Twitter New Rule: ಟ್ವಿಟ್ಟರ್​ನಲ್ಲಿ ಇನ್ನುಮುಂದೆ ಯಾರೂ ಕೂಡ ಲೈವ್​ ಲೊಕೇಷನ್ ಹಂಚಿಕೊಳ್ಳುವಂತಿಲ್ಲ

| Updated By: ನಯನಾ ರಾಜೀವ್

Updated on: Dec 16, 2022 | 7:39 AM

ಟ್ವಿಟ್ಟರ್ (Twitter)​ನಲ್ಲಿ ಸೈಬರ್ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಖಾತೆಯಲ್ಲಿ ಲೈವ್​ ಲೊಕೇಷನ್​ಗಳನ್ನು ಬಹಿರಂಗವಾಗಿ ಖಾತೆಯಲ್ಲಿ ಶೇರ್​ ಮಾಡಿದರೆ ಖಾತೆಯನ್ನು ಅಮಾನತುಗೊಳಿಸಲಾಗುವುದು ಎಂದು ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್​(Elon Musk) ಸ್ಪಷ್ಟಪಡಿಸಿದ್ದಾರೆ.

Twitter New Rule: ಟ್ವಿಟ್ಟರ್​ನಲ್ಲಿ ಇನ್ನುಮುಂದೆ ಯಾರೂ ಕೂಡ ಲೈವ್​ ಲೊಕೇಷನ್ ಹಂಚಿಕೊಳ್ಳುವಂತಿಲ್ಲ
Elon Musk
Follow us on

ಟ್ವಿಟ್ಟರ್ (Twitter)​ನಲ್ಲಿ ಸೈಬರ್ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಖಾತೆಯಲ್ಲಿ ಲೈವ್​ ಲೊಕೇಷನ್​ಗಳನ್ನು ಬಹಿರಂಗವಾಗಿ ಖಾತೆಯಲ್ಲಿ ಶೇರ್​ ಮಾಡಿದರೆ ಖಾತೆಯನ್ನು ಅಮಾನತುಗೊಳಿಸಲಾಗುವುದು ಎಂದು ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್​(Elon Musk) ಸ್ಪಷ್ಟಪಡಿಸಿದ್ದಾರೆ. ಯಾರಾದರೂ ಲೈವ್ ಲೊಕೇಷನ್ (Live Location)ಮಾಹಿತಿಯನ್ನು ಡಾಕ್ಸಿಂಗ್ ಮಾಡಿದರೆ ಅವರ ಖಾತೆಯನ್ನು ಅಮಾನತುಗೊಳಿಸಲಾಗುತ್ತದೆ, ಏಕೆಂದರೆ ಇದು ಭೌತಿಕ ಸುರಕ್ಷತೆಯ ಉಲ್ಲಂಘನೆಯಾಗುತ್ತದೆ. ಈ ಕುರಿತು ಟ್ವಿಟ್ಟರ್ ಸ್ಪಷ್ಟನೆ ನೀಡಿದ್ದು, ಜನರು ತಮ್ಮ ಲೈವ್ ಲೋಕೇಶನ್​​ಅನ್ನು ತಮ್ಮ ಖಾತೆಗಳಲ್ಲಿ ಶೇರ್ ಮಾಡಬಹುದು.

ಅಲ್ಲದೇ ಮ್ಯೂಸಿಕ್​ ಕಾರ್ಯಕ್ರಮಗಳು, ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ಸಾರ್ವಜನಿಕ ಈವೆಂಟ್​​ಗೆ ಸಂಬಂಧಿಸಿದ ಸ್ಥಳಗಳ ಮಾಹಿತಿ ಹಂಚಿಕೊಳ್ಳಲು ಅನುಮತಿ ನೀಡಿದ್ದಾಗಿ ತಿಳಿಸಿದ್ದಾರೆ. ಆದರೆ, ಟ್ವಿಟರ್​​​ ಅನ್ನು 44 ಬಿಲಿಯನ್​ ಡಾಲರ್​ ಕೊಟ್ಟು ಖರೀದಿ ಮಾಡಿದ್ದ ಸಂದರ್ಭದಲ್ಲಿ ಎಲಾನ್​ ಮಸ್ಕ್​, ಟ್ವಿಟರ್ ಖಾತೆಗಳನ್ನು ರದ್ದು ಮಾಡುವುದಿಲ್ಲ ಎಂದು ತಿಳಿಸಿದ್ದರು.

ಎಲಾನ್ ​ಜೆಟ್​​ ಟ್ವಿಟರ್​ ಖಾತೆಯನ್ನು ರದ್ದು ಪಡಿಸಿದ ಬಳಿಕ ಇನ್​​ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿರೋ ಜ್ಯಾಕ್, ನನ್ನ ಟ್ವಿಟರ್​ ಖಾತೆಯನ್ನು ರದ್ದುಪಡಿಸಿದ ಬಳಿಕ ಮಸ್ಕ್​ ಅವರ ಜೆಟ್​ ಕಳೆದ ರಾತ್ರಿ ಲಾಸ್​​ಎಂಜಲೀಸ್​​ನಿಂದ ಆಸ್ಟಿನ್​​ಗೆ ಹಾರಾಟ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ಓದಿ:Twitter Layoffs: ಸ್ತ್ರೀಯರನ್ನೇ ಗುರಿ ಮಾಡುತ್ತಾರೆ; ಎಲಾನ್​ ಮಸ್ಕ್​ ವಿರುದ್ಧ ಕೋರ್ಟ್​​ ಮೆಟ್ಟಿಲೇರಿದ ಮಹಿಳೆಯರು

ಎಲಾನ್ ಮಸ್ಕ್ ಅವರ ಖಾಸಗಿ ಜೆಟ್​​ಗಳ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಎಲಾನ್​ಜೆಟ್ ಖಾತೆಯನ್ನು ಟ್ವಿಟರ್ ರದ್ದುಪಡಿಸಿದೆ. ಎಲಾನ್ ಮಸ್ಕ್​ರ ಫ್ರೀ ಸ್ಪಿಚ್​​ ಬಹಿರಂಗ ಹೇಳಿಕೆ ಬಳಿಕವೂ ಎಲಾನ್​​ಜೆಟ್​ ಟ್ವಿಟರ್ ಖಾತೆಯನ್ನು ರದ್ದು ಪಡಿಸಲಾಗಿದೆ.

ಈ ಟ್ವಿಟ್ಟರ್ ಖಾತೆಯಲ್ಲಿ ಎಲಾನ್ ಮಸ್ಕ್​ರ ಖಾಸಗಿ ಜೆಟ್​​ಗಳ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು. ಈ ಟ್ವಿಟರ್​ ಖಾತೆಯನ್ನು 19 ವರ್ಷದ ಜ್ಯಾಕ್​ ಎಂಬಾತ ತೆರದು ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