ಅಮೆರಿಕದಲ್ಲಿ ಅಕ್ರಮ ವಲಸಿಗರ ವಿರುದ್ಧ ಟ್ರಂಪ್ ಕಠಿಣ ನಿಲುವು
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ತಾವು ಅಧಿಕಾರ ವಹಿಸಿಕೊಂಡ ನಂತರ, ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡುವ ಯೋಜನೆಯೊಂದಿಗೆ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಅವರು, ಕಾನೂನುಬದ್ಧವಾಗಿ ಅಮೆರಿಕಕ್ಕೆ ಬರುವವರಿಗೆ ದಾರಿಯನ್ನು ಸುಗಮಗೊಳಿಸುವುದಾಗಿ ಅವರು ಹೇಳಿದರು.
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್(Donald Trump) ತಾವು ಅಧಿಕಾರ ವಹಿಸಿಕೊಂಡ ನಂತರ, ಅಕ್ರಮ ವಲಸಿಗರನ್ನು ದೇಶದಿಂದ ಗಡಿಪಾರು ಮಾಡುವ ಯೋಜನೆಯೊಂದಿಗೆ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿದ ಅವರು, ಕಾನೂನುಬದ್ಧವಾಗಿ ಅಮೆರಿಕಕ್ಕೆ ಬರುವವರಿಗೆ ದಾರಿಯನ್ನು ಸುಗಮಗೊಳಿಸುವುದಾಗಿ ಹೇಳಿದರು.
ಟ್ರಂಪ್ ಅವರ ಭವಿಷ್ಯದ ಯೋಜನೆಗಳು ಅಮೆರಿಕದಲ್ಲಿ ಕೆಲಸ ಮಾಡುವ ಭಾರತೀಯರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಎನ್ಬಿಸಿ ನ್ಯೂಸ್ಗೆ ಟ್ರಂಪ್ ನೀಡಿದ್ದ ಸಂದರ್ಶನದಲ್ಲಿ ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಹಾಕುವ ಕುರಿತು ಮಾತನಾಡಿದ್ದಾರೆ. ನಾಲ್ಕು ವರ್ಷಗಳಿಗಿಂತ ಹೆಚ್ಚು ಕಾಲ ಅಕ್ರಮವಾಗಿ ಅಮೆರಿಕದಲ್ಲಿ ವಾಸಿಸುತ್ತಿದ್ದರೆ ಅವರನ್ನು ಗಡಿಪಾರು ಮಾಡುತ್ತೀರಾ ಎಂದು ಅವರನ್ನು ಪ್ರಶ್ನೆ ಮಾಡಲಾಗಿತ್ತು.
ಅದಕ್ಕೆ ಉತ್ತರಿಸಿದ ಅವರು ಆ ಜನರು ಅಕ್ರಮವಾಗಿ ಬಂದಿದ್ದಾರೆ ಕೆಲವರು ದೇಶಕ್ಕೆ ಬರಲು ಕಳೆದ 10 ವರ್ಷಗಳಿಂದ ಕಾನೂನು ಬದ್ಧವಾಗಿ ಪ್ರಯತ್ನ ಪಡುತ್ತಿದ್ದಾರೆ, ಅವರಿಗೆ ಅನ್ಯಾಯವಾಗಿದೆ, ಆ ಜನರಿಗಾಗಿ ನಾನು ಇಂದು ಈ ರೀತಿಯ ಕ್ರಮ ಕೈಗೊಳ್ಳಲೇಬೇಕಿದೆ ಎಂದರು.
ಮತ್ತಷ್ಟು ಓದಿ: 4 ವರ್ಷಗಳ ಬಳಿಕ ವೈಟ್ಹೌಸ್ನಲ್ಲಿ ಡೊನಾಲ್ಡ್ ಟ್ರಂಪ್-ಜೋ ಬೈಡೆನ್ ಭೇಟಿ
ಅಮೆರಿಕದಲ್ಲಿ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಇರುವುದು ಬೇಡ, ಕಳೆದ ಮೂರು ವರ್ಷಗಳಲ್ಲಿ 13,099 ಕೊಲೆಗಾರರನ್ನು ಬಿಡುಗಡೆ ಮಾಡಲಾಗಿದೆ. ಅವರು ಬೀದಿಗಳನ್ನು ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಅಂಥಾ ಜನರು ನಮ್ಮೊಂದಿಗಿರುವುದು ಬೇಡ ಎಂದು ಹೇಳಿದರು.
ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ ಆಯುಕ್ತರಾಗಿ ರಾಡ್ನಿ ಸ್ಕಾಟ್ ಅವರು ನೇಮಕಗೊಂಡಿದ್ದಾರೆ. ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಕಾಟ್ ಅವರ ನೇಮಕವನ್ನು ಘೋಷಿಸಿದ್ದಾರೆ. ದೇಶದಲ್ಲಿ ಕಾನೂನು ಬಾಹಿರ ವಲಸೆ ತಡೆಯುವ ಹೊಣೆಯನ್ನು ಸಿಬಿಪಿ ನಿಭಾಯಿಸಲಿದೆ.
ಟ್ರಂಪ್ ಅವರ ಕಠಿಣ ವಲಸೆ ಮತ್ತು ಗಡಿ ನೀತಿಗಳನ್ನು ಸ್ಕಾಟ್ ಅವರು ಬೆಮಬಲಿಸುತ್ತಿದ್ದರು. ಈ ನೇಮಕದಿಂದಾಗಿ ಅಮೆರಿಕದಲ್ಲಿ ವಲಸೆ ಕುರಿತ ನೀತಿಗಳು ಇನ್ನಷ್ಟು ಬಿಗಿಗೊಳ್ಳಲಿವೆ ಎನ್ನಲಾಗುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:01 am, Mon, 9 December 24