ಕೊಲೊರಾಡೋದ ಸ್ಪ್ರಿಂಗ್ನಲ್ಲಿ ಭಾನುವಾರ ಅದ್ಧೂರಿಯಾಗಿ ಹುಟ್ಟು ಹಬ್ಬದ ಸಂಭ್ರವನ್ನು ಆಚರಿಸಲಾಗುತ್ತಿತ್ತು. ಅಲ್ಲಿಗೆ ಆಗಮಿಸಿದ್ದ ವರ್ಕ್ತಿಯೋರ್ವ ತನ್ನ ಗೆಳತಿಯನ್ನು ಸೇರಿ ಒಟ್ಟು ಏಳು ಜನರಿಗೆ ಗುಂಡು ಹಾರಿಸಿದ್ದಾನೆ. ಆತ ಸ್ವಯಂ ತನಗೂ ಗುಂಡು ಹಾರಿಸಿಕೊಂಡಿದ್ದಾನೆ. ಆದರೆ ಸ್ಥಳದಲ್ಲಿದ್ದ ಮಕ್ಕಳು ಗುಂಡಿನ ದಾಳಿಯಿಂದ ಪಾರಾಗಿದ್ದಾರೆ.
ಗುಂಡಿನ ದಾಳಿಯ ವಿಷಯ ತಿಳಿದಂತೆಯೇ ಸ್ಥಳಕ್ಕೆ ಪೊಲೀಸರು ಅಗಮಿಸಿದ್ದಾರೆ. ಆ ಸಂದರ್ಭದಲ್ಲಿ ಆರು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಗುಂಡು ಹಾರಿಸಿದ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ಕೊರೆದೊಯ್ಯದ ನಂತರ ಆತ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ. ವ್ಯಕ್ತಿಯು ತನಗೆ ತಾನೇ ಗುಂಡುಹಾರಿಸಿಕೊಳ್ಳುವ ಮೊದಲು, ಹುಟ್ಟುಹಬ್ಬದ ಪಾರ್ಟಿಯಲ್ಲಿದ್ದ ಇತರರಿಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಇಲಾಖೆ ಮಾಹಿತಿ ತಿಳಿಸಿದೆ.
ಈ ಘಟನೆ ಕೊಲೊರಾಡೋ ಸ್ಪ್ರಿಂಗ್ ಪಟ್ಟಣದ ಆಗ್ನೇಯ ಭಾಗದಲ್ಲಿ ಡೆನ್ವರ್ನಿಂದ ದಕ್ಷಿಣಕ್ಕೆ 110 ಕಿ.ಮೀ ದೂರದಲ್ಲಿರುವ ಕೊಲೊರಾಡೋ ಸ್ಪ್ರಿಂಗ್ಸ್ ವಿಮಾನ ನಿಲ್ದಾಣದ ಸಮೀಪವಿರುವ ಮೊಬೈಲ್ ಹೋರ್ಮ್ ಪಾರ್ಕ್ ಕ್ಯಾಂಟರ್ಬರಿ ಮ್ಯಾನಿಫೆಕ್ಚರ್ ಹೋಮ್ ಕಮ್ಯುನಿಟಿಯಲ್ಲಿ ನಡೆದಿದೆ.
ಓರ್ವ ಮಹಿಳಾ ಸಾಕ್ಷಿದಾರ ಹೇಳುವಂತೆ, ಹುಟ್ಟುಹಬ್ಬದ ಹಿಂದಿನ ದಿನ ಶನಿವಾರ ರಾತ್ರಿ ವ್ಯಕ್ತಿಗೆ ಒಂದು ಫೋನ್ಕಾಲ್ ಬರುತ್ತದೆ. ದೂರವಾಣಿ ಕರೆಯಲ್ಲಿ ಯಾರು ಏನು ಹೇಳಿದ್ದಾರೆ ಎಂಬುದು ತಿಳಿಯಲಿಲ್ಲ. ಆದರೆ ಮಾರನೇ ದಿನ ಆ ವ್ಯಕ್ತಿ ಎಲ್ಲರಿಗೆ ಗುಂಡು ಹಾರಿಸಿದ್ದಾನೆ ಎಂದು ಹೇಳಿದ್ದಾರೆ. ಗುಂಡಿನ ದಾಳಿಯಲ್ಲಿ ಪರಾರಿಯಾದ ಮಕ್ಕಳನ್ನು ಪೊಲೀಸರು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ.
ಕೊರೊನಾ ನಿರ್ಬಂಧದ ಸಮಯದಲ್ಲೂ ಇಂತಹ ಘಟನೆ ನಡೆದಿದೆ. ಇದಕ್ಕೂ ಮೊದಲು ಮಾರ್ಚ್ 22ರಂದು 21 ವರ್ಷದ ವ್ಯಕ್ತಿ 10 ಜನರನ್ನು ಕೊಂಡಿದ್ದಾರೆ. ಈ ಘಟನೆ ಕೊಲೊರಾಡೋದ ಸೂಪರ್ ಮಾರ್ಕೆಟ್ನಿಂದ 50ಕಿ.ಮೀ ದೂರದಲ್ಲಿ ನಡೆದಿತ್ತು. ಇದೀಗ ಇಂತಹುದೇ ಮತ್ತೊಂದು ಘಟನೆ ನಡೆದಿದೆ.
1999ರಲ್ಲಿ ಕೊಲೊರಾಡೋದ ಕೊಲಂಬೈನ್ ಪ್ರಾಢ ಶಾಲೆಯಲ್ಲಿ 15 ಜನರ ಹತ್ಯೆ ಆಗಿರುತ್ತದೆ. 2012ರಲ್ಲಿ ಅರೋರಾ ಚಿತ್ರಮಂದಿರಲ್ಲಿ 12 ಜನ ಸಾವಿಗೀಡಾಗಿರುತ್ತಾರೆ. ಹಾಗೂ 70 ಜನ ಗಾಯಗೊಂಡಿರುತ್ತಾರೆ. ಈ ಘಟನೆಯಲ್ಲಿ ಅಪರಾಧಿಗಳು ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಾರೆ.
ಇತ್ತೀಚಿಗಿನ ಗುಂಡಿನದಾಳಿಗಳ ಬಗ್ಗೆ ಚರ್ಚಿಸಿದ ಅಮೆರಿಕದ ಅಧ್ಯಕ್ಷ ಜೋ ಬಿಡನ್, ದೇಶಕ್ಕೆ ನಾಚಿಕೆಯಾಗುವ ಸಂಗತಿಗಳಿವು ಎಂದು ಗನ್ ಕಂಟ್ರೋಲ್ ಡಿಬೆಟ್ ಸಮಯದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಘಟನೆಯ ಸಂಬಂಧಿಕರನ್ನು, ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ವಿಚಾರಣೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ತಲೆಗೆ ಗುಂಡು ಹಾರಿಸಿಕೊಂಡು ಚಿಕ್ಕಮಗಳೂರು ರೈತ ಆತ್ಮಹತ್ಯೆ