Fact Check: ಉಕ್ರೇನ್​ ಮೇಲೆ ರಷ್ಯಾ ಶೆಲ್​ ದಾಳಿ ನಡೆಸಿದ ವಿಡಿಯೋ ವೈರಲ್​: ಇದರ ಅಸಲಿಯತ್ತೇನು?

ವೈರಲ್​ ಆದ ವಿಡಯೋವನ್ನು ಸಿರಿಯಾದ ಹಸಾಕಾ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ ಮತ್ತು ಸಿರಿಯಾ ಪಡೆಗಳ ನಡುವಿನ ಘರ್ಷಣೆಯ ವೀಡಿಯೊ ಎಂದು ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್​ ಕಂಡುಹಿಡಿದಿದೆ.

Fact Check: ಉಕ್ರೇನ್​ ಮೇಲೆ ರಷ್ಯಾ ಶೆಲ್​ ದಾಳಿ ನಡೆಸಿದ ವಿಡಿಯೋ ವೈರಲ್​: ಇದರ ಅಸಲಿಯತ್ತೇನು?
ಫ್ಯಾಕ್ಟ್​ ಚೆಕ್​ ವರದಿ
Updated By: Pavitra Bhat Jigalemane

Updated on: Mar 02, 2022 | 11:58 AM

ರಷ್ಯಾ ಉಕ್ರೇನ್​ ಯುದ್ಧ(Russia Ukraine War) 7ನೇ ದಿನಕ್ಕೆ ಕಾಲಿಟ್ಟಿದೆ.  ಈ ನಡುವೆ ಹಲವು ಕ್ಷಿಪಣಿ ಮತ್ತು ಬಾಂಬ್​ಗಳ ದಾಳಿ ನಿರಂತರವಾಗಿ ನಡೆಯುತ್ತಿದೆ, ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ರಷ್ಯಾ ಉಕ್ರೇನ್​ ಮೇಲೆ ನಡೆಸಿದ ಶೆಲ್​ ದಾಳಿಯ ವಿಡಿಯೋವೊಂದು ವೈರಲ್​ ಆಗಿದೆ. ಆದರೆ, ಇಂಡಿಯಾ ಟುಡೆ ಫ್ಯಾಕ್ಟ್​ ಚೆಕ್​ನಲ್ಲಿ ದಾಳಿಯ ಸತ್ಯಾಂಶ ಬಯಲಾಗಿದೆ.  ದಾಳಿಯ ವಿಡಿಯೋವು ರಷ್ಯಾ ಉಕ್ರೇನ್​ ಮೇಲೆ ನಡೆಸಿದ್ದಲ್ಲ, ಅಸಲಿಯಾಗಿ ಅದು ಸಿರಿಯಾದಲ್ಲಿ ನಡೆದ ದಾಳಿಯ ದೃಶ್ಯವಾಗಿದೆ ಎಂದು ಪತ್ತೆ ಮಾಡಲಾಗಿದೆ. ವೈರಲ್​ ಆದ ವಿಡಿಯೋವನ್ನು ಸಿರಿಯಾದ ಹಸಾಕಾ ನಗರದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಮತ್ತು ಸಿರಿಯಾ ಪಡೆಗಳ ನಡುವಿನ ಘರ್ಷಣೆಯ ವೀಡಿಯೊ ಎಂದು ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ( Anti Fake News War Room) ಕಂಡುಹಿಡಿದಿದೆ.

ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ವಿಡಿಯೋದ ಕೀ ಫ್ರೇಮ್​ನಲ್ಲಿ ಚೆಕ್​ ಮಾಡಿದಾಗ, ಅದೇ ರೀತಿಯ ವಿಡಿಯೋವನ್ನು ರೊಜಾವ-ಉತ್ತರ ಸಿರಿಯಾ ಫೆಡರೇಶನ್‌ನ ಅಧಿಕೃತ ಸೇನೆಯ ಯುಟ್ಯೂಬ್​ ಚಾನೆಲ್​ YPG Press Office ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು 2022ರ ಜನವರಿ 24ರಂದು ಹಂಚಿಕೊಳ್ಳಲಾಗಿದ್ದು, ಇತ್ತೀಚಿನ ಬೆಳವಣಿಗೆ ಎಂದು ಕ್ಯಾಪ್ಷನ್​ ನೀಡಲಾಗಿದೆ.  ಅದೇ ವಿಡಿಯೋವನ್ನು ಅದೇ ದಿನಾಂಕದಂದು ದಿ ಸನ್​ ಸುದ್ದಿ ಸಂಸ್ಥೆ ಕೂಡ ಹಂಚಿಕೊಂಡಿದೆ. ವಿಡಿಯೋವನ್ನು ಈಶಾನ್ಯ ಸಿರಿಯಾದ ಹಸಾಕಾ ನಗರದಲ್ಲಿ IS ಮತ್ತು ಕುರ್ದಿಶ್ ನೇತೃತ್ವದ ಪಡೆಗಳ ನಡುವಿನ ಹೋರಾಟದ ದೃಶ್ಯ ಎಂದು ಖಚಿತಪಡಿಸಿದೆ.

ಆದರೆ ವಿಡಿಯೋದಲ್ಲಿ ಕೊನೆಯ ಕೆಲವು ಸೆಕೆಂಡುಗಳು ನಿಜವಾಗಿಯೂ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ದೃಶ್ಯಗಳಾಗಿವೆ. ಉಕ್ರೇನ್‌ನಲ್ಲಿ ರಷ್ಯಾದ ಸೈನ್ಯದೊಂದಿಗೆ ನಡೆದ ಎನ್‌ಕೌಂಟರ್‌ನ ದೃಶ್ಯಗಳನ್ನು ಫೆಬ್ರವರಿ 24, 2022 ರಂದು ಸಿಎನ್‌ಎನ್‌ನ ವರದಿಗಾರ ಮ್ಯಾಥ್ಯೂ ಚಾನ್ಸ್ ಸೆರೆಹಿಡಿದಿದ್ದು, ಸಿಎನ್‌ಎನ್ ತನ್ನ ವೆಬ್‌ಸೈಟ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ.

 

ಜನವರಿ 24 ರಂದು ಹಲವಾರು ಮಾಧ್ಯಮಗಳು ವೈರಲ್​ ಆದ  ವೀಡಿಯೊವನ್ನು ಸಿರಿಯಾದಿಂದ ಬಂದವು ಎಂದು ಹೇಳಿಕೊಂಡಿವೆ. ಈ ವರದಿಗಳ ಪ್ರಕಾರ, ಕುರ್ದಿಶ್ ನೇತೃತ್ವದ YPG Press Office ವಿಡಿಯೋದ ತುಣುಕನ್ನು ಮೊದಲು ಬಿಡುಗಡೆ ಮಾಡಿದೆ. ವೈರಲ್ ವೀಡಿಯೊದ ಪ್ರಮುಖ ಭಾಗವು ನಡೆಯುತ್ತಿರುವ ಉಕ್ರೇನ್-ರಷ್ಯಾ ಸಂಘರ್ಷಕ್ಕೆ ಸಂಬಂಧಿಸಿಲ್ಲ. ಗ್ವೇರಾನ್ ಜೈಲಿನ ಮೇಲೆ ಐಎಸ್ ದಾಳಿಯ ನಂತರ ಸಿರಿಯಾದಲ್ಲಿ ನಡೆದ ಘರ್ಷಣೆಯ ವೀಡಿಯೊವಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:

Fact Check ರಷ್ಯಾ ದಾಳಿ ನಂತರ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಸೇನಾ ಸಮವಸ್ತ್ರ ಧರಿಸಿ ಹೋರಾಡುತ್ತಿರುವ ವೈರಲ್ ಚಿತ್ರ ಈಗಿನದ್ದು ಅಲ್ಲ

Video: ರಷ್ಯಾದ ಯುದ್ಧ ಟ್ಯಾಂಕ್​​ಗಳಿಗೆ ಜೋತು ಬೀಳುತ್ತಿರುವ ಉಕ್ರೇನ್​ ನಾಗರಿಕರು; ಸೇನೆಯನ್ನು ತಡೆಯಲು ಇನ್ನಿಲ್ಲದ ಪ್ರಯತ್ನ

Published On - 11:41 am, Wed, 2 March 22