ಅರಸೊತ್ತಿಗೆಯನ್ನೂ ಬಿಡುತ್ತಿಲ್ಲ ಕೊರೋನಾ ಸೋಂಕು; ಡೆನ್ಮಾರ್ಕ್ ಮಹಾರಾಣಿ ಮತ್ತು ಸ್ಪೇನ್ ದೇಶದ ದೊರೆಗೆ ಪಾಸಿಟಿವ್

ಇತ್ತೀಚಿಗಷ್ಟೇ ಡೆನ್ಮಾರ್ಕ್ ಮಹಾರಾಣಿಯಾಗಿ 50 ವರ್ಷಗಳನ್ನು ಪೂರೈಸಿದ ಜನಪ್ರಿಯ ರಾಣಿ ಮಾರ್ಗ್ರೆತ್ ಪ್ರಸಕ್ತ ವೈದ್ಯಕೀಯ ಶಿಫಾರಸ್ಸಿನ ಅನ್ವಯ ಕೋಪನ್ ಹೇಗನ್ ನಲ್ಲಿರುವ ಅರಮನೆಯಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ.

ಅರಸೊತ್ತಿಗೆಯನ್ನೂ ಬಿಡುತ್ತಿಲ್ಲ ಕೊರೋನಾ ಸೋಂಕು; ಡೆನ್ಮಾರ್ಕ್ ಮಹಾರಾಣಿ ಮತ್ತು ಸ್ಪೇನ್ ದೇಶದ ದೊರೆಗೆ ಪಾಸಿಟಿವ್
ಡೆನ್ಮಾರ್ಕ್ ಮಹಾರಾಣಿ ಮಾರ್ಗ್ರೆತ್ II
Follow us
TV9 Web
| Updated By: shivaprasad.hs

Updated on: Feb 10, 2022 | 9:11 AM

ಕೊರೋನಾ ವೈರಸ್ ಬಡವ-ಬಲ್ಲಿದ, ಚಕ್ರಾಧಿಪತಿ-ಜನಸಾಮಾನ್ಯ ಅಂತ ತಾರತಮ್ಯವೇನೂ ಮಾಡದು ಅಂತ ಕಾಣುತ್ತೆ. ಅದು ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುತ್ತದೆ. ಯಾಕೆ ಹೀಗೆ ಹೇಳುತ್ತಿದ್ದೇವೆ ಡೆನ್ಮಾರ್ಕಿನ ಮಹಾರಾಣಿ (Denmark’s queen) ಮತ್ತು ಸ್ಪೇನ್ ದೇಶದ ಚಕ್ರಾಧಿಪತಿ (King of Spain) ಇಬ್ಬರಿಗೂ ಸೋಂಕು ತಗುಲಿದೆ. ಡೆನ್ಮಾರ್ಕ್ ರಾಣಿ ಮಾರ್ಗ್ರೆತ್ II (Margrethe II) ಅವರಲ್ಲಿ ಸೌಮ್ಯ ಸ್ವಭಾವದ ರೋಗ ಲಕ್ಷಣ ಕಾಣಿಸಿಕೊಂಡಿವೆ ರಾಯಲ್ ಹೌಸ್ ಮೂಲಗಳು ತಿಳಿಸಿವೆ. 81-ವರ್ಷ ವಯಸ್ಸಿನ ಮಹಾರಾಣಿ ಕಳೆದ ನವೆಂಬರ್ನಲ್ಲಿ ಲಸಿಕೆಯ ಮೂರನೇ ಡೋಸ್ ತೆಗೆದುಕೊಂಡಿದ್ದಾರೆ ಮತ್ತು ಅವರಲ್ಲಿ ಸೌಮ್ಯ ಸ್ವಭಾವದ ಸೋಂಕು ಕಾಣಿಸಿಕೊಂಡಿದೆ, ಎಂದು ಆಸ್ಥಾನ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇತ್ತೀಚಿಗಷ್ಟೇ ಡೆನ್ಮಾರ್ಕ್ ಮಹಾರಾಣಿಯಾಗಿ 50 ವರ್ಷಗಳನ್ನು ಪೂರೈಸಿದ ಜನಪ್ರಿಯ ರಾಣಿ ಮಾರ್ಗ್ರೆತ್ ಪ್ರಸಕ್ತ ವೈದ್ಯಕೀಯ ಶಿಫಾರಸ್ಸಿನ ಅನ್ವಯ ಕೋಪನ್ ಹೇಗನ್ ನಲ್ಲಿರುವ ಅರಮನೆಯಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ. ಕೋವಿಡ್ ಪಿಡುಗಿಗೆ ಸಂಬಂಧಿಸಿದ ಎಲ್ಲ ನಿರ್ಬಂಧಗಳನ್ನು ಡ್ಯಾನಿಷ್ ಸರ್ಕಾರ ಕಳೆದ ವಾರವೇ ತೆರವುಗೊಳಿಸಿದೆಯಾದರೂ ಸೋಂಕಿನ ಲಕ್ಷಣಗಳನ್ನು ತೋರುವ ಜನ ಕನಿಷ್ಟ 4 ದಿನ ಪ್ರತ್ಯೇಕಿಸಿಕೊಳ್ಳಬೇಕಿದೆ ಎಂದು ಹೇಳಿದೆ.

