ಚೀನಾ ಬಿಟ್ಟು ಎಲ್ಲಾ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ ಟ್ರಂಪ್

ಇತ್ತೀಚೆಗಷ್ಟೇ ಎಲ್ಲಾ ದೇಶಗಳ ಪ್ರತಿಸುಂಕವನ್ನು ಹೆಚ್ಚಿಸಿ ಆದೇಶ ಹೊರಡಿಸಿದ್ದ ಡೊನಾಲ್ಡ್​ ಟ್ರಂಪ್, ಇದೀಗ 90 ದಿನಗಳ ಸುಂಕ ವಿರಾಮವನ್ನು ಘೋಷಿಸಿದ್ದಾರೆ. ಆದರೆ ಚೀನಾ ಹೊರತುಪಡಿಸಿ ಬೇರೆಲ್ಲಾ ರಾಷ್ಟ್ರಗಳಿಗೆ ಇದು ಅನ್ವಯವಾಗಲಿದೆ. 90ದಿನಗಳ ಕಾಲ ಯಾವುದೇ ಹೆಚ್ಚುವರಿ ಸುಂಕವನ್ನು ಯಾವ ದೇಶಗಳೂ ಪಾವತಿಸಬೇಕಿಲ್ಲ. ಆದರೆ ಇದರಿಂದಾಗಿ ಚೀನಾ ಹಾಗೂ ಅಮೆರಿಕದ ನಡುವಿನ ವ್ಯಾಪಾರ ಯುದ್ಧ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.

ಚೀನಾ ಬಿಟ್ಟು ಎಲ್ಲಾ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ ಟ್ರಂಪ್
ಡೊನಾಲ್ಡ್​ ಟ್ರಂಪ್
Image Credit source: The Financial Express

Updated on: Apr 10, 2025 | 7:20 AM

ವಾಷಿಂಗ್ಟನ್, ಏಪ್ರಿಲ್ 10: ಚೀನಾ ಜತೆಗಿನ ಅಮೆರಿಕದ ವ್ಯಾಪಾರ ಯುದ್ಧ ಮತ್ತಷ್ಟು ತೀವ್ರಗೊಂಡಿದೆ. ಡೊನಾಲ್ಡ್​ ಟ್ರಂಪ್(Donald Trump) ಆಡಳಿತವು ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕ್ರಮ ಕೈಗೊಂಡಿದ್ದು, ಚೀನಾ ಹೊರತುಪಡಿಸಿ ಬೇರೆಲ್ಲಾ ದೇಶಗಳಿಗೆ 90 ದಿನಗಳ ಸುಂಕ ವಿರಾಮ ಘೋಷಿಸಿದ್ದಾರೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ತೀವ್ರಗೊಳ್ಳುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಶೇಕಡಾ 125 ರಷ್ಟು ಹೆಚ್ಚಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.

ಇದಕ್ಕೂ ಮುನ್ನ ಚೀನಾ ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ. 84 ಕ್ಕೆ ಹೆಚ್ಚಿಸುವ ಮೂಲಕ ಪ್ರತೀಕಾರದ ಕ್ರಮ ಕೈಗೊಂಡಿತ್ತು. ಇದರೊಂದಿಗೆ, ಟ್ರಂಪ್ ಇತರ ಎಲ್ಲ ದೇಶಗಳಿಗೆ 90 ದಿನಗಳ ವಿರಾಮವನ್ನು ಘೋಷಿಸಿದ್ದರು.

ಇವು ಒಂದು ದೇಶವು ಮತ್ತೊಂದು ದೇಶದ ಸರಕುಗಳ ಮೇಲೆ ವಿಧಿಸುವ ಸುಂಕಗಳಾಗಿವೆ ಏಕೆಂದರೆ ಆ ದೇಶವು ಈಗಾಗಲೇ ತನ್ನ ಸರಕುಗಳ ಮೇಲೆ ಸುಂಕವನ್ನು ವಿಧಿಸಿದೆ. ಇದು ಒಂದು ರೀತಿಯ ಪ್ರತೀಕಾರದ ಕ್ರಮ.
90 ದಿನಗಳ ‘ವಿರಾಮ’ ಎಂದರೆ ಟ್ರಂಪ್ ಆಡಳಿತವು ಮುಂದಿನ 90 ದಿನಗಳವರೆಗೆ ಚೀನಾ ಹೊರತುಪಡಿಸಿ ದೇಶಗಳ ವಿರುದ್ಧ ಹೊಸ ಪ್ರತಿ ಸುಂಕಗಳನ್ನು ವಿಧಿಸುವುದಿಲ್ಲ. ಬಹುಶಃ ಅಸ್ತಿತ್ವದಲ್ಲಿರುವ ಪರಸ್ಪರ ಸುಂಕದಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ. ಇದು ತಾತ್ಕಾಲಿಕ ಪರಿಹಾರವಾಗಿರುತ್ತದೆ.

