ಇಂಧನ ಟ್ಯಾಂಕರ್ ಸ್ಪೋಟಗೊಂಡ ಘಟನೆಯೊಂದು ಮಿಚಿಗನ್ನಲ್ಲಿ(Michigan) ನಡೆದಿದೆ. ಕ್ಯಾಮರಾ ಮೂಲಕ ದೃಶ್ಯ ಸೆರೆಯಾಗಿದೆ. ಘಟನೆ ಸೋಮವಾರ ನಡೆದಿದ್ದು ಕ್ಯಾಮರಾದಲ್ಲಿ ಸೆರೆಸಿಕ್ಕ ದೃಶ್ಯವನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸಾಗುತ್ತಿದ್ದ ಟ್ಯಾಂಕರ್ (Tanker ) ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಪಲ್ಟಿಯಾದ ವಾಹನ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಚಾಲಕ ಯಾವುದೇ ಅಪಾಯವಾಗಿಲ್ಲ ಎಂಬುದು ವರದಿಗಳಿಂದ ತಿಳಿದು ಬಂದಿದೆ. ಈ ದೃಶ್ಯವನ್ನು ಟ್ರಾಯ್ ಪೊಲೀಸ್ ಇಲಾಖೆ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡಿದೆ.
ರಸ್ತೆಯ ಮಧ್ಯದಲ್ಲಿದ್ದ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿಯಾದ ಪರಿಣಾಮ ಇಂಧನ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಸ್ಪೋಟಗೊಂಡಿದೆ. ಸೇಂಟ್ಕೇರ್ನ 46 ವರ್ಷದ ಟ್ಯಾಂಕರ್ ಚಾಲಕ ಸ್ಪೋಟದಿಂದ ತಪ್ಪಿಸಿಕೊಂಡಿದ್ದಾನೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.
ಕ್ಯಾಮೆರಾದಿಂದ ದೃಶ್ಯ ಸೆರೆಯಾಗಿದೆ. ಈ ಘಟನೆಯ ತುಣುಕನ್ನು ಇಲಾಖೆ ಪೋಸ್ಟ್ ಮಾಡಿದೆ. ಚಾಲಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಣ್ಣ-ಪುಟ್ಟ ಗಾಯಗಳಾಗಿದ್ದು ಆತನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
14,000 ಗ್ಯಾಲನ್ ಗ್ಯಾಸೋಲಿನ್ ತುಂಬಿದ ಟ್ಯಾಂಕರ್ ಆಗಿತ್ತು. ಸ್ಪೋಟಗೊಂಡ ಸುಮಾರು ಎರಡು ಗಂಟೆಯವರೆಗೆ ಹೊತ್ತಿ ಉರಿದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಅದೃಷ್ಟವಶಾತ್ ಘಟನೆಯಿಂದ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.
ಇದನ್ನೂ ಓದಿ:
ಢಾಕಾದಲ್ಲಿ ಸ್ಪೋಟ: 7 ಮಂದಿ ಸಾವು, ಗಾಯಾಳುಗಳು ಆಸ್ಪತ್ರೆಗೆ ದಾಖಲು
ಗುತ್ತಿಗೆದಾರನ ನಿರ್ಲಕ್ಷ್ಯ; ಡಿಟೋನೇಟರ್ ಸ್ಪೋಟಗೊಂಡು ಮಕ್ಕಳು ಆಸ್ಪತ್ರೆಗೆ ದಾಖಲು