Donald Trump: ಪೋರ್ನ್ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ ಗೌಪ್ಯವಾಗಿ ಹಣ ನೀಡಿದ ಪ್ರಕರಣ; ಇಂದು ಮಾಜಿ ಯುಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ ಸಾಧ್ಯತೆ!

|

Updated on: Mar 21, 2023 | 1:05 PM

ಸೋಮವಾರದಂದು ಪ್ರಕರಣ ಕೊನೆಯ ಸಾಕ್ಷ್ಯವಾಗಿರುವ ವಕೀಲ ರಾಬರ್ಟ್ ಕೊಸ್ಟೆಲ್ಲೋ ಅವರ ವಿಚಾರಣೆ ನಡೆಸಿದ ಜ್ಯೂರಿಯು ಬುಧವಾರದಂದು ಟ್ರಂಪ್ ಗೆ ಪ್ರತಿಕೂಲವಾಗುವ ತೀರ್ಪನ್ನು ಬುಧವಾರ ನೀಡಲಿದೆಯೆಂದು ಯುಎಸ್ ನ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

Donald Trump: ಪೋರ್ನ್ ತಾರೆ ಸ್ಟಾರ್ಮಿ ಡೇನಿಯಲ್ಸ್ ಗೆ ಗೌಪ್ಯವಾಗಿ ಹಣ ನೀಡಿದ ಪ್ರಕರಣ; ಇಂದು ಮಾಜಿ ಯುಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ ಸಾಧ್ಯತೆ!
ಡೊನಾಲ್ಡ್ ಟ್ರಂಪ್, ಯುಎಸ್ ಮಾಜಿ ಅಧ್ಯಕ್ಷ
Follow us on

ವಾಷಿಂಗ್ಟನ್: ಪೋರ್ನ್ ನಟಿಯೊಬ್ಬರಿಗೆ (porn star) ಗೌಪ್ಯವಾಗಿ ಹಣ ನೀಡಿದ ಆರೋಪ ಎದುರಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಬಂಧನಕ್ಕೊಳಗಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಬೆಂಬಲಿಗರಿಗೆ ಬೃಹತ್ ಪ್ರತಿಭಟನೆ ನಡೆಸಲು ಕರೆ ನೀಡಿರುವುದರಿಂದ ನ್ಯೂ ಯಾರ್ಕ್ ಪೊಲೀಸರು (New York Police Department) ನಗರೆದೆಲ್ಲೆಡೆ ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಆದರೆ ಗಮನಿಸಬೇಕಾದ ಸಂಗತಿಯೇನೆಂದರೆ, ಸೋಮವಾರ ಕೇವಲ ಬೆರಳೆಣಿಯಷ್ಟು ಟ್ರಂಪ್ ಬೆಂಬಲಿಗರು ಮಾತ್ರ ಪ್ರತಿಭಟನೆ ನಡೆಸಿದರು. 2016ರಲ್ಲಿ ಸ್ಟಾರ್ಮಿ ಡೇನಿಯಲ್ಸ್ ಗೆ ಟ್ರಂಪ್ ಹಣ ನೀಡಿದರೆನ್ನಲಾಗಿರುವ ಪ್ರಕರಣವನ್ನು ಮ್ಯಾನ್ ಹಟನ್ ಡಿಸ್ಟ್ರಿಕ್ಟ್ ಅಟಾರ್ನಿ ಆಲ್ವಿನ್ ಬ್ರ್ಯಾಗ್ ನಡೆಸಿರುವ ತನಿಖೆಯನ್ನು ಆಧಾರವಾಗಿಟ್ಟುಕೊಂಡು ನ್ಯಾಯಾಲಯ ತೀರ್ಪು ನೀಡಲಿದೆ. ಒಂದು ಪಕ್ಷ ಟ್ರಂಪ್ ಅವರು ಡೇನಿಯಲ್ಸ್ ಹಣ ನೀಡಿರುವ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಜ್ಯೂರಿ ತೀರ್ಪು ನೀಡಿದರೆ ಅವರು ಅಂಥ ಅಪಖ್ಯಾತಿಗೆ ಗುರಿಯಾಗುವ ಮೊದಲ ಮಾಜಿ ಹಾಗೂ ಹಾಲಿ ಯುಎಸ್ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ. 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿರುವ 76-ವರ್ಷ ವಯಸ್ಸಿನ ಟ್ರಂಪ್ ಗೆ ನ್ಯಾಯಾಲದ ತೀರ್ಪು ವ್ತತಿರಿಕ್ತವಾಗಿ ಬಂದರೆ, ಅವರ ಯೋಜನಗಳೆಲ್ಲ ಬುಡಮೇಲಾಗಲಿವೆ.

