ಫೇಸ್ಬುಕ್ ನೀತಿ ನಿರೂಪಿಸಲು ಸರ್ಕಾರವೇ ನಿಯಂತ್ರಣ ಮಂಡಳಿಯೊಂದನ್ನು (ರೆಗ್ಯುಲೇಟಿಂಗ್ ಕಮಿಟಿ) ರಚಿಸಬೇಕು. ತಮ್ಮ ಬಳಕೆದಾರರು ಪೋಸ್ಟ್ ಮಾಡಿದ ವಿಷಯಕ್ಕೆ ಸಾಮಾಜಿಕ ಜಾಲತಾಣಗಳು ಹೊಣೆಗಾರ ಆಗದಂತೆ ರಕ್ಷಿಸುವ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಫೇಸ್‌ಬುಕ್ ನಾಗರಿಕ ತಪ್ಪು ಮಾಹಿತಿ ತಂಡದ (civic misinformation team) ಮಾಜಿ ಪ್ರಾಡಕ್ಟ್ ಮ್ಯಾನೇಜರ್ ಫ್ರಾನ್ಸಿಸ್ ಹೌಗೆನ್ (Frances Haugen) ಅಮೆರಿಕ ಸೆನೆಟ್ ಉಪ ಸಮಿತಿಯ ಬಳಿ ಆಗ್ರಹಿಸಿದರು. ಇತ್ತೀಚಿಗೆ ಫ್ರಾನ್ಸಿಸ್ ಹೌಗೆನ್ ಫೇಸ್ಬುಕ್ ಮೇಲೆ ಹೊರಿಸಿದ್ದ ಗಂಭೀರ ಆರೋಪಗಳ ಕುರಿತು ಅಮೆರಿಕ ಸೆನೆಟ್ ಉಪ ಸಮಿತಿಯು ಮಾಹಿತಿ ಸಂಗ್ರಹಿಸಿತು.
ಯುವ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಫೇಸ್ಬುಕ್ ರೂಪಿಸುವ ಜಾಹೀರಾತುಗಳನ್ನು ಫೇಸ್ಬುಕ್ನಿಂದ ಹೊರತಾದ ಮೂರನೇ ವ್ಯಕ್ತಿ ಅಷ್ಟು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ರಚಿಸಬೇಕಿರುವ ನಿಯಂತ್ರಣ ಸಮಿತಿಯು ಆಲ್ಗೋರಿದಂಗಳ ಕುರಿತು ಅರಿತವರಾಗಿರಬೇಕು. ಫೇಸ್ಬುಕ್ ಬಳಿ ತನ್ನ ಸಮಸ್ಯೆಗಳನ್ನು ಪರಿಹರಿಹರಿಸಿಕೊಳ್ಳಲು ಇತರರ ಮತ್ತು ಇಡೀ ಜಗತ್ತಿನ ಸಹಾಯ ಅಗತ್ಯ. ಒಬ್ಬಂಟಿಯಾಗಿ ಅದು ತನ್ನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಖಂಡಿತ ಸಾಧ್ಯವಿಲ್ಲ ಎಂದು ಅವರು ಸೆನೆಟ್ ಉಪ ಸಮಿತಿಯ ಎದುರು ಪ್ರತಿಪಾದಿಸಿದರು.
ಸೆನೆಟ್ ಸಮಿತಿಯು ಮಾಹಿತಿ ಸಂಗ್ರಹಿಸುವ ವೇಳೆ ಫ್ರಾನ್ಸಿಸ್ ಹೌಗೆನ್ ಫೇಸ್ಬುಕ್ ಸಂಸ್ಥೆಯ ಇನ್ನಷ್ಟು ಹುಳುಕುಗಳನ್ನು ಸಹ ಬಿಚ್ಚಿಟ್ಟರು. ಮಾದಕ ದ್ರವ್ಯ ಬಳಕೆಯನ್ನು ಉತ್ತೇಜಿಸುವ ಹಲವು ಜಾಹೀರಾತುಗಳನ್ನು ಸದ್ಯ ಬಳಕೆಯಲ್ಲಿರುವ ಕೃತಕ ಬುದ್ಧಿಮತ್ತೆಯ ಫೇಸ್ಬುಕ್ ಆಲ್ಗೋರಿದಂ ಸೂಕ್ಷ್ಮವಾಗಿ ಪತ್ತೆಹಚ್ಚುವುದಿಲ್ಲ. ಅವುಗಳನ್ನು ಚಿಕ್ಕ ದೋಷಗಳೆಂದು ಮಹತ್ವ ನೀಡದ ಸಂಭವನೀಯತೆಯೂ ಇದೆ.
Mike Lee of Arizona is sharing pictures of ads collected by @TTP_updates that encourage drug use and anorexia to teens. Haugen says Facebook’s AI systems only detect a “tiny minority” of offending content and it is very possible that “none of these ads were seen by a human”. pic.twitter.com/RL6iM3VUth
— Kari Paul (@kari_paul) October 5, 2021
ಫೇಸ್ಬುಕ್ ತನ್ನ ವೇದಿಕೆಯಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಎಂಗೇಜ್ಮೆಂಟ್ ತರುತ್ತದೆ. ಅಲ್ಲದೇ ಬಳಕೆದಾರರು ಅಂತಹುದೇ ವಿಷಯಗಳಲ್ಲಿ ಆಸಕ್ತರಾಗುವಂತೆ ಮಾಡುಬಲ್ಲ ಆಲ್ಗೋರಿದಂ ಹೊಂದಿದೆ ಎಂದು ಫ್ರಾನ್ಸಿಸ್ ಹೌಗೆನ್ ತಿಳಿಸಿದರು.
ಇದನ್ನೂ ಓದಿ: ಫೇಸ್‌ಬುಕ್ ಲಾಭಕ್ಕಾಗಿ ದ್ವೇಷದ ಭಾಷಣ ಪ್ರೋತ್ಸಾಹಿಸುತ್ತದೆ: ವಿಷಲ್ಬ್ಲೋವರ್ ಆರೋಪ
Published On - 9:37 pm, Tue, 5 October 21