ಇದು ಅಮ್ಮ ಪ್ರೀತಿ: ಹೇ ನನ್ನ ಕಂದಮ್ಮನನ್ನು ಎಲ್ಲಿಗೆ ಹೊತ್ಕೊಂಡು ಹೋಗ್ತಾ ಇದ್ದೀಯಾ, ಬಿಟ್ಟು ಬಿಡೋ
ಪ್ರಾಣಿಗಳು ಕೂಡ ತನ್ನ ಮರಿಗಳು ಸಂಕಷ್ಟದಲ್ಲಿ ಸಿಲುಕಿದರೆ ರಕ್ಷಿಸಲು ಒದ್ದಾಡುವುದನ್ನು ನೋಡಿರಬಹುದು, ಇದುವೇ ನೋಡಿ ನಿಜವಾದ ತಾಯಿ ಕರುಳು. ಹೌದು, ಈ ತಾಯಿ ಪ್ರೀತಿಯನ್ನು ಸಾರುವ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇಲ್ಲೊಬ್ಬಬ ವ್ಯಕ್ತಿಯೂ ಏಕಾಏಕಿ ಮರಿ ಒಂಟೆಯನ್ನು ಹೊತ್ತುಕೊಂಡು ಹೋಗುತ್ತಿದ್ದಂತೆ ಅಲ್ಲೇ ಇದ್ದ ತಾಯಿ ಒಂಟೆಯೂ ತನ್ನ ಮರಿಯನ್ನು ರಕ್ಷಿಸಲು ಓಡೋಡಿ ಬಂದಿರುವ ಈ ಹೃದಯ ಸ್ಪರ್ಶಿ ವಿಡಿಯೋವೊಂದು ನೆಟ್ಟಿಗರ ಮನಸ್ಸನ್ನು ಗೆದ್ದು ಕೊಂಡಿದೆ.

ತಾಯಿ (mother) ಎಂದರೆ ತ್ಯಾಗ ಮೂರ್ತಿ, ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಷ್ಟ ಎಂದರೆ ತಾಯಿ ಹೃದಯ ಸಹಜವಾಗಿಯೇ ಮಿಡಿಯುತ್ತದೆ. ಏನೇ ಬಂದರೂ ತನ್ನ ಕಂದಮ್ಮನಿಗೆ ಯಾವ ಕಷ್ಟ ಬರಬಾರದು ಎಂದು ಬಯಸುತ್ತಾಳೆ. ಈ ವಿಷಯದಲ್ಲಿ ಪ್ರಾಣಿಗಳು (animals) ಹೊರತಾಗಿಲ್ಲ. ಪ್ರಾಣಿಗಳು ಕಂದಮ್ಮಗಳನ್ನು ಅಷ್ಟೇ ಪ್ರೀತಿಸಿ ಜೋಪಾನ ಮಾಡುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತಾಯಿ ಒಂಟೆಯೊಂದು ತನ್ನ ಮರಿಯನ್ನು ತನ್ನಿಂದ ದೂರ ಮಾಡುತ್ತಾರೆ ಎನ್ನುವ ಭಯದಿಂದ ರಕ್ಷಿಸಲು ಓಡುವ ಹೃದಯಸ್ಪರ್ಶಿ ವಿಡಿಯೋ ವೈರಲ್ (viral) ಆಗಿದ್ದು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.
Nature Amazing ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನು ಕಾರಿನಿಂದ ಇಳಿದು ಮರುಭೂಮಿಯಲ್ಲಿದ್ದ ಒಂಟೆ ಮರಿಯನ್ನು ಎತ್ತಿಕೊಂಡು ಓಡುವುದನ್ನು ಕಾಣಬಹುದು. ಆ ಕೂಡಲೇ ಅಲ್ಲೇ ಇದ್ದ ತಾಯಿ ಒಂಟೆ ಆ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ತನ್ನ ಮರಿಯನ್ನು ರಕ್ಷಿಸಲು ಮುಂದಾಗಿದೆ. ಅತನು ಒಂಟೆ ಮರಿಯನ್ನು ಅಲ್ಲೇ ಬಿಟ್ಟು ಡಾನ್ಸ್ ಮಾಡುತ್ತಾ ಕಾರಿನತ್ತ ಬರುತ್ತಿದ್ದಾನೆ. ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿರುವ ವ್ಯಕ್ತಿಯೂ ಜೋರಾಗಿ ನಗುವುದನ್ನು ನೋಡಬಹುದು.
ಇದನ್ನೂ ಓದಿ: ನಾನು ರಾಜೀನಾಮೆ ನೀಡುತ್ತೇನೆ : ಏಳು ಪದಗಳಲ್ಲೇ ರಾಜೀನಾಮೆ ಪತ್ರ ಬರೆದು ಕೆಲಸ ತೊರೆದ ಉದ್ಯೋಗಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Creatively putting a Camel and her calf out of harms way. pic.twitter.com/mUncot97Wa
— Nature is Amazing ☘️ (@AMAZlNGNATURE) April 3, 2025
ಈ ವಿಡಿಯೋವು ಆರು ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡುಕೊಂಡಿದ್ದು ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದು, ‘ಮಕ್ಕಳನ್ನು ಕಷ್ಟದಲ್ಲಿ ನೋಡಲು ಯಾವ ತಾಯಿ ಬಯಸುವುದಿಲ್ಲ’ ಎಂದಿದ್ದಾರೆ. ಮತ್ತೊಬ್ಬರು, ‘ನೀವು ಖುಷಿ ಪಡಲು ಪ್ರಾಣಿಗಳ ಭಾವನೆ ಜೊತೆಗೆ ಈ ರೀತಿ ಆಟ ಆಡಬೇಡಿ’ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, ‘ಇಂತಹ ವಿಡಿಯೋಗಳು ಸಹಜವಾಗಿ ಹೃದಯ ಗೆಲ್ಲುತ್ತದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:19 am, Mon, 7 April 25