ ನಾನು ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಬೇಕು ಎಂದು ನನ್ನ ಕುಟುಂಬದವರು ನನಗೆ ಹೇಳಿದ್ದಾರೆ. ಅದಕ್ಕೆ ನಾನು ಸಿದ್ಧನಿಲ್ಲ. ನಾನು ಅವರಿಗೆ ನನ್ನ ಮಾಸಿಕ 1,000 ಯುವಾನ್ (150 ರೂ.) ಭತ್ಯೆಯನ್ನು ನೀಡಬೇಕಾಗಿತ್ತು. ಇರುವ ಹಣವನ್ನೆಲ್ಲ ಅವರಿಗೆ ನೀಡಿದರೆ ನನಗೆ ಸಿಗರೇಟ್, ಆಲ್ಕೋಹಾಲ್ ಖರೀದಿಸಲು ಹಣ ಎಲ್ಲಿ ಉಳಿಯುತ್ತದೆ? ಎಂದು ಅವರು ಸಂದರ್ಶನದಲ್ಲಿ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.
ವೀ ಜಿಯಾಂಗುವೋ ಅವರಿಗೆ 40 ವರ್ಷವಾಗಿದ್ದಾಗ ಅವರನ್ನು ಕೆಲಸದಿಂದ ವಜಾಗೊಳಿಸಲಾಯಿತು. ಅವರಿಗೆ ವಯಸ್ಸಾದ ಕಾರಣದಿಂದ ಉದ್ಯೋಗದಲ್ಲಿ ಮುಂದುವರೆಸಲು ಸಾಧ್ಯವಾಗಲಿಲ್ಲ. ವೀ ಜಿಯಾಂಗುವೋ ವಿಮಾನ ನಿಲ್ದಾಣವನ್ನೇ ತಮ್ಮ ಮನೆ ಎಂದು ಕರೆಯುತ್ತಾರೆ. ಅಲ್ಲದೆ, ಸುಮಾರು ಐದಾರು ಜನರು ವಿಮಾನ ನಿಲ್ದಾಣದ ಟರ್ಮಿನಲ್‌ಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಹಿರಿಯ ನೈರ್ಮಲ್ಯ ಕಾರ್ಯಕರ್ತರೊಬ್ಬರು ಚೀನಾ ಡೈಲಿಗೆ ತಿಳಿಸಿದ್ದಾರೆ.
Published On - 2:30 pm, Thu, 31 March 22