AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಬೈಡೆನ್​ರನ್ನು ಅಭಿನಂದಿಸಿದ ಚೀನಾ | Finally, China congratulates Biden on his victory in US election

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಬರೋಬ್ಬರಿ ಒಂದು ವಾರದ ನಂತರ ಚೀನಾ, ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಆ ದೇಶದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೊ ಬೈಡೆನ್ ಅವರನ್ನು ಅಭಿನಂದಿಸಿದೆ. ಚೀನಾ, ರಷ್ಯ, ಬ್ರೆಜಿಲ್ ಮತ್ತು ಇನ್ನಿತರ ಕೆಲ ಪ್ರಮುಖ ರಾಷ್ಟ್ರಗಳು; ಟ್ರಂಪ್ ಮೇಲಿನ ವ್ಯಾಮೋಹಕ್ಕೋ ಅಥವಾ ಅವರಿಗೆ ಬೈಡೆನ್ ಆಯ್ಕೆಯಾಗುವುದು ಬೇಕಿರಲಿಲ್ಲವೋ ಅನ್ನುವುದು ಸ್ಪಷ್ಟವಾಗಿಲ್ಲ, ಆದರೆ ಈ ರಾಷ್ಟ್ರಗಳೆಲ್ಲ ತಮ್ಮದೇ ಅದ ಕಾರಣಗಳಿಗೆ ಬೈಡೆನ್ ಅವರನ್ನು ಅಭಿನಂದಿಸಲು ನಿರಾಕರಿಸುತ್ತಿವೆ. ಶುಕ್ರವಾರದಂದು ಈ ರಾಷ್ಟ್ರಗಳ ಗುಂಪಿನಿಂಧ […]

ಕೊನೆಗೂ ಬೈಡೆನ್​ರನ್ನು ಅಭಿನಂದಿಸಿದ ಚೀನಾ | Finally, China congratulates Biden on his victory in US election
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Nov 13, 2020 | 4:22 PM

Share

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ಬರೋಬ್ಬರಿ ಒಂದು ವಾರದ ನಂತರ ಚೀನಾ, ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಆ ದೇಶದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೊ ಬೈಡೆನ್ ಅವರನ್ನು ಅಭಿನಂದಿಸಿದೆ. ಚೀನಾ, ರಷ್ಯ, ಬ್ರೆಜಿಲ್ ಮತ್ತು ಇನ್ನಿತರ ಕೆಲ ಪ್ರಮುಖ ರಾಷ್ಟ್ರಗಳು; ಟ್ರಂಪ್ ಮೇಲಿನ ವ್ಯಾಮೋಹಕ್ಕೋ ಅಥವಾ ಅವರಿಗೆ ಬೈಡೆನ್ ಆಯ್ಕೆಯಾಗುವುದು ಬೇಕಿರಲಿಲ್ಲವೋ ಅನ್ನುವುದು ಸ್ಪಷ್ಟವಾಗಿಲ್ಲ, ಆದರೆ ಈ ರಾಷ್ಟ್ರಗಳೆಲ್ಲ ತಮ್ಮದೇ ಅದ ಕಾರಣಗಳಿಗೆ ಬೈಡೆನ್ ಅವರನ್ನು ಅಭಿನಂದಿಸಲು ನಿರಾಕರಿಸುತ್ತಿವೆ.

ಶುಕ್ರವಾರದಂದು ಈ ರಾಷ್ಟ್ರಗಳ ಗುಂಪಿನಿಂಧ ಹೊರಬಂದಿರುವ ಚೀನಾ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ಅಭಿನಂದಿಸಿದೆ.

‘‘ಚೀನಾ ವಿದೇಶಾಂಗ ಇಲಾಖೆಯ ಬಾತ್ಮೀದಾರ, ವ್ಯಾಂಗ್ ವೆನ್ಬಿನ್ ಶುಕ್ರವಾರದಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ‘‘ಅಮೆರಿಕ ಜನತೆಯ ಆಯ್ಕೆಯನ್ನು ನಾವು ಗೌರವಿಸುತ್ತೇವೆ ಮತ್ತು ಶ್ರೀ ಬೈಡೆನ್ ಹಾಗೂ ಶ್ರೀಮತಿ ಕಮಲಾ ಹ್ಯಾರಿಸ್ ಅವರನ್ನು ಅಭಿನಂದಿಸುತ್ತೇವೆ,’’ ಎಂದು ಹೇಳಿದ್ದಾರೆ.

