ಅಂತ್ಯಸಂಸ್ಕಾರ ಮಾಡಲು ಹೋಗಿ ಶವಪೆಟ್ಟಿಗೆಯೊಂದಿಗೆ ಗುಂಡಿಯೊಳಗೆ ಬಿದ್ದ ಇಡೀ ಕುಟುಂಬ
ಇಡೀ ಕುಟುಂಬವು ತಮ್ಮ ಮನೆಯ ಸದಸ್ಯನ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸುತ್ತಾ, ಮೌನವಾಗಿ ಸ್ಮಶಾನಕ್ಕೆ ಸಾಗಿತ್ತು. ಅಲ್ಲಿ ಶವದ ಪೆಟ್ಟಿಗೆಯನ್ನು ಗುಂಡಿಯ ಬಳಿ ತೆಗೆದುಕೊಂಡು ಹೋಗುತ್ತಿದ್ದಾಗ ಮರದ ವೇದಿಕೆ ಕುಸಿದು ಎಲ್ಲರೂ ಕೆಳಗೆ ಬಿದ್ದಿದ್ದಾರೆ. ಮಾರ್ಚ್ 21ರಂದು ಬೆಂಜಮಿನ್ ಅವಿಲ್ಸ್ ಎಂಬುವವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಗೆಂದು ಕುಟುಂಬ ಸದಸ್ಯರು ಸ್ಮಶಾನಕ್ಕೆ ಆಗಮಿಸಿದ್ದರು.

ಫಿಲಡೆಲ್ಫಿಯಾ, ಏಪ್ರಿಲ್ 10: ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆಂದು ಸ್ಮಶಾನ(Cemetery)ಕ್ಕೆ ಹೋಗಿದ್ದ ಕುಟುಂಬವು ಶವ ಪೆಟ್ಟಿಗೆಯೊಂದಿಗೆ ಗುಂಡಿಗೆ ಬಿದ್ದಿರುವ ಘಟನೆ ಫಿಲಡೆಲ್ಫಿಯಾದಲ್ಲಿ ನಡೆದಿದೆ. ಶವ ಪೆಟ್ಟಿಗೆಯನ್ನು ಹೊತ್ತು ಕುಟುಂಬ ಸದಸ್ಯರು ಭಾರವಾದ ಮನಸ್ಸಿನೊಂದಿಗೆ ಸ್ಮಶಾನಕ್ಕೆಬಂದಿದ್ದರು. ಮಾರ್ಚ್ 21ರಂದು ಬೆಂಜಮಿನ್ ಅವಿಲ್ಸ್ ಎಂಬುವವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಗೆಂದು ಕುಟುಂಬ ಸದಸ್ಯರು ಸ್ಮಶಾನಕ್ಕೆ ಆಗಮಿಸಿದ್ದರು. ಅಂತಿಮ ವಿಧಿವಿಧಾನಗಳಿಗಾಗಿ ಗ್ರೀನ್‌ಮೌಂಟ್ ಸ್ಮಶಾನದಲ್ಲಿ ಪ್ರೀತಿಪಾತ್ರರು ಒಟ್ಟುಗೂಡಿದಾಗ, ದುರಂತ ಸಂಭವಿಸಿದೆ.
ಗುಂಡಿಯ ಬಳಿ ಶವಪೆಟ್ಟಿಯೆನ್ನು ಕೆಳಗೆ ಇಳಿಸಲು ಪ್ರಯತ್ನಿಸುತ್ತಿದ್ದಾಗ ಕುಟುಂಬ ಸದಸ್ಯರ ಸಮೇತ ಎಲ್ಲರೂ ಸಮಾಧಿಗೆಂದು ತೋಡಲಾಗಿದ್ದ ಗುಂಡಿಯಲ್ಲಿ ಬಿದ್ದಿದ್ದಾರೆ. ಆಘಾತಕಾರಿ ಘಟನೆಯಲ್ಲಿ ಮೃತರ ಮಗ ಶವ ಪೆಟ್ಟಿಗೆ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ.
NEW: Deceased man’s son gets trapped under his father’s casket after a platform collapsed, taking the entire family into the grave.
That’s unfortunate.
The incident happened at a funeral in Philadelphia for Benjamin Aviles who passed away in late March.
When the pallbearers… pic.twitter.com/0Zha1mnKnN
— Collin Rugg (@CollinRugg) April 8, 2025
ಐದಾರು ಮಂದಿ ಶವ ಪೆಟ್ಟಿಗೆ ಹಿಡಿದು ಮರದ ವೇದಿಕೆಯಂತಿದ್ದ ಸ್ಥಳಕ್ಕೆ ಬಂದಿದ್ದಾರೆ, ಕೂಡಲೇ ಆ ವೇದಿಕೆ ಕುಸಿದಿತ್ತು, ಅಲ್ಲಿ ಮುಂದಿರುವ ಗುಂಡಿಯಲ್ಲಿ ಎಲ್ಲರೂ ಬಿದ್ದಿದ್ದಾರೆ. ಹಲವು ಮಂದಿಗೆ ಕೈಕಾಲುಗಳು ಮುರಿದಿವೆ. ಸ್ಮಶಾನದಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿರುವ ಬಗ್ಗೆ ಅವಿಲ್ಸ್ ಕುಟುಂಬವು ಕೋಪ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿತು.
ಮತ್ತಷ್ಟು ಓದಿ: ವೇಗವಾಗಿ ಚಲಿಸುವ ರೈಲಿನ ಫುಟ್ ಬೋರ್ಡಿಂಗ್ ಮೇಲೆ ವಿದ್ಯಾರ್ಥಿಗಳ ಹುಚ್ಚಾಟ, ಇಲ್ಲಿದೆ ವಿಡಿಯೋ
ಕ್ಯಾಮೆರಾದಲ್ಲಿ ಸೆರೆಯಾದ ಈ ಆಘಾತಕಾರಿ ಘಟನೆ ಈಗ ವೈರಲ್ ಆಗಿದ್ದು, ಅಂತ್ಯಕ್ರಿಯೆ ಪದ್ಧತಿಗಳಲ್ಲಿನ ಸುರಕ್ಷತಾ ಮಾನದಂಡಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಈ ವಿಷಯದ ಬಗ್ಗೆ ಗ್ರೀನ್‌ಮೌಂಟ್ ಸ್ಮಶಾನವು ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:22 am, Thu, 10 April 25