ಬ್ರೆಜಿಲ್ನಲ್ಲೂ ಡೆಡ್ಲಿ ಕೊರೊನಾ ರಣಕೇಕೆ, 22 ಸಾವಿರ ಮಂದಿ ಬಲಿ
ಚೀನಾ, ಇಟಲಿ, ಅಮೆರಿಕದ ನಂತ್ರ ಇದೀಗ ಬ್ರೆಜಿಲ್ನಲ್ಲಿ ಡೆಡ್ಲಿ ಕೊರೊನಾ ಕೇಕೆ ಹಾಕುತ್ತಿದೆ. ಬ್ರೆಜಿಲ್ನಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ನಿನ್ನೆ ಕೂಡ ಸುಮಾರು 1 ಸಾವಿರ ಜನರು ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯವರೆಗೂ ಬ್ರೆಜಿಲ್ನಲ್ಲಿ 22 ಸಾವಿರ ಜನ ಮೃತಪಟ್ಟಿದ್ದಾರೆ. ‘ದೊಡ್ಡಣ್ಣ’ನಿಗೆ ಸೋಂಕು ಕಂಟಕ: ಇನ್ನು ಅಮೆರಿಕದಲ್ಲೂ ಇದೇ ಸ್ಥಿತಿ ಇದೆ. ಈಗ ಕೊರೊನಾ ಸೋಂಕಿನಿಂದ ಅಮೆರಿಕದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 1 ಲಕ್ಷದ ಗಡಿಗೆ ಬಂದು ತಲುಪಿದ್ದು, ಸೋಂಕಿತರ ಸಂಖ್ಯೆ 17 […]
ಚೀನಾ, ಇಟಲಿ, ಅಮೆರಿಕದ ನಂತ್ರ ಇದೀಗ ಬ್ರೆಜಿಲ್ನಲ್ಲಿ ಡೆಡ್ಲಿ ಕೊರೊನಾ ಕೇಕೆ ಹಾಕುತ್ತಿದೆ. ಬ್ರೆಜಿಲ್ನಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ನಿನ್ನೆ ಕೂಡ ಸುಮಾರು 1 ಸಾವಿರ ಜನರು ಸೋಂಕಿಗೆ ಬಲಿಯಾಗಿದ್ದು, ಇಲ್ಲಿಯವರೆಗೂ ಬ್ರೆಜಿಲ್ನಲ್ಲಿ 22 ಸಾವಿರ ಜನ ಮೃತಪಟ್ಟಿದ್ದಾರೆ.
‘ದೊಡ್ಡಣ್ಣ’ನಿಗೆ ಸೋಂಕು ಕಂಟಕ: ಇನ್ನು ಅಮೆರಿಕದಲ್ಲೂ ಇದೇ ಸ್ಥಿತಿ ಇದೆ. ಈಗ ಕೊರೊನಾ ಸೋಂಕಿನಿಂದ ಅಮೆರಿಕದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 1 ಲಕ್ಷದ ಗಡಿಗೆ ಬಂದು ತಲುಪಿದ್ದು, ಸೋಂಕಿತರ ಸಂಖ್ಯೆ 17 ಲಕ್ಷದತ್ತ ಸಮೀಪಿಸುತ್ತಿದೆ. ಇದು ಟ್ರಂಪ್ ಸರ್ಕಾರದ ವಿರುದ್ಧ ಆಕ್ರೋಶ ಹೆಚ್ಚುವಂತೆ ಮಾಡಿದೆ.
ನಿಲ್ಲದ ಹೋರಾಟ, ತೀವ್ರ ಹಿಂಸಾಚಾರ: ಚಿಲಿಯಲ್ಲಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸರ್ಕಾರ ಕೈಗೊಂಡಿರುವ ನಿರ್ಧಾರಗಳ ವಿರುದ್ಧ ಆಕ್ರೋಶ ಮೊಳಗಿದ್ದು, ಭಾರಿ ಪ್ರಮಾಣದ ಪ್ರತಿಭಟನೆಗಳು ನಡೀತಿವೆ. ಪ್ರತಿಭಟನಾಕಾರರು ಹಾಗೂ ಸರ್ಕಾರಿ ಪಡೆಗಳ ನಡುವೆ ನಡೆಯುತ್ತಿರುವ ಕಾಳಗ ಹಿಂಸಾಚಾರಕ್ಕೆ ಕಾರಣವಾಗಿದೆ.