ಆದರೆ ಸೋಜಿಗದ ಸಂಗತಿಯೆಂದರೆ, ಖುದ್ದು ಟ್ರಂಪ್ ತಾವು ಸೋತಿರುವುದನ್ನು ಒಪ್ಪಿಕೊಂಡಿಲ್ಲ ಮತ್ತು ಅಧಿಕಾರ ಹಸ್ತಾಂತರಿಸುವುದನ್ನು ಉಪೇಕ್ಷಿಸುತ್ತಿದ್ದಾರೆ. ಅಸಲಿಗೆ, ಚೀನಾ ಟ್ರಂಪ್ ತನ್ನೊಂದಿಗೆ ಹೊಂದಿದ್ದ ಸಂಬಂಧದಿಂದ ಅಸಾಮಾಧಾನಗೊಂಡಿದೆ. ಟ್ರಂಪ್ ಅಧಿಕಾರಕ್ಕೆ ಬಂದಂದಿನಿಂದ ಎರಡು ರಾಷ್ಟ್ರಗಳ ನಡುವಿನ ಸಂಬಂಧಗಳು ಹಳಸಿವೆ. ಚೀನಾ ಸೃಷ್ಟಿಸಿದ ಅವಾಂತರದಿಂದಾಗಿಯೇ ಕೊರೊನಾ ವೈರಸ್ ವಿಶ್ವದಾದ್ಯಂತ ಹಬ್ಬಿ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದೆ ಎಂದು ಟ್ರಂಪ್ ಬಹಿರಂಗವಾಗಿ ಖಂಡಿಸಲಾರಂಭಿಸಿದ್ದು ಮತ್ತು ಹಾಂಗ್ ಕಾಂಗ್​ನಲ್ಲಿ ಚೀನಾದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಕಠೋರ ಮಾತುಗಳಲ್ಲಿ ನಿಂದಿಸಿರುವುದು ಏಷ್ಯಾದ ಸೂಪರ್ ಪವರ್​ಗೆ ಅರಗಿಸಿಕೊಳ್ಳಲಾಗಿಲ್ಲ.

ಚೀನಾ ವಿರುದ್ಧ ಟ್ರಂಪ್ ಟೀಕಾ ಪ್ರಹಾರ ಅಷ್ಟಕ್ಕೇ ನಿಂತಿರಲಿಲ್ಲ. ಚುನಾವಣಾ ಪ್ರಚಾರದಲ್ಲಿ ಮಗ್ನರಾಗುವ ಮೊದಲು ಅವರು, ಅಮೆರಿಕಾಗೆ ಅಪಾಯವಿರುವುದಾದರೆ ಅದು ಚೀನಾದಿಂದ ಮಾತ್ರ, ಆ ದೇಶದಿಂದ ಇಡೀ ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕವಿದೆ ಅಂತಲೂ ಹೇಳಿದ್ದರು.

ಈಗ, ಟ್ರಂಪ್ ಜಾಗಕ್ಕೆ ಮೃದು ಸ್ವಭಾವದವರಂತೆ ಕಾಣುವ ಬೈಡೆನ್ ಬಂದಿದ್ದಾರೆ ಮತ್ತು ಅವರನ್ನು ವಿಳಂಬವಾಗಿಯಾದರೂ ಅಭಿನಂದಿಸುವ ಮೂಲಕ ಚೀನಾ, ಪ್ರಾಯಶ: ಹೊಸ ಅಧ್ಯಾಯ ಆರಂಭಿಸುವ ಇಂಗಿತ ವ್ಯಕ್ತಪಡಿಸಿದೆ. ಅದರ ಈ ಧೋರಣೆಯನ್ನು ಹೊಸ ಅಧ್ಯಕ್ಷ ಹೇಗೆ ಅಂಗೀಕರಿಸುತ್ತಾರೆನ್ನುವುದು ಕಾದು ನೋಡಬೇಕಾದ ಅಂಶ.

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