Japan Earthquake: ಜಪಾನ್ನಲ್ಲಿ ಪ್ರಬಲ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.5ರಷ್ಟು ತೀವ್ರತೆ ದಾಖಲು
ಸತತ ಮಳೆಯಿಂದ ನಲುಗುತ್ತಿರುವ ತಮಿಳುನಾಡಿನಲ್ಲೂ ಇಂದು ಭೂಕಂಪನವಾಗಿದೆ.ಇಂದು ಮುಂಜಾನೆ 4.17ರ ಹೊತ್ತಗೆ ತಮಿಳುನಾಡಿನ ವೆಲ್ಲೋರ್ನಲ್ಲಿ ಭೂಕಂಪ ಆಗಿದ್ದು, ಭೂಮೇಲ್ಮೈಯಿಂದ 25 ಕಿಮೀ ಆಳದಲ್ಲಿ ಕಂಪಿಸಿದೆ.
ಜಪಾನ್ನ ಹೊನ್ಶು ಪ್ರದೇಶದ ಆಗ್ನೇಯ ಭಾಗದಲ್ಲಿ ಇಂದು ಸಂಜೆ 6 ಗಂಟೆ ಹೊತ್ತಿಗೆ ಪ್ರಬಲ ಭೂಕಂಪ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.5ರಷ್ಟು ದಾಖಲಾಗಿದೆ ಎಂದು ಜಿಎಫ್ಝಡ್ ಜರ್ಮನ್ ಭೂಕಂಪನ ಸಂಶೋಧನಾ ಕೇಂದ್ರ ತಿಳಿಸಿದೆ. ಹಾಗೇ, ಭೂಮೇಲ್ಮೈಯಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದೂ ಹೇಳಲಾಗಿದೆ. ಯಾವುದೇ ಸಾವು-ನೋವಿನ ವರದಿ ಆಗಿಲ್ಲ.
ಇತ್ತೀಚೆಗೆ ಭಾರತ ಸೇರಿ ವಿವಿಧ ದೇಶಗಳಲ್ಲಿ ಆಗಾಗ ಭೂಕಂಪನ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ 6.3 ರಷ್ಟು ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಬಾಂಗ್ಲಾದೇಶದ ಚಿತ್ತಗಾಂಗ್ನಿಂದ ಪೂರ್ವಕ್ಕೆ 175 ಕಿಮೀ ದೂರದಲ್ಲಿ, ಭೂಮೇಲ್ಮೈಯಿಂದ 60ಕಿಮೀ ಆಳದಲ್ಲಿ ಭೂಮಿ ನಡುಗಿತ್ತು.
An earthquake with a magnitude of 6.5 on the Richter Scale hit Southeast of Honshu, Japan today at 6:10 pm: National Centre for Seismology pic.twitter.com/cq5XTZpPBo
— ANI (@ANI) November 29, 2021
ತಮಿಳುನಾಡಿನಲ್ಲೂ ಭೂಕಂಪನ ಸತತ ಮಳೆಯಿಂದ ನಲುಗುತ್ತಿರುವ ತಮಿಳುನಾಡಿನಲ್ಲೂ ಇಂದು ಭೂಕಂಪನವಾಗಿದೆ.ಇಂದು ಮುಂಜಾನೆ 4.17ರ ಹೊತ್ತಗೆ ತಮಿಳುನಾಡಿನ ವೆಲ್ಲೋರ್ನಲ್ಲಿ ಭೂಕಂಪ ಆಗಿದ್ದು, ಭೂಮೇಲ್ಮೈಯಿಂದ 25 ಕಿಮೀ ಆಳದಲ್ಲಿ ಕಂಪಿಸಿದೆ. ಇದರ ತೀವ್ರತೆ 3.6ರಷ್ಟಿತ್ತು ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.