ಮಿಲಿಟರಿ ಬಯೋಮೆಟ್ರಿಕ್ ಸಾಧನ, ಹೆಲಿಕಾಪ್ಟರ್ ಮತ್ತು ಶಸ್ತ್ರಾಸ್ತ್ರ; ತಾಲಿಬಾನ್ ವಶಪಡಿಸಿಕೊಂಡ ದುಬಾರಿ ವಸ್ತುಗಳಿವು
Taliban: ಉತ್ತರ ನಗರವಾದ ಮಜರ್-ಐ-ಶರೀಫ್ ಅನ್ನು ವಶಪಡಿಸಿಕೊಂಡಾಗ, ತಾಲಿಬಾನ್ ಹೋರಾಟಗಾರರು ಪ್ರಮುಖ ಅಫ್ಘಾನ್ ಸೇನಾಧಿಕಾರಿ ಮತ್ತು ಅಮೆರಿಕದ ಮಿತ್ರ ಜನರಲ್ ಅಬ್ದುಲ್ ರಶೀದ್ ದೋಸ್ತಮ್ ಅವರ ಅರಮನೆಯನ್ನು ಪ್ರವೇಶಿಸಿದರು.
ಕಾಬೂಲ್: ಎರಡು ದಶಕಗಳ ಯುದ್ಧದ ನಂತರ ಅಮೆರಿಕ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳಲು ಎರಡು ವಾರಗಳ ಮೊದಲು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಿತು. ಅಫ್ಘಾನಿಸ್ತಾನದ ಭದ್ರತಾ ಪಡೆಗಳು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಂದ ತರಬೇತಿ ಪಡೆದು ಸಜ್ಜುಗೊಂಡಿದ್ದರಿಂದ ದಂಗೆಕೋರರು ಕೆಲವೇ ದಿನಗಳಲ್ಲಿ ಎಲ್ಲಾ ಪ್ರಮುಖ ನಗರಗಳನ್ನು ವಶಪಡಿಸಿಕೊಂಡರು. ಪ್ರಾಂತೀಯ ರಾಜಧಾನಿಗಳು ಮತ್ತು ಕಾಬೂಲ್ ವಶಪಡಿಸಿಕೊಳ್ಳುವ ಸಮಯದಲ್ಲಿ ತಾಲಿಬಾನ್ ಕೆಲವು ದುಬಾರಿ ವಸ್ತುಗಳನ್ನು ವಶಪಡಿಕೊಂಡಿತು. ಅವುಗಳು ಹೀಗಿವೆ:
ಬಯೋಮೆಟ್ರಿಕ್ ಸಾಧನಗಳು
ತಾಲಿಬಾನ್ ಅಮೆರಿಕದ ಮಿಲಿಟರಿ ಬಯೋಮೆಟ್ರಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡಿದ್ದು ಅದು ಸಮ್ಮಿಶ್ರ ಪಡೆಗಳಿಗೆ ಸಹಾಯ ಮಾಡಿದ ಆಫ್ಘನ್ನರನ್ನು ಗುರುತಿಸಲು ಸಹಾಯ ಮಾಡುತ್ತದೆ. ಕಳೆದ ವಾರ ತಾಲಿಬಾನ್ ಮುನ್ನಡೆ ಸಾಧಿಸುತ್ತಿದ್ದಾಗ ಹ್ಯಾಂಡ್‌ಹೆಲ್ಡ್ ಇಂಟರ್ಏಜೆನ್ಸಿ ಐಡೆಂಟಿಟಿ ಡಿಟೆಕ್ಷನ್ ಸಲಕರಣೆಗಾಗಿ HIIDE ಎಂದು ಕರೆಯಲ್ಪಡುವ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಿ ಇಂಟರ್‌ಸೆಪ್ಟ್ ವರದಿ ಮಾಡಿದೆ. ವಶಪಡಿಸಿಕೊಂಡ ಸಾಧನಗಳು ಐರಿಸ್ ಸ್ಕ್ಯಾನ್ ಮತ್ತು ಬೆರಳಚ್ಚುಗಳಂತಹ ಬಯೋಮೆಟ್ರಿಕ್ ಡೇಟಾ ಹಾಗೂ ಬಯೊಗ್ರಾಫಿಕಲ್ಯ ಮಾಹಿತಿಯನ್ನು ಒಳಗೊಂಡಿವೆ ಮತ್ತು ದೊಡ್ಡ ಕೇಂದ್ರೀಕೃತ ಡೇಟಾಬೇಸ್‌ಗಳನ್ನು ಪ್ರವೇಶಿಸಲು