ಕಾಬೂಲ್: ಅಫ್ಘಾನಿಸ್ತಾನದಲ್ಲಿದ್ದ ಮೂವರು ಮಹಿಳಾ ಗವರ್ನರ್ಗಳ ಪೈಕಿ ಒಬ್ಬರಾದ ಸಲಿಮಾ ಮಝಾರಿ ಅವರನ್ನು ತಾಲಿಬಾನ್ ಹೋರಾಟಗಾರರು ಬಂಧಿಸಿದ್ದಾರೆ. ಮಝಾರಿ ಅವರು ಹಝಾರಾ ಜಿಲ್ಲೆಯ ಗವರ್ನರ್ ಆಗಿದ್ದರು.
ತಾಲಿಬಾನ್ ವಿರುದ್ಧ ಮಝಾರಿ ಪ್ರಬಲವಾಗಿ ದನಿ ಎತ್ತಿದ್ದರು. ತಾಲಿಬಾನಿಗಳು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಅವಕಾಶವೇ ಇರುವುದಿಲ್ಲ. ತಾಲಿಬಾನ್ ಆಡಳಿತದಲ್ಲಿರುವ ನಗರ ಅಥವಾ ಹಳ್ಳಿಗಳಲ್ಲಿ ಮಹಿಳೆಯರು ಮನೆಗಳಲ್ಲಿ ಬಂಧಿಗಳಾಗಿರುತ್ತಾರೆ. ಅವರಿಗೆ ಅಸ್ತಿತ್ವವೇ ಇರುವುದಿಲ್ಲ ಎಂದು ಹೇಳಿದ್ದರು.
ಹಝಾರಾ ಸಮುದಾಯಕ್ಕೆ ಸೇರಿರುವ ಮಝಾರಿ ಅವರ ಸುರಕ್ಷೆ ಬಗ್ಗೆ ಇದೀಗ ಅಂತರರಾಷ್ಟ್ರೀಯ ಸಮುದಾಯದಲ್ಲಿ ಆತಂಕ ವ್ಯಕ್ತವಾಗಿದೆ. ಶಿಯಾ ಮುಸ್ಲಿಮರ ಉಪಪಂಗಡ ಎನಿಸಿರುವ ಹಝಾರಾ ಸಮುದಾಯವನ್ನು ಸುನ್ನಿ ಮುಸ್ಲಿಮರ ಸಂಘಟನೆ ತಾಲಿಬಾನ್ ತಮಗಿಂತ ಕೀಳು ಎಂದು ಪರಿಗಣಿಸುತ್ತದೆ.
ಈ ಹಿಂದೆಯೂ ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರು ಹಝಾರಾ ಸಮುದಾಯದ ಮೇಲೆ ದಾಳಿ ನಡೆಸಿದ್ದರು. ಕಾಬೂಲ್ನಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದಿದ್ದ ದಾಳಿಯಲ್ಲಿ 80 ಬಾಲಕಿಯರು ಮೃತಪಟ್ಟಿದ್ದರು.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮುನ್ನಡೆ ಸಾಧಿಸುತ್ತಿದ್ದಾಗ ಮಝಾರಿ ತಾಲಿಬಾನಿಗಳನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಸರ್ಕಾರಿ ಭದ್ರತಾ ಸಿಬ್ಬಂದಿಯ ಜೊತೆಗೆ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದರು.
(Female governor in Afghanistan who took up arms against Taliban is now in custody)
ಇದನ್ನೂ ಓದಿ: Taliban In Afghanistan: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಇದ್ದರೆ ಇಡೀ ಜಗತ್ತಿಗೆ ಕೊರೊನಾ ಇದ್ದಂತೆ ಏಕೆ?
Published On - 10:42 pm, Wed, 18 August 21