ದೆಹಲಿ: ಭಾರತೀಯ ರಾಯಭಾರ ಕಚೇರಿಯು (Indian embassy) ಭಾನುವಾರದಂದು ಯುದ್ಧ ಪೀಡಿತ ಉಕ್ರೇನ್‌ನಲ್ಲಿ (Ukraine) ಸಿಲುಕಿರುವ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯು ಅಂತಿಮ ಹಂತವನ್ನು ತಲುಪುತ್ತಿದ್ದಂತೆ ಹೊಸ ಸಲಹೆಗಳನ್ನು ನೀಡಿದೆ. ತಮ್ಮ ಟ್ವಿಟರ್ ಹ್ಯಾಂಡಲ್‌ಗಳಲ್ಲಿ ಪೋಸ್ಟ್ ಮಾಡಿರುವ ಎರಡು ಪ್ರತ್ಯೇಕ ಹೇಳಿಕೆಗಳಲ್ಲಿ, ಹಂಗೇರಿ ಮತ್ತು ಉಕ್ರೇನ್‌ನಲ್ಲಿರುವ ರಾಯಭಾರ ಕಚೇರಿಗಳು ಭಾರತೀಯರನ್ನು ಹಂಗೇರಿ ಸಿಟಿ ಸೆಂಟರ್ ಸಂಪರ್ಕಿಸಲು ಮತ್ತು “ತುರ್ತಾಗಿ” ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡಲು ಕೇಳಿಕೊಂಡಿವೆ. ಹಂಗೇರಿಯಲ್ಲಿರುವ ರಾಯಭಾರ ಕಚೇರಿಯು ಭಾರತವು ತನ್ನ ಕೊನೆಯ ಹಂತವಾದ ‘ಆಪರೇಷನ್ ಗಂಗಾ’ ಅನ್ನು ಪ್ರಾರಂಭಿಸಿದೆ. ಇದು ನೆರೆಯ ರಾಷ್ಟ್ರಗಳ ಮೂಲಕ ಯುದ್ಧ ಪೀಡಿತ ಉಕ್ರೇನ್‌ನಿಂದ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ರಾಯಭಾರ ಕಚೇರಿಯಿಂದ ವ್ಯವಸ್ಥೆ ಮಾಡಲಾದ ವಸತಿಗಳನ್ನು ಹೊರತುಪಡಿಸಿ ತಮ್ಮದೇ ಆದ ವಸತಿಗಳಲ್ಲಿ ವಾಸಿಸುವ ವಿದ್ಯಾರ್ಥಿಗಳನ್ನು ಬುಡಾಪೆಸ್ಟ್‌ನಲ್ಲಿರುವ ಹಂಗೇರಿ ಸಿಟಿ ಸೆಂಟರ್‌ಗೆ ಸ್ಥಳೀಯ ಸಮಯ ಬೆಳಿಗ್ಗೆ 10 ಮತ್ತು ಮಧ್ಯಾಹ್ನ 12 ರ ನಡುವೆ (2.30 ಮತ್ತು ಸಂಜೆ 4.30 IST) ತಲುಪಲು ಅದು ಕೇಳಿದೆ. ಯುಕ್ರೇನ್‌ನಲ್ಲಿರುವ ರಾಯಭಾರ ಕಚೇರಿಯು ಸಂಘರ್ಷದ ವಲಯಗಳನ್ನು ತೊರೆಯುವವರು ಪೂರ್ವ-ಯುರೋಪಿಯನ್ ರಾಷ್ಟ್ರದಿಂದ ಸ್ಥಳಾಂತರಕ್ಕಾಗಿ ತುರ್ತಾಗಿ ಗೂಗಲ್ ಫಾರ್ಮ್ ಅನ್ನು ತುಂಬಲು ಕೇಳಿದೆ.
