Dubai floating mosque: ದುಬೈನಲ್ಲಿ ಮತ್ತೊಂದು ಅದ್ಭುತ ಕಟ್ಟಡ ನಿರ್ಮಾಣ.. ನೀರಿನಲ್ಲಿ ತೇಲುವ ಮಸೀದಿ! ಏನೆಲ್ಲಾ ಇರುತ್ತದೆ ಗೊತ್ತಾ?

ವಿಶ್ವದಲ್ಲಿಯೇ ಮೊದಲ ಬಾರಿಗೆ ತೇಲುವ ಮಸೀದಿಯನ್ನು ನಿರ್ಮಿಸುವುದಾಗಿ ಯುಎಇ ಘೋಷಿಸಿದೆ. ಈ ಮಸೀದಿಯಲ್ಲಿ ಮೂರು ಮಹಡಿಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಎಮಿರೇಟ್ಸ್​ ಇಸ್ಲಾಮಿಕ್ ಅಫೇರ್ಸ್ ಮತ್ತು ಚಾರಿಟಬಲ್ ಆಕ್ಟಿವಿಟೀಸ್ ಡಿಪಾರ್ಟ್‌ಮೆಂಟ್‌ನ ಕೃಪೆಯಿಂದಾಗಿ ಈ ವಿಶಿಷ್ಟ ಪ್ರಾರ್ಥನಾ ಸ್ಥಳವು ಪ್ರಸ್ತುತ ದುಬೈ ವಾಟರ್ ಕೆನಾಲ್‌ನಲ್ಲಿ ನಿರ್ಮಾಣ ಹಂತದಲ್ಲಿದೆ.

Dubai floating mosque: ದುಬೈನಲ್ಲಿ ಮತ್ತೊಂದು ಅದ್ಭುತ ಕಟ್ಟಡ ನಿರ್ಮಾಣ.. ನೀರಿನಲ್ಲಿ ತೇಲುವ ಮಸೀದಿ! ಏನೆಲ್ಲಾ ಇರುತ್ತದೆ ಗೊತ್ತಾ?
Dubai floating mosque: ದುಬೈನಲ್ಲಿ ಮತ್ತೊಂದು ಅದ್ಭುತ ಕಟ್ಟಡ ನಿರ್ಮಾಣ
Follow us
ಸಾಧು ಶ್ರೀನಾಥ್​
|

Updated on:Sep 23, 2023 | 3:43 PM

ದುಬೈನಲ್ಲಿ ಸ್ಪಟಿಕದಂತಹ ನೀರು ಇರುವ ಕಾಲುವೆಗಳಲ್ಲಿ 5.5 ಕೋಟಿ ದಿರಹಂ ವೆಚ್ಚ ಮಾಡಿ ಅಂದರೆ ಸುಮಾರು 125 ಕೋಟಿ ರೂ. ವೆಚ್ಚ ಮಾಡಿ, ನೀರಿನ ಮೇಲೆ  ತೇಲುವ ಮಸೀದಿ (floating mosque) ನಿರ್ಮಿಸಲಾಗುವುದು. ಇಸ್ಲಾಮಿಕ್ ವ್ಯವಹಾರಗಳು ಮತ್ತು ಚಾರಿಟಬಲ್ ಚಟುವಟಿಕೆಗಳ ಇಲಾಖೆ (ಐಸಿಎಡಿ -Islamic Affairs and Charitable Activities Department in Dubai) ಅಧಿಕಾರಿಗಳು ಮುಂದಿನ ವರ್ಷ ಮಸೀದಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ (Religious Tourism Project) ಮಾಡಲಾಗುವುದು ಎಂದು ಹೇಳಿದ್ದಾರೆ.

ವಿಶ್ವದಲ್ಲಿಯೇ ಮೊದಲ ಬಾರಿಗೆ ತೇಲುವ ಮಸೀದಿಯನ್ನು ನಿರ್ಮಿಸುವುದಾಗಿ ಯುಎಇ ಘೋಷಿಸಿದೆ. ಈ ಮಸೀದಿಯಲ್ಲಿ ಮೂರು ಮಹಡಿಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಎಮಿರೇಟ್ಸ್​ ಇಸ್ಲಾಮಿಕ್ ಅಫೇರ್ಸ್ ಮತ್ತು ಚಾರಿಟಬಲ್ ಆಕ್ಟಿವಿಟೀಸ್ ಡಿಪಾರ್ಟ್‌ಮೆಂಟ್‌ನ ಕೃಪೆಯಿಂದಾಗಿ ಈ ವಿಶಿಷ್ಟ ಪ್ರಾರ್ಥನಾ ಸ್ಥಳವು ಪ್ರಸ್ತುತ ದುಬೈ ವಾಟರ್ ಕೆನಾಲ್‌ನಲ್ಲಿ ನಿರ್ಮಾಣ ಹಂತದಲ್ಲಿದೆ. ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ದುಬೈಗೆ ಭೇಟಿ ನೀಡುವವರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಮಸೀದಿಯು ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ಮೂರು ಅಂತಸ್ತಿನ ರಚನೆಯಾಗಿದೆ. ಒಂದೇ ಸಮಯದಲ್ಲಿ 50 ರಿಂದ 75 ಭಕ್ತರು ಪ್ರಾರ್ಥನೆ ಸಲ್ಲಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಮುಸಲ್ಮಾನರು ಪ್ರಾರ್ಥನೆಗಾಗಿ ವಿಶೇಷವಾಗಿ ನಿರ್ಮಿಸಲಾದ ಈ ತೇಲುವ ಮಸೀದಿಗೆ ಭೇಟಿ ನೀಡಬಹುದು(Islamic tourism). ಇದು ಎಮಿರೇಟ್ಸ್​​ನಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಹೆಚ್ಚುವರಿಯಾಗಿ, ಮಸೀದಿಯು ಶೇಖ್ ಮಕ್ತೌಮ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಕುರಾನ್‌ ಪ್ರದರ್ಶನವನ್ನು ಆಯೋಜಿಸುತ್ತದೆ.

ಮಸೀದಿಯು ನೀರಿನ ಮೇಲೆ ಎರಡು ಮಹಡಿಗಳನ್ನು ಹೊಂದಿರುತ್ತದೆ, ಮುಂದಿನ ವರ್ಷದ ವೇಳೆಗೆ ಸಂದರ್ಶಕರಿಗೆ ಇಸ್ಲಾಮಿಕ್ ಉಪನ್ಯಾಸಗಳು, ಕಾರ್ಯಾಗಾರಗಳು ಇತ್ಯಾದಿಗಳಿಗಾಗಿ ಇಲ್ಲಿ ಸಭಾಂಗಣ ನಿರ್ಮಿಸಲಾಗುವುದು. ಗಮನಾರ್ಹ ಸಂಗತಿಯೆಂದರೆ, ಈ ತೇಲುವ ಮಸೀದಿ ಎಲ್ಲಾ ಧರ್ಮದ ಜನರನ್ನು ಆಹ್ವಾನಿಸುತ್ತದೆ. ಸಂದರ್ಶಕರು ಸಾಧಾರಣವಾದ ಸಾಮಾನ್ಯವಾದ ಉಡುಗೆ ತೊಟ್ಟುಬರಬಹುದು. ಆದರೂ ಇಸ್ಲಾಮಿಕ್ ಪದ್ಧತಿಗಳನ್ನು ಗೌರವಿಸಲು ವಿನಂತಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:41 pm, Sat, 23 September 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್