ಇದನ್ನೂಓದಿ: Capital Riot Case: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶಿಫಾರಸು

ಡೆಮೊಕ್ರ್ಯಾಟ್ ಪಕ್ಷದ ಚುನಾಯಿತ ಸದಸ್ಯನಾಗಿರುವ ಬ್ರ್ಯಾಗ್ ಸಾರ್ವಜನಿಕವಾಗಿ ಯಾವುದೇ ವಿಚಾರವನ್ನು ಖಚಿತಪಡಿಸಿಲ್ಲವಾದರೂ, ಕೆಲವು ನಿರ್ಣಾಯಕ ಸಾಕ್ಷ್ಯಗಳನ್ನು ನ್ಯಾಯಪೀಠದ ಮುಂದೆ ಹಾಜರುಪಡಿಸಿ, ತಮ್ಮ ಸಾಕ್ಷ್ಯ ದಾಖಲಿಸಲು ಟ್ರಂಪ್ ರನ್ನು ಆಹ್ವಾನಿಸಿದ್ದಾರೆ.

ಸ್ಟಾರ್ಮಿ ಡೇನಿಯಲ್ಸ್, ಪೋರ್ನ್​ ತಾರೆ

ಪ್ರತಿಭಟನೆ ನಡೆಸಲು ಟ್ರಂಪ್ ಕರೆ!

ತಮ್ಮನ್ನು ಮಂಗಳವಾರ ಬಂಧಿಸುವ ಸಾಧ್ಯತೆ ಇದೆಯೆಂದು ಕಳೆದ ವಾರಾಂತ್ಯದಲ್ಲಿ ಹೇಳಿದ್ದ ಟ್ರಂಪ್ ತಮ್ಮ ಬೆಂಬಲಿಗರಿಗೆ ಪ್ರತಿಭಟನೆ ನಡೆಸಿ ದೇಶವನ್ನು ಹಿಂದಿನ ಸಮಯಕ್ಕೆ ತೆಗೆದುಕೊಂಡು ಹೋಗುವಂತೆ ಕರೆ ನೀಡಿದ್ದಾರೆ. ಆದರೆ ಟ್ರಂಪ್ ಅವರ ವಕೀಲರು, ಮಾಧ್ಯಮದ ವರದಿಗಳನ್ನು ಆಧರಿಸಿ ಹಾಗೆ ಹೇಳಿದ್ದಾರೆಯೇ ಹೊರತು ಸರ್ಕಾರೀ ವಕೀಲರಿಂದ ಹೊಸ ಕ್ರಮವೇನೂ ಜರುಗಿಲ್ಲ ಎಂದು ಹೇಳಿದ್ದಾರೆ.

ಸೋಮವಾರದಂದು ಪ್ರಕರಣ ಕೊನೆಯ ಸಾಕ್ಷ್ಯವಾಗಿರುವ ವಕೀಲ ರಾಬರ್ಟ್ ಕೊಸ್ಟೆಲ್ಲೋ ಅವರ ವಿಚಾರಣೆ ನಡೆಸಿದ ಜ್ಯೂರಿಯು ಬುಧವಾರದಂದು ಟ್ರಂಪ್ ಗೆ ಪ್ರತಿಕೂಲವಾಗುವ ತೀರ್ಪನ್ನು ಬುಧವಾರ ನೀಡಲಿದೆಯೆಂದು ಯುಎಸ್ ನ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಬಂಧನಕ್ಕೆ ಸಿದ್ಧತೆ

