ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್ಬುಕ್ (Facebook) ಸಂಸ್ಥೆ ತನ್ನ ಬಳಕೆದಾರರಲ್ಲಿ ಕ್ಷಮೆಯಾಚಿಸಿದೆ. ಇತ್ತೀಚೆಗಷ್ಟೆ ಫೇಸ್ಬುಕ್ನಲ್ಲಿ ಕಪ್ಪು ವರ್ಣದ ಪುರುಷರನ್ನು ಸಸ್ತನಿ ವರ್ಗದ ಇತರೆ ಪ್ರಾಣಿಗಳು ಎಂಬ ತಪ್ಪಾದ ವಿಡಿಯೋ ಕಾಣಿಸಿಕೊಂಡಿತ್ತು. ಸದ್ಯ ಇದರಿಂದ ಎಚ್ಚೆತ್ತು ಗೊಂಡಿರುವ ಕಂಪೆನಿ ಬಳಕೆದಾರರಿಗೆ ಈ ವಿಷಯಗಳನ್ನು ಶಿಫಾರಸು ಮಾಡುತ್ತಿದ್ದ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಿದೆ ಎಂದು ಮಾಹಿತಿ ನೀಡಿದೆ.
ಈ ಬಗ್ಗೆ ಫೇಸ್ಬುಕ್ ವಕ್ತಾರ ಮಾಹಿತಿ ನೀಡಿದ್ದು, ಇದು ನಿಜಕ್ಕೂ ಕ್ಷಮಿಸಲಾಗದಂತಹ ಪ್ರಮಾದವಾಗಿದೆ. ನಮ್ಮ ಕಡೆಯಿಂದ ಬಹುದೊಡ್ಡ ತಪ್ಪಾಗಿದೆ. ಈ ರೀತಿಯಾದ ಶಿಫಾರಸು ನೀಡಿದ ಸಾಫ್ಟ್ವೇರ್ನ್ನು ನಾವು ನಿಷ್ಕ್ರಿಯಗೊಳಿಸಿದ್ದೇವೆ. ಈ ತಪ್ಪಾದ ಶಿಫಾರಸ್ಸು ಯಾರಿಗೆಲ್ಲಾ ಕಂಡಿದೆಯೋ ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಸದ್ಯ ಫೇಸ್ಬುಕ್ ಸಂಸ್ಥೆ ಬಳಕೆದಾರರಿಗೆ ವಿಡಿಯೋಗಳನ್ನು ಅಥವಾ ಫೋಟೋಗಳನ್ನು ಶಿಫಾರಸು ಮಾಡುವ ವೈಶಿಷ್ಟ್ಯವನ್ನೇ ಹಿಂಪಡೆದಿದೆ. ಅಲ್ಲದೆ ಈ ರೀತಿಯ ತಪ್ಪು ಹೇಗೆ ನಡೆಯಿತು ಎಂಬುದರ ಬಗ್ಗೆ ತನಿಖೆ ನಡೆಸಲು ಸೂಚಿಸಿದೆ. ಮುಂದೆ ಇಂತಹ ಪ್ರಮಾದ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ಮಾತು ನೀಡಿದೆ.
ಫೇಸ್ಬುಕ್ನಲ್ಲಿ ಸಾಮಾನ್ಯವಾಗಿ ನಾವು ಯಾವುದಾದರೂ ವಿಡಿಯೋಗಳನ್ನು ವೀಕ್ಷಣೆ ಮಾಡಿದರೆ ಬಳಿಕ ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಅದರ ಕೆಳಗೆ ಕಾಣಿಸುತ್ತವೆ. ಈ ವೈಶಿಷ್ಟ್ಯವನ್ನು ಫೇಸ್ಬುಕ್ ಹೊಂದಿದೆ. ಅದೇ ರೀತಿ ಕಪ್ಪು ಪುರುಷರನ್ನು ಒಳಗೊಂಡ ಬ್ರಿಟಿಷ್ ಟಾಬ್ಲ್ಯಾಯ್ಡ್ ವಿಡಿಯೋಗಳನ್ನ ನೋಡಿದ ಫೇಸ್ಬುಕ್ ಬಳಕೆದಾರರ ಬಳಿ ಸಸ್ತನಿಗಳ ವಿಡಿಯೋ ನೋಡಬಯಸುತ್ತೀರಾ ಎಂಬ ಶಿಫಾರಸು ಫೇಸ್ಬುಕ್ ಬಳಕೆದಾರರ ಬಳಿ ಕೇಳಿದೆ.
ಇದನ್ನ ಕಂಡ ಅನೇಕರು ಫೇಸ್ಬುಕ್ ಬಗ್ಗೆ ದೂರು ನೀಡಿದ್ದರು. ಅಲ್ಲದೆ ಈ ವೈಶಿಷ್ಟ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು. ಸದ್ಯ ಈ ವಿಚಾರ ಕಂಪೆನಿಯ ಗಮನಕ್ಕೆ ಬಂದು ತನಿಖೆಗೆ ಸೂಚಿಸಿದ್ದು, ಆಗಿರುವ ತಪ್ಪಿಗೆ ಕ್ಷಮೆಯಾಚಿಸಿದೆ.
Vivo X70: ಬಿಡುಗಡೆಗೂ ಮುನ್ನ ಫೀಚರ್ಸ್ಗಳಿಂದಲೇ ಕಿಕ್ಕೇರಿಸುತ್ತಿದೆ ವಿವೋ X70 ಸರಣಿ ಸ್ಮಾರ್ಟ್ಫೋನ್
(Clearly Unacceptable Error Facebook After Labeling Black Men Primates)
Published On - 2:16 pm, Sat, 4 September 21