Important Announcement: Embassy of India begins its last leg of Operation Ganga flights today. All those students staying in their OWN accommodation ( other than arranged by Embassy) are requested to reach @Hungariacitycentre , Rakoczi Ut 90, Budapest between 10 am-12 pm
— Indian Embassy in Hungary (@IndiaInHungary) March 6, 2022
ಈ ಫಾರ್ಮ್‌ನಲ್ಲಿ ಭಾರತೀಯರು ಪಾಸ್‌ಪೋರ್ಟ್ ನಲ್ಲಿ ನಮೂದಿಸಿರುವಂತೆ ತಮ್ಮ ಪೂರ್ಣ ಹೆಸರು, ಇಮೇಲ್ ಐಡಿ, ವಯಸ್ಸು, ಲಿಂಗ, ಪಾಸ್‌ಪೋರ್ಟ್ ಸಂಖ್ಯೆ, ಪ್ರಸ್ತುತ ಸ್ಥಳ ಮತ್ತು ಉಕ್ರೇನ್‌ನಲ್ಲಿರುವ ನಿಖರವಾದ ವಿಳಾಸ, ಉಕ್ರೇನ್‌ನಲ್ಲಿ ಮತ್ತು ಭಾರತದಲ್ಲಿನ ಸಂಪರ್ಕ ಸಂಖ್ಯೆಗಳು ಮತ್ತು ಹೆಚ್ಚುವರಿಯಾಗಿ ಅವರೊಂದಿಗೆ ಇರುವ ಭಾರತೀಯರ ಸಂಖ್ಯೆ ಒದಗಿಸಬೇಕಾಗಿದೆ.
ಒಂದು ವಾರದ ಹಿಂದೆ ಪೂರ್ವ ಯೂರೋಪಿಯನ್ ರಾಷ್ಟ್ರವನ್ನು ರಷ್ಯಾ ಆಕ್ರಮಿಸಿದ ಕೂಡಲೇ ಪ್ರಾರಂಭವಾದ ಆಪರೇಷನ್ ಗಂಗಾ ಅಡಿಯಲ್ಲಿ ವಿಶೇಷ ವಿಮಾನಗಳಲ್ಲಿ ಭಾರತವು ಉಕ್ರೇನ್‌ನಿಂದ ಸುಮಾರು 13,700 ನಾಗರಿಕರನ್ನು ಮರಳಿ ಕರೆತಂದಿದೆ.
All Indian nationals who still remain in Ukraine are requested to fill up the details contained in the attached Google Form on an URGENT BASIS .
Be Safe Be Strong @opganga@MEAIndia@PIB_India@DDNewslive@DDNationalhttps://t.co/4BrBuXbVbz
— India in Ukraine (@IndiainUkraine) March 6, 2022
ಮಿಷನ್‌ಗಾಗಿ ಸರ್ಕಾರವು ಭಾರತೀಯ ವಾಯುಪಡೆಯನ್ನು (ಐಎಎಫ್) ಸಹ ಸಂಪರ್ಕಿಸಿದೆ. ಮಾಸ್ಕೊದ ಸೇನಾ ದಾಳಿಯ ನಂತರ ನಾಗರಿಕ ವಿಮಾನಗಳಿಗಾಗಿ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಲಾಗಿದ್ದು ಇದು ಭಾನುವಾರ 11 ನೇ ದಿನಕ್ಕೆ ಕಾಲಿಟ್ಟಿದೆ. ಭಾರತವು ಮೊಲ್ಡೊವಾ, ಸ್ಲೋವಾಕಿಯಾ, ರೊಮೇನಿಯಾ, ಪೋಲೆಂಡ್ ಮತ್ತು ಹಂಗೇರಿಯ ಭೂ ಮಾರ್ಗಗಳ ಮೂಲಕ ಉಕ್ರೇನ್ ನಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸುತ್ತಿದೆ
ಭಾನುವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ “ಬೆಳೆಯುತ್ತಿರುವ ಪ್ರಭಾವ” ದಿಂದಾಗಿ “ಸಾವಿರಾರು ವಿದ್ಯಾರ್ಥಿಗಳನ್ನು” ಉಕ್ರೇನ್‌ನ ಯುದ್ಧ ವಲಯದಿಂದ ಮನೆಗೆ ಕರೆತರಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಪುಣೆಯಲ್ಲಿ ಶಿವಾಜಿ ಪ್ರತಿಮೆ ಅನಾವರಣ, ಮೆಟ್ರೊ ರೈಲು ಯೋಜನೆಗೆ ಪ್ರಧಾನಿ ಮೋದಿ ಚಾಲನೆ
Published On - 4:14 pm, Sun, 6 March 22