ಹಾಗಾಗಿ, ನ್ಯೂಯಾರ್ಕ್ ಪೊಲೀಸ್ ಇಲಾಖೆಯು; ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರ ಅಭೂರ್ಪೂರ್ವ ಬಂಧನಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಪೊಲೀಸ್ ಅವರ ಫಿಂಗರ್ ಪ್ರಿಂಟ್ ತೆಗೆದುಕೊಳ್ಳಬಹುದು ಅಷ್ಟ್ಯಾಕೆ ಕೈಕೋಳ ತೊಡಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ. ಪ್ರತಿಭಟನಾಕಾರನ್ನು ತಡೆಯಲು ಬ್ರ್ಯಾಗ್ ಅವರ ಕಚೇರಿ ಮತ್ತು 5ನೇ ಅವೆನ್ಯೂನಲ್ಲಿರುವ ಟ್ರಂಪ್ ಟಾವರ್ ಬಳಿ ಬ್ಯಾರಿಕೇಡ್ ಗಳನ್ನು ಇಡಲಾಗಿದೆ.

ಇದನ್ನೂ ಓದಿ:  ಬೆಂಗಳೂರಿನ ಮೆಕ್​​ಡೊನಾಲ್ಡ್ಸ್​​ನಿಂದ ಹತ್ತು ಸೆಕೆಂಡುಗಳಲ್ಲಿ ಫುಡ್​ ಡೆಲಿವರಿ ಪಡೆದ ಕೆನಡಾದ ವ್ಯಕ್ತಿ

ನ್ಯೂ ಯಾರ್ಕ್ ಟೈಮ್ಸ್ ವರದಿಯೊಂದರ ಪ್ರಕಾರ ಒಂದು ಡಜನ್ ಗೂ ಹೆಚ್ಚು ಹಿರಿಯ ಪೊಲೀಸ್ ಅಧಿಕಾರಿಗಳು ಭದ್ರತೆಗೆ ಸಂಬಂಧಿಸಿದಂತೆ ರವಿವಾರದಂದು ಮೇಯರ್ ಸಹಾಯಕರ ಜೊತೆ ಚರ್ಚೆ ನಡೆಸಿದರು.

ಡೆಮೊಕ್ರ್ಯಾಟ್ ಪಕ್ಷದ ಸದಸ್ಯರ ಎಚ್ಚರಿಕೆ

ಪ್ರತಿಭಟನೆ ನಡೆಸುವಂತೆ ಟ್ರಂಪ್ ಅವರು ತಮ್ಮ ಬೆಂಬಲಿಗರಿಗೆ ಕರೆ ನೀಡಿರುವುದರಿಂದ 2021 ರಲ್ಲಿ ಯುಎಸ್ ರಾಜಧಾನಿಯಲ್ಲಿ ನಡೆದಂಥ ಹಿಂಸಾಚಾರಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಇದೆಯೆಂದು ಡೆಮೊಕ್ರ್ಯಾಟ್ ಪಕ್ಷದ ಹಿರಿಯ ಸದಸ್ಯರು ಎಚ್ಚರಿಸಿದ್ದಾರೆ.

ದಿ ಡೊನಾಲ್ಡ್ ಎಂಬ ಹೆಸರಿನಿಂದ ಗುರುತಿಸಿಕೊಳ್ಳವ ಟ್ರಂಪ್ ಬೆಂಬಲಿಗರ ಒಂದು ಆನ್ಲೈನ್ ಗುಂಪು ರಾಷ್ಟ್ರವ್ವಾಪಿ ಮುಷ್ಕರಕ್ಕೆ ಕರೆ ನೀಡಿ ಟ್ರಂಪ್ ಅವರು ರಕ್ಷಿಸಲು ಮತ್ತು ಯಾವುದೇ ರೀತಿಯ ಬಂಧನವನ್ನು ವಿರೋಧಿಸಲು ‘ಸಿವಿಲ್ ವಾರ್ 2.0’ ಆರಂಭಿಸಬೇಕೆಂದು ಹೇಳಿದೆ. ಟ್ರಂಪ್ ಅವರ ಪುತ್ರರು ಮತ್ತು ಅವರ ಆಪ್ತರು 2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಾಣೆಯಲ್ಲಿ ಜೋ ಬೈಡೆನ್ ಅವರು ಟ್ರಂಪ್ ರನ್ನು ಸೋಲಿಸಿದಾಗ ಬೀದಿಗಳಲ್ಲಿ ನಡೆಸಿದ ಪ್ರತಿಭಟನೆಗಳನ್ನು ಪುನರಾವರ್ತಿಸುವಂತೆ ಕರೆ ನೀಡಿದ್ದರೂ ಬೆಂಬಲಿಗರಿಂದ ನೀರಸ ಪ್ರತಿಕ್ರಿಯೆ ಎದುರಾಗಿದೆ. ನ್ಯೂ ಯಾರ್ಕ್ ನಗರದಲ್ಲಿ ಬೆಂಬಲಿಗರು ಗುಂಪುಗೂಡುತ್ತಿಲ್ಲ!