ನಾರ್ಡಿಕ್ ದೇಶಗಳಲ್ಲಿ ಒಂದಾಗಿರುವ ಡೆನ್ಮಾರ್ಕ್ ನಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆ ಮಟ್ಟದ ಇಳಿಕೆ ಕಂಡ ನಂತರ ‘ನಮಗೆ ಗೊತ್ತಿರುವ ಮೊದಲಿನ ಬದುಕಿಗೆ,’ ವಾಪಸ್ಸು ಹೋಗೋಣ ಎಂದು ಸರ್ಕಾರ ಘೋಷಿಸಿದೆ. ಒಮೈಕ್ರಾನ್ ರೂಪಾಂತರಿಯಿಂದ ತಲೆದೋರುತ್ತಿರುವ ಸೌಮ್ಯ ಸ್ವಭಾವದ ಅನಾರೋಗ್ಯ ಮತ್ತು ಹೆಚ್ಚು ಕಡಿಮೆ ದೇಶದ ಎಲ್ಲ ಜನ ಲಸಿಕೆ ಪಡೆದಿರುವುದು ನಿರ್ಬಂಧಗಳನ್ನು ತೆರವುಗೊಳಿಸುವ ಸನ್ನಿವೇಶ ಸೃಷ್ಟಿಸಿದೆ ಎಂದು ಸರ್ಕಾರ ತಿಳಿಸಿದೆ.

ಮಾರ್ಗ್ರೆತ್ II ನಾವೆಲ್ ಕೊರೋನವೈರಸ್ ಸೋಂಕಿಗೆ ಒಳಗಾದ ಮೊದಲ ನಾರ್ಡಿಕ್ ಅರಸೊತ್ತಿಗೆಗೆ ಸೇರಿದ ಪ್ರಥಮ ವ್ಯಕ್ತಿಯೇನೂ ಅಲ್ಲ. ಸ್ವೀಡನ್‌ನ 75 ವರ್ಷ ವಯಸ್ಸಿನ ಅರಸ ಮತ್ತು 78 ವರ್ಷ ವಯಸ್ಸಿನ ಮಹಾರಾಣಿ ಇಬ್ಬರೂ ಜನವರಿಯ ಆರಂಭದಲ್ಲಿ ಸೋಂಕಿಗೊಳಗಾಗಿದ್ದರು.

ಅತ್ತ ಮ್ಯಾಡ್ರಿಡ್ ಅರಸೊತ್ತಿಗೆಯಿಂದ ಬುಧವಾರ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸ್ಪೇನ್ ದೇಶದ ಅರಸ ಫೆಲಿಪ್ VI ಅವರು ಸಹ ಸೌಮ್ಯ ಸ್ವಭಾವದ ಸೋಂಕಿನಿಂದ ಬಳಲುತ್ತಿದ್ದಾರೆ. ಮಂಗಳವಾರ ರಾತ್ರಿ 54 ವರ್ಷ ವಯಸ್ಸಿನ ಫಿಲಿಪ್ ಅವರಲ್ಲಿ ಲಕ್ಷಣಗಳು ಕಂಡಕೂಡಲೇ ಟೆಸ್ಟ್ ನಡೆಸಿದ್ದು ಅವರಿಗೆ ಸೋಂಕು ತಾಕಿರುವುದು ದೃಢಪಟ್ಟಿದೆ ಎಂದು ಅರಮನೆ ಮೂಲಗಳು ತಿಳಿಸಿವೆ.