ಬಳಸಲಾಗುತ್ತದೆ ಎಂದು ವರದಿ ಹೇಳಿದೆ. ಆದಾಗ್ಯೂ, ಅಫ್ಘಾನ್ ಜನಸಂಖ್ಯೆಯ ಮೇಲೆ ಅಮೆರಿಕ ಮಿಲಿಟರಿಯ ಬಯೋಮೆಟ್ರಿಕ್ ಡೇಟಾಬೇಸ್‌ನಲ್ಲಿ ಎಷ್ಟು ರಾಜಿ ಮಾಡಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಐಷಾರಾಮಿ ಅರಮನೆ ಉತ್ತರ ನಗರವಾದ ಮಜರ್-ಐ-ಶರೀಫ್ ಅನ್ನು ವಶಪಡಿಸಿಕೊಂಡಾಗ, ತಾಲಿಬಾನ್ ಹೋರಾಟಗಾರರು ಪ್ರಮುಖ ಅಫ್ಘಾನ್ ಸೇನಾಧಿಕಾರಿ ಮತ್ತು ಅಮೆರಿಕದ ಮಿತ್ರ ಜನರಲ್ ಅಬ್ದುಲ್ ರಶೀದ್ ದೋಸ್ತಮ್ ಅವರ ಅರಮನೆಯನ್ನು ಪ್ರವೇಶಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೊಗಳಲ್ಲಿ ಹೋರಾಟಗಾರರು ಜನರಲ್ ದೋಸ್ತಮ್‌ನ ಆಡಂಬರದ ಅರಮನೆಯನ್ನು ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಐಷಾರಾಮಿ ಪೀಠೋಪಕರಣಗಳ ಮೇಲೆ ಕುಳಿತು ಗೋಲ್ಡ್ ಟೀ ಸೆಟ್‌ನಿಂದ ಕುಡಿಯುವಂತೆ ನಟಿಸುವುದನ್ನು ಕಾಣಬಹುದು.
67ರ ಹರೆಯದ ಜನರಲ್ ದೋಸ್ತಮ್ ದೇಶದ ಅತ್ಯಂತ ಕುಖ್ಯಾತ ಪ್ರಾದೇಶಿಕ ಬಲಿಷ್ಠರಲ್ಲಿ ಒಬ್ಬರಾಗಿದ್ದು, ತಾಲಿಬಾನ್ ಉಗ್ರ ಶತ್ರುಗಳ ಪಟ್ಟಿಯಲ್ಲಿದ್ದರು ಎಂದು ಅಲ್ ಅರೇಬಿಯಾ ಹೇಳಿದೆ.
ಅಪಾರ ಶಸ್ತ್ರಾಸ್ತ್ರಗಳು ತಾಲಿಬಾನ್‌ನ ಸಾಮಾಜಿಕ ಮಾಧ್ಯಮವು ತಾಲಿಬಾನ್ ಹೋರಾಟಗಾರರು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ವಶಪಡಿಸಿಕೊಳ್ಳುವ ವಿಡಿಯೊಗಳಿಂದ ತುಂಬಿದೆ. ಇವುಗಳಲ್ಲಿ ಬಹುತೇಕ ಶಸ್ತ್ರಾಸ್ತ್ರಗಳು ಪಾಶ್ಚಿಮಾತ್ಯ ದೇಶದಿಂದ ಬಂದವುಗಳಾಗಿವೆ. ಅಫ್ಘಾನ್ ಸೈನಿಕರು ಉತ್ತರ ನಗರದ ಕುಂಡುಜ್ ನಲ್ಲಿ ಶರಣಾಗುತ್ತಿರುವ ದೃಶ್ಯಾವಳಿಗಳಲ್ಲಿ ಸೈನ್ಯದ ವಾಹನಗಳು ಭಾರೀ ಶಸ್ತ್ರಾಸ್ತ್ರಗಳನ್ನು ತುಂಬಿದ್ದು ಫಿರಂಗಿ ಬಂದೂಕುಗಳನ್ನು ತಾಲಿಬಾನಿಗಳು ಹಿಡಿರುವುದು ಕಾಣಿಸುತ್ತದೆ. ತಾಲಿಬಾನ್ ಅಲ್ಲಿನ ನಿವಾಸಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುತ್ತಿದ್ದು ಅವರ ರಕ್ಷಣೆಗಾಗಿ ಇನ್ನು ಮುಂದೆ ಶಸ್ತ್ರಾಸ್ತ್ರಗಳ ಅಗತ್ಯವಿಲ್ಲ ಎಂದು ಹೇಳಿದೆ.