ಮ್ಯಾನ್ ಹಟ್ಟನ್ ನಲ್ಲಿ, ನ್ಯೂ ಯಾರ್ಕ್ ಯಂಗ್ ರಿಪಬ್ಲಿಕನ್ ಕ್ಲಬ್ ನಡೆಸಿದ ಒಂದು ಚಿಕ್ಕ ಪ್ರಮಾಣದ ಪ್ರತಿಭಟನೆ ಶಾಂತಿಯುತವಾಗಿ ಕೊನೆಗೊಂಡಿತು.

ಟ್ರಂಪ್ ಮುಂದೆ ಹಲವಾರು ಕಾನೂನಾತ್ಮಕ ಸವಾಲುಗಳು

ತಮ್ಮ ಮತ್ತು ಡೇನಿಯಲ್ಸ್ ನಡುವಿನ ಸಂಬಂಧವನ್ನು 2016 ನಡೆದ ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕಗೊಳಿಸದಂತೆ ಟ್ರಂಪ್ ಅವರು ಆಕೆಗೆ 130,000 ಯುಎಸ್ ಡಾಲರ್ ನೀಡಿದ ಅರೋಪದ ಮೇಲೆ ಬ್ರ್ಯಾಗ್ ಅವರ ತನಿಖೆ ಕೇಂದ್ರೀಕೃತಗೊಂಡಿದೆ. ಮೊದಲು ಟ್ರಂಪ್ ಅವರ ಲಾಯರ್ ಆಗಿದ್ದರೂ ನಂತರ ಅವರ ವೈರಿಯಾಗಿ ಬದಲಾದ ಮೈಖೆಲ್ ಕೋಹೆನ್ ತಾವೇ ಹಣ ನೀಡಿದ್ದನ್ನು ಮತ್ತು ಬಳಿಕ ಅದನ್ನು ವಾಪಸ್ಸು ಪಡೆದಿದ್ದನ್ನು ದೃಢೀಕರಿಸಿದ್ದಾರೆ.

ಕಳೆದ ವಾರ ಕೊಹೆನ್ ಜ್ಯೂರಿ ಮುಂದೆ ಹಾಜರಾಗಿ ತಮ್ಮ ಸಾಕ್ಷ್ಯವನ್ನು ದಾಖಲು ಮಾಡಿದ್ದರು ಮತ್ತು ಡೇನಿಯಲ್ಸ್ ಸರ್ಕಾರಿ ವಕೀಲರ ತನಿಖೆಯಲ್ಲಿ ಸಹಕರಿಸುತ್ತಿದ್ದಾರೆ. ಜ್ಯೂರಿಯು ಹಲವಾರು ಕಾನೂನಾತ್ಮಕ ಪ್ರಕ್ರಿಯೆ ಮತ್ತು ತೊಡಕುಗಳನ್ನು ಎದುರಿಸಬೇಕಿರುವುದರಿಂದ ವಿಚಾರಣೆ ಸುದೀರ್ಘ ಕಾಲದವರೆಗೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ನನ್ನ ವಿರುದ್ಧ ಷಡ್ಯಂತ್ರ ! ಟ್ರಂಪ್

