ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ಪಾಕ್ ಮುಂದೊಂದು ದಿನ ಖಂಡಿತ ವಿಪತ್ತಿನತ್ತ ಸಾಗುತ್ತಿದೆ ಮತ್ತು ದೇಶವು ವಿಘಟನೆಗೊಳ್ಳುವುದು. ಶೆಹಬಾಜ್ ಷರೀಫ್ ಸರ್ಕಾರ ಸೇನೆಯನ್ನು ಎತ್ತಿಕಟ್ಟುವ ಸಂಚನ್ನು ರೂಪಿಸಿದೆ. ರಾಜಕೀಯ ಅಸ್ಥಿರತೆಯನ್ನು ಕೊನೆಗೊಳಿಸಲು ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳಿದೆ.
ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಪಿಡಿಎಂ ನಾಯಕರು ಮತ್ತು ನವಾಜ್ ಷರೀಫ್ ಅವರು ದೇಶದಲ್ಲಿ ಲೂಟಿ ಮಾಡಿದೆ ಮತ್ತು ಸೇನೆಗೆ ಕೆಟ್ಟ ಹೆಸರನ್ನು ತಂದಿದ್ದಾರೆ. ಪಾಕಿಸ್ತಾನ ಅವನತಿಯ ಕಡೆಗೆ ಹೋಗುತ್ತದೆ ಎಂಬ ಭಯ ಶುರುವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ;Imran Khan: ಇಮ್ರಾನ್ ಖಾನ್ ನಿವಾಸದಲ್ಲಿ 40 ಉಗ್ರರಿಗೆ ಆಶ್ರಯ, 24 ಗಂಟೆಯೊಳಗೆ ನಮಗೆ ಒಪ್ಪಿಸಿ ಪೊಲೀಸರು
ಮೇ 9ರಂದು ನನ್ನನ್ನೂ ಹೈಕೋರ್ಟ್ ಮುಂದೆ ಬಂಧನ ಮಾಡಿ, ದೊಡ್ಡ ಹೈಡ್ರಾಮ ಮಾಡಿತ್ತು. ನಂತರ ದೇಶದಲ್ಲಿ ಗಲಭೆ ಸೃಷ್ಟಿಸಿತ್ತು ಇದು ದೊಡ್ಡ ಪಿತ್ತೂರಿ ಎಂದು ಹೇಳಿದ್ದಾರೆ. ಇನ್ನೂ ಸೇನೆಯ ಮೇಲಿನ ಟೀಕೆಯನ್ನು ಸಮರ್ಥಿಸಿಕೊಂಡ ಇಮ್ರಾನ್ ಖಾನ್ ನಾನು ಸೇನೆಯನ್ನು ಛೀಮಾರಿ ಹಾಕಿದಾಗ, ನಾನು ನನ್ನ ಮಕ್ಕಳನ್ನು ಟೀಕಿಸಿದಂತಾಗುತ್ತದೆ. ರಾಜ್ಯ ಸಂಸ್ಥೆಗಳ ಆಂತರಿಕ ವಿಷಯಗಳಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾನು ಪದೇ ಪದೇ ಹೇಳಿದ್ದೇನೆ. ಮಾಜಿ ಸೇನಾ ಮುಖ್ಯಸ್ಥರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂಬ ವರದಿಗಳನ್ನು ಖಚಿತಪಡಿಸಿದಾಗ ನಾನು ಮಧ್ಯಪ್ರವೇಶಿಸಲಿಲ್ಲ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