ಇದನ್ನೂ ಓದಿ
ಭಾರತದ ಮೇಲೆ ಶೇ.26ರಷ್ಟು ಪ್ರತಿ ಸುಂಕ ವಿಧಿಸಿದ ಡೊನಾಲ್ಡ್​ ಟ್ರಂಪ್
ಕೇರಳ ಶಾಸಕರ ಮೂಲ ವೇತನ 2,000 ರೂ ಮಾತ್ರ
ಆಸ್ತಿ ನೋಂದಣಿ ಸಂದರ್ಭದಲ್ಲಿ ಯಾರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು?
ವೆನುಜುವೇಲಾದಿಂದ ತೈಲ ಖರೀದಿಸಿದರೆ ಶೇ. 25 ಸುಂಕ: ಟ್ರಂಪ್ ಬೆದರಿಕೆ

ಮತ್ತಷ್ಟು ಓದಿ: ಟ್ರಂಪ್​ಗೆ ಚೀನಾ ತಿರುಗೇಟು; ಅಮೆರಿಕದ ಎಲ್ಲಾ ಆಮದು ಮೇಲೆ ಶೇ. 84 ಸುಂಕ ವಿಧಿಸಿದ ಬೀಜಿಂಗ್

90 ದಿನಗಳ ನಿಷೇಧವು ಚೀನಾವನ್ನು ಹೊರತುಪಡಿಸಿ ಎಲ್ಲಾ ದೇಶಗಳಿಗೆ ಅನ್ವಯಿಸುತ್ತದೆ. ಚೀನಾ ವಿರುದ್ಧದ ಸುಂಕಗಳಿಗೆ ಸಂಬಂಧಿಸಿದಂತೆ ಅಮೆರಿಕದ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬದಲಾಗಿ, ಟ್ರಂಪ್ ಚೀನಾದ ಮೇಲಿನ ಸುಂಕವನ್ನು ಶೇ.125 ಕ್ಕೆ ಹೆಚ್ಚಿಸಿದ್ದಾರೆ.

ಇದಕ್ಕೂ ಮುನ್ನ ಚೀನಾ ಅಮೆರಿಕದ ಉತ್ಪನ್ನಗಳ ಮೇಲೆ ಶೇ. 84 ರಷ್ಟು ಸುಂಕ ವಿಧಿಸುವುದಾಗಿ ಹೇಳುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು. ಟ್ರಂಪ್ ಅವರ ಈ ಕ್ರಮದಿಂದಾಗಿ ಅಮೆರಿಕದಲ್ಲಿ ಚೀನಾದ ಸರಕುಗಳು ತುಂಬಾ ದುಬಾರಿಯಾಗಲಿವೆ.

ಅಮೆರಿಕದ ಗ್ರಾಹಕರು ಚೀನಾದ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಬೆಲೆಗಳನ್ನು ತೆರಬೇಕಾಗುತ್ತದೆ. ಇದು ಅವರ ಜೇಬಿನ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ. ಚೀನಾದಿಂದ ಅಮೆರಿಕ ಕಡಿಮೆ ಸರಕುಗಳನ್ನು ಖರೀದಿಸುತ್ತದೆ ಏಕೆಂದರೆ ಅವು ಹೆಚ್ಚು ದುಬಾರಿಯಾಗುತ್ತವೆ. ಚೀನಾದಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ತಮ್ಮ ಸರಕುಗಳನ್ನು ಉತ್ಪಾದಿಸುವ ಅಮೆರಿಕನ್ ಕಂಪನಿಗಳ ವೆಚ್ಚಗಳು ಹೆಚ್ಚಾಗುತ್ತವೆ, ಇದು ಅವರ ಸ್ಪರ್ಧಾತ್ಮಕತೆಯನ್ನು ಕಡಿಮೆ ಮಾಡುತ್ತದೆ.

ಈ ಕ್ರಮವು ಎರಡೂ ದೇಶಗಳ ನಡುವಿನ ವ್ಯಾಪಾರ ಯುದ್ಧವನ್ನು ಮತ್ತಷ್ಟು ಆಳಗೊಳಿಸುತ್ತದೆ. ಇದು ಸಂಬಂಧಗಳನ್ನು ಮತ್ತಷ್ಟು ಹದಗೆಡಿಸುತ್ತದೆ. ಇತರ ದೇಶಗಳಿಗೆ ಅಮೆರಿಕುವ ವಿಧಿಸಿರುವ ಸುಂಕಗಳಿಗೆ 90 ದಿನಗಳ ವಿನಾಯಿತಿ ನೀಡಿದ್ದು, ಆ ಬಳಿಕ ಸುಂಕ ಹೆಚ್ಚಳ ಮಾಡಲಾಗುವುದು ಎಂದು ಡೊನಾಲ್ಡ್‌ ಟ್ರಂಪ್ ಅಧಿಕೃತ ಹೇಳಿಕೆ ನೀಡಿದ್ದಾರೆ. ಈಗಾಗಲೇ ಸುಂಕ ವಿನಾಯಿತಿಗಾಗಿ ಶ್ವೇತಭವನದ ಕದ ತಟ್ಟಿರುವ 75 ದೇಶಗಳಳಿಗೆ ಇದರಿಂದ ಅನುಕೂಲವಾಗಲಿದೆ ಎನ್ನಲಾಗಿದೆ.

ಟ್ರಂಪ್ ಅವರು ಸುಂಕದ ಕುರಿತು ಘೋಷಣೆ ಮಾಡುತ್ತಿದ್ದಂತೆ ಅಮೆರಿಕ ಶೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಕಚ್ಛಾ ತೈಲ ಮಾರುಕಟ್ಟೆಯಲ್ಲಿಯೂ ಒಮ್ಮೆಲೆ ತಲ್ಲಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