ತಾಲಿಬಾನ್ ಉಗ್ರರ ಕೈಗೆ ಸಿಲುಕಿದರೆ ಅಫಘಾನ್ ಸೇನೆಯಿಂದ ಪಡೆದ ಅಮೆರಿಕದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು ಈ ಪ್ರದೇಶದಲ್ಲಿ ಅಸ್ಥಿರತೆಯನ್ನು ಇನ್ನಷ್ಟು ಹದಗೆಡಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಹೆಲಿಕಾಪ್ಟರ್ಗಳು ತಾಲಿಬಾನ್ ಕಂದಹಾರ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ನಿರ್ಮಿತ ಅಫ್ಘಾನ್ ಸೇನಾ ಹೆಲಿಕಾಪ್ಟರ್‌ಗಳನ್ನು ವಶಪಡಿಸಿಕೊಂಡಿದೆ. ಇದು ದೇಶದ ಪ್ರಮುಖ ಅಮೆರಿಕದ ನೆಲೆಗಳಲ್ಲಿ ಒಂದಾಗಿತ್ತು ಎಂದು ಎಎಫ್‌ಪಿ ವರದಿ ಮಾಡಿದೆ. ತಾಲಿಬಾನ್ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಶನಿವಾರ ಪೋಸ್ಟ್ ಮಾಡಿದ ವಿಡಿಯೊ ತುಣುಕಿನಲ್ಲಿ, ಬಂಡಾಯಗಾರನು ಯುಎಸ್ ನಿರ್ಮಿತ ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ ಸುತ್ತಲೂ ನಡೆಯುತ್ತಿರುವುದನ್ನು ಕಾಣಬಹುದು.
ಕುಂಡುಜ್ ವಿಮಾನ ನಿಲ್ದಾಣವನ್ನು ಸ್ವಾಧೀನಪಡಿಸಿಕೊಂಡ ನಂತರ ಭಾರತವು ಅಫ್ಘಾನಿಸ್ತಾನಕ್ಕೆ ನೀಡಿದ ನಾಲ್ಕು ದಾಳಿ ಹೆಲಿಕಾಪ್ಟರ್‌ಗಳಲ್ಲಿ ಒಂದನ್ನು ಅದು ವಶಪಡಿಸಿಕೊಂಡಿದೆ. ಟ್ವಿಟರ್‌ನಲ್ಲಿನ ಚಿತ್ರಗಳು ಮತ್ತು ವಿಡಿಯೋಗಳು ತಾಲಿಬಾನ್ ಕಾರ್ಯಕರ್ತರು Mi-24 ದಾಳಿ ಹೆಲಿಕಾಪ್ಟರ್ ಪಕ್ಕದಲ್ಲಿ ನಿಂತಿದ್ದಾರೆ ಎಂದು ತೋರಿಸುತ್ತದೆ.
ಇದನ್ನೂ ಓದಿ: Afghanistan: ತಾಲಿಬಾನಿಗಳಿಗೆ ತಲೆಬಾಗಲ್ಲ; ಈಗ ನಾನೇ ನಿಮ್ಮ ಅಧ್ಯಕ್ಷ: ಆಫ್ಘನ್ ಮೊದಲ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಘೋಷಣೆ
ಇದನ್ನೂ ಓದಿ: Opinion ‘ಅಫ್ಘಾನಿಸ್ತಾನ, ತಾಲಿಬಾನ್ ಬಗ್ಗೆ ನಾನು ವಿದೇಶಾಂಗ ಸಚಿವನಾಗಿ ಕಲಿತದ್ದು’- ಯಶವಂತ್ ಸಿನ್ಹಾ ಬರಹ
(Expensive Captures Made by Taliban after seized power in Afghanistan)