King Felipe of Spain

ಸ್ಪೇನ್ ದೊರೆ ಫೆಲಿಪ್

ಮಹಾರಾಜರ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಅರಸೊತ್ತಿಗೆಯ ಎಲ್ಲ ಕಾರ್ಯಗಳನ್ನು ಅವರು ತಮ್ಮ ನಿವಾಸದಿಂದಲೇ ನೆರವೇರಿಸುತ್ತಾರೆ, ಎಂದು ತಿಳಿಸಿರುವ ಅರಮನೆ ಪ್ರಕಟಣೆಯು ಮಹಾರಾಜ ಒಂದು ವಾರದ ಅವಧಿಗೆ ಕ್ವಾರಂಟೀನ್ ನಲ್ಲಿರುತ್ತಾರೆ ಎಂದಿದೆ.

ಅರಮನೆ ಮೂಲಗಳ ಪ್ರಕಾರ ಕಿಂಗ್ ಫೆಲಿಪ್ ಬುಧವಾರ ಸಾಯಂಕಾಲ ಮ್ಯಾಡ್ರಿಡ್‌ನಲ್ಲಿ ಬೋಸ್ನಿಯನ್ ಪ್ರೆಸಿಡೆನ್ಸಿಯ ಕ್ರೊಯೇಷಿಯಾ ಸದಸ್ಯ ಜೆಲೊಜೊ ಕಾಮ್ಸಿಕ್ ಅವರನ್ನು ಭೇಟಿಯಾಗಬೇಕಿತ್ತು.

ಕಿಂಗ್ ಫಿಲಿಪ್ ಅವರು ಕೊವಿಡ್ ಲಸಿಕೆಯ ಮೊದಲ ಡೋಸ್ ಮೇ 2021 ರಲ್ಲಿ ಪಡೆದಿದ್ದರು, ಅದರೆ ಎರಡನೇ ಡೋಸ್ ತೆಗೆದುಕೊಂಡಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಖಚಿತವಾದ ಮಾಹಿತಿ ಇಲ್ಲ.

ಫೆಲಿಪ್ ಪತ್ನಿ ಮಹಾರಾಣಿ ಲೆಟಿಜಿಯಾ ಮತ್ತು ದಂಪತಿಯ ಕಿರಿ ಮಗಳು ಸೋಫಿಯಾ ಅವರಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸಿಲ್ಲ ಹಾಗಾಗಿ ಅವರು ತಮ್ಮ ಎಂದಿನ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ ಎಂದು ಅರಮನೆಯ ಪ್ರಕಟಣೆ ತಿಳಿಸುತ್ತದೆ.

ಅವರ ಜೇಷ್ಠ ಪುತ್ರಿ ಮತ್ತು ಸ್ಪೇನ್ ಅರಸೊತ್ತಿಗೆಯ ಉತ್ತರಾಧಿಕಾರಿ ಲಿಯೋನೊರ್ ವೇಲ್ಸ್​​​ನ ಬೋರ್ಡಿಂಗ್ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ:  ಮೆಟ್ಟೆ ಫ್ರೆಡ್ರಿಕ್ಸನ್​​ರನ್ನು ಬರಮಾಡಿಕೊಂಡ ಪ್ರಧಾನಿ ಮೋದಿ; ರಾಜ್​ಘಾಟ್​​ನಲ್ಲಿ ಗಾಂಧಿಗೆ ಗೌರವ ಸಲ್ಲಿಸಿದ ಡೆನ್ಮಾರ್ಕ್​ ಪ್ರಧಾನಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್