AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Florida Shootout: ಫ್ಲೋರಿಡಾದಲ್ಲಿ ಶೂಟೌಟ್​, ಓರ್ವ ಪತ್ರಕರ್ತ ಹಾಗೂ 9 ವರ್ಷದ ಬಾಲಕಿ ಬಲಿ

ಫ್ಲೋರಿಡಾದ ಒರ್ಲ್ಯಾಂಡೋದಲ್ಲಿ ನಡೆದ ಶೂಟೌಟ್​ನಲ್ಲಿ ಓರ್ವ ಪತ್ರಕರ್ತ ಹಾಗೂ 9 ವರ್ಷದ ಬಾಲಕಿ ಮೃತಪಟ್ಟಿದ್ದಾರೆ. ಬಂದೂಕುಧಾರಿಯಿಂದ ಮತ್ತೊಬ್ಬ ವರದಿಗಾರ ಮತ್ತು ಬಾಲಕಿಯ ತಾಯಿಯ ಮೇಲೂ ಗುಂಡು ಹಾರಿಸಿದ್ದು ಘಟನೆಯಲ್ಲಿ ಗಾಯಗೊಂಡಿದ್ದಾರೆ.

Florida Shootout: ಫ್ಲೋರಿಡಾದಲ್ಲಿ ಶೂಟೌಟ್​, ಓರ್ವ ಪತ್ರಕರ್ತ ಹಾಗೂ 9 ವರ್ಷದ ಬಾಲಕಿ ಬಲಿ
ಫ್ಲೋರಿಡಾ ಶೂಟೌಟ್
ನಯನಾ ರಾಜೀವ್
|

Updated on:Feb 23, 2023 | 11:38 AM

Share

ಫ್ಲೋರಿಡಾದ ಒರ್ಲ್ಯಾಂಡೋದಲ್ಲಿ ನಡೆದ ಶೂಟೌಟ್​ನಲ್ಲಿ ಓರ್ವ ಪತ್ರಕರ್ತ ಹಾಗೂ 9 ವರ್ಷದ ಬಾಲಕಿ ಮೃತಪಟ್ಟಿದ್ದಾರೆ. ಬಂದೂಕುಧಾರಿಯಿಂದ ಮತ್ತೊಬ್ಬ ವರದಿಗಾರ ಮತ್ತು ಬಾಲಕಿಯ ತಾಯಿಯ ಮೇಲೂ ಗುಂಡು ಹಾರಿಸಿದ್ದು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಓರ್ಲ್ಯಾಂಡೋ ಪ್ರದೇಶದಲ್ಲಿ ದುಷ್ಕರ್ಮಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ದಾಳಿಯ ಪರಿಣಾಮ ಬಾಲಕಿ ಹಾಗೂ ಅಲ್ಲಿನ ಪತ್ರಕರ್ತರೊಬ್ಬರು ಮೃತಪಟ್ಟಿದ್ದಾರೆ. 19 ವರ್ಷದ ಆರೋಪಿ ಕೀತ್ ಮೆಲ್ವಿನ್ ಮೋಸೆಸ್​ನನ್ನು ಬಂಧಿಸಲಾಗಿದೆ ಎಂದು ಆರೆಂಜ್ ಕೌಂಟಿ ಶೆರಿಫ್​ನ ಅಧಿಕಾರಿ ಜಾನ್ ಮಿನಾ ತಿಳಿಸಿದ್ದಾರೆ.

ಆರೋಪಿ ನಡೆಸಿದ ಗುಂಡಿನ ದಾಳಿಗೆ ಕಾರಣ ತಿಳಿದುಬಂದಿಲ್ಲ, ಆತ ಮೊದಲು ಮಾಧ್ಯಮದ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದ, ಇಬ್ಬರು ಪತ್ರಕರ್ತರ ಮೇಲೆ ಗುಂಡು ಹಾರಿಸಿದ್ದ, ನಂತರ ಅಲ್ಲೇ ಇದ್ದ ಮನೆಯೊಂದಕ್ಕೆ ನುಗ್ಗಿ ತಾಯಿ ಹಾಗೂ 9 ವರ್ಷದ ಮಗುವಿನ ಮೇಲೆ ಗುಂಡು ಹಾರಿಸಿದ್ದ.

ಮತ್ತಷ್ಟು ಓದಿ: ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು

ಗುಂಡಿನ ದಾಳಿಯಲ್ಲಿ ಓರ್ವ ಪತ್ರಕರ್ತ ಮೃತಪಟ್ಟಿದ್ದು, ಮತ್ತೊಬ್ಬರಿಗೆ ತೀವ್ರ ಗಾಯಗಳಾಗಿವೆ. ಈ ರೀತಿಯ ಕಾರ್ಯವನ್ನು ಎಸಗಲು ಇಂಥದ್ದೇ ಎನ್ನುವ ಕಾರಣಗಳಿರುವುದಿಲ್ಲ. ಆ ಆರೋಪಿ ಹಾಗೂ ಪತ್ರಕರ್ತ, ಆ ಮಗುವಿಗೆ ಯಾವುದೇ ಸಂಬಂಧವಿಲ್ಲ, ಆದರೂ ಯಾಕೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನುವ ಕುರಿತು ಮಾಹಿತಿ ತಿಳಿದಿಲ್ಲ, ವರದಿ ಬರಬೇಕಿದೆ ಎಂದು ತಿಳಿಸಿದ್ದಾರೆ.

ಈ ಗುಂಡಿನ ದಾಳಿಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ನಾವು ಕಾರ್ಯಾಚರಣೆ ನಡೆಸುತ್ತಿದ್ದೇವೆ ಒಟ್ಟಿಗೆ ಅಮೆರಿಕಾದ್ಯಂತ ಬಂದೂಕು ಹಿಂಸಾಚಾರಕ್ಕೆ ಕಠಿಣವಾದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ. ನಮ್ಮ ಸಮುದಾಯದಲ್ಲಿ ಬಂದೂಕಿನ ದಾಳಿಗೆ ಯಾರೂ ಬಲಿಯಾಗಬಾರದು ಎಂದು ಮೀನಾ ಬೇಸರ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:32 am, Thu, 23 February 23