
ವಾಷಿಂಗ್ಟನ್, ಫೆಬ್ರವರಿ 21: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಕ್ಷಣವೇ ಜಾರಿಗೆ ಬರುವಂತೆ ಜಾಗತಿಕ ಸುಂಕವನ್ನು ಶೇ. 10ರಿಂದ ಶೇ. 15ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಡೊನಾಲ್ಡ್ ಟ್ರಂಪ್ ವಿಧಿಸಿದ್ದ ಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ಇಂದು ಮತ್ತೆ ಟ್ರಂಪ್ ಹೊಸ ಸುಂಕ ಘೋಷಣೆ ಮಾಡಿದ್ದಾರೆ. “ನಾನು, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಅಧ್ಯಕ್ಷನಾಗಿ, ತಕ್ಷಣವೇ ಜಾರಿಗೆ ಬರುವಂತೆ ಜಗತ್ತಿನ ಎಲ್ಲ ದೇಶಗಳ ಮೇಲಿನ ಶೇ. 10ರಷ್ಟು ಸುಂಕವನ್ನು ಕಾನೂನುಬದ್ಧವಾಗಿಯೇ ಶೇ. 15ಕ್ಕೆ ಹೆಚ್ಚಿಸಿದ್ದೇನೆ” ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರಂಪ್ ಘೋಷಣೆ ಮಾಡಿದ್ದಾರೆ.
“ಅಮೆರಿಕವನ್ನು ಮತ್ತೊಮ್ಮೆ ಹಿಂದೆಂದಿಗಿಂತಲೂ ಶ್ರೇಷ್ಠವಾಗಿಸುವುದು ಈ ನೂತನ ಸುಂಕದ ಗುರಿ” ಎಂದು ಟ್ರಂಪ್ ಘೋಷಿಸಿದ್ದಾರೆ. ಈ ನೂತನ ಸುಂಕ ತಕ್ಷಣದಿಂದಲೇ ಜಾರಿಗೆ ಬರಲಿದೆ. ಈ ಸುಂಕ ಎಲ್ಲ ದೇಶಗಳಿಗೂ ಅನ್ವಯವಾಗಲಿದೆ. ಈ ಸುಂಕ ಅಮೆರಿಕದಲ್ಲಿ ಬೃಹತ್ ಆದಾಯ ಮತ್ತು ಕೈಗಾರಿಕಾ ಪುನರುಜ್ಜೀವನವನ್ನು ಬಿಂಬಿಸುತ್ತದೆ. ಮಿತ್ರರಾಷ್ಟ್ರಗಳಿಂದ ವಿರೋಧಿಗಳವರೆಗೆ ರಾಷ್ಟ್ರಗಳು ಎಲ್ಲ ದೇಶಗಳೂ ಇಂದಿನಿಂದಲೇ ಈ ಹೊಸ ಸುಂಕವನ್ನು ಎದುರಿಸಲಿವೆ.
ಇದನ್ನೂ ಓದಿ: ಟ್ರಂಪ್ ಸೊಕ್ಕು ಮುರಿದ ಅಮೆರಿಕ ಸುಪ್ರೀಂ ಕೋರ್ಟ್: ಭಾರತದ ಉತ್ಪನ್ನಗಳ ಮೇಲಿನ ತೆರಿಗೆಯೂ ಶೇ 10ಕ್ಕೆ ಇಳಿಕೆ!
ಈ ನಡುವೆ, ನಿನ್ನೆ ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಕ್ಯಾಬಿನೆಟ್ ಗಮನಕ್ಕೆ ತಾರದೆ ಟ್ರಂಪ್ ಏಕಪಕ್ಷೀಯವಾಗಿ ಸುಂಕವನ್ನು ವಿಧಿಸಲು ಸಾಧ್ಯವಿಲ್ಲ, ಇದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಟ್ರಂಪ್ ಈಗಾಗಲೇ ವಿಧಿಸಿದ ಸುಂಕ ನೀತಿಯನ್ನು ಕೋರ್ಟ್ ರದ್ದುಗೊಳಿಸಿತ್ತು. ಇದಾದ ಬಳಿಕ ಟ್ರಂಪ್ ಜಾಗತಿಕ ಸುಂಕವನ್ನು ಶೇ. 10ಕ್ಕೆ ಇಳಿಕೆ ಮಾಡಿ ಹೊಸ ಆದೇಶ ಹೊರಡಿಸಿದ್ದರು. ಇದರಿಂದ ಭಾರತ ಸೇರಿದಂತೆ ಬೇರೆ ದೇಶಗಳ ಸರ್ಕಾರಗಳಿಗೆ ಗೊಂದಲ ಉಂಟಾಗಿತ್ತು. ಇದೀಗ ಮತ್ತೆ ಸುಂಕವನ್ನು ಟ್ರಂಪ್ ಶೇ. 15ಕ್ಕೆ ಹೆಚ್ಚಿಸಿದ್ದಾರೆ. ಹಾಗೇ, ಯುಎಸ್ ಸುಪ್ರೀಂ ಕೋರ್ಟ್ ತೀರ್ಪನ್ನು ತೀವ್ರವಾಗಿ ಟೀಕಿಸಿರುವ ಟ್ರಂಪ್ ಅದನ್ನು “ಅಮೆರಿಕನ್ ವಿರೋಧಿ” ಎಂದು ಕರೆದಿದ್ದಾರೆ.
trump post
ಇಂದು ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ, ಟ್ರಂಪ್ ಹೆಚ್ಚಿನ ಸುಂಕವು ತಕ್ಷಣವೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ. ಹಲವಾರು ದೇಶಗಳು ದಶಕಗಳಿಂದ ಅಮೆರಿಕವನ್ನು ಶೋಷಿಸುತ್ತಿವೆ ಎಂದು ಅವರು ಆರೋಪಿಸಿದ್ದು, ಪರಿಷ್ಕೃತ ದರವು ಕಾನೂನುಬದ್ಧವಾಗಿ ಸರಿಯಾಗಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 pm, Sat, 21 February 26