Pakistan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸಿದ ರ್ಯಾಲಿಯಲ್ಲಿ ಅವರ ಮೇಲೆ ಗುಂಡಿನ ದಾಳಿ
ಪಾಕಿಸ್ತಾನ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾಗವಹಿಸಿದ ರ್ಯಾಲಿಯಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಜೀರಾಬಾದ್‌ನಲ್ಲಿ ಗುರುವಾರ ನಡೆದ ನೈಜ ಸ್ವಾತಂತ್ರ್ಯ ರ್ಯಾಲಿಯಲ್ಲಿ ಗುಂಡು ಹಾರಿಸಲಾಗಿದೆ. ಇದೀಗ ಅವರ ಕಾಲಿಗೆ ಗಾಯವಾಗಿದೆ. ARY ನ್ಯೂಸ್ ಪ್ರಕಾರ, ಜಫರಾಲಿ ಖಾನ್ ಚೌಕ್‌ನಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯ ನಂತರ ಇಮ್ರಾನ್ ಖಾನ್ ಅವರನ್ನು ಕಂಟೈನರ್‌ನಿಂದ ಬುಲೆಟ್ ಪ್ರೂಫ್ ವಾಹನಕ್ಕೆ ವರ್ಗಾಯಿಸಲಾಯಿತು.
ಗುಂಡಿನ ದಾಳಿಯ ನಂತರ ಇಮ್ರಾನ್ ಖಾನ್ ಅವರನ್ನು ಬುಲೆಟ್ ಪ್ರೂಫ್ ವಾಹನಕ್ಕೆ ವರ್ಗಾಯಿಸಿರುವುದನ್ನು ರ್ಯಾಲಿಯ ವಿಡಿಯೋಗಳು ತೋರಿಸಿವೆ. ರ್ಯಾಲಿಯಲ್ಲಿ ಅವರು ತೆರೆದ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಪಿಟಿಐ ಮುಖಂಡ ಫೈಸಲ್ ಜಾವೇದ್ ಕೂಡ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
A firing was reported near the container of former PM and Pakistan Tehreek-e-Insaf (PTI) chairman Imran Khan’s container near Zafar Ali Khan chowk in Wazirabad, Pakistan media reports. pic.twitter.com/mv5WvQIm7W
— ANI (@ANI) November 3, 2022
Published On - 5:08 pm, Thu, 3 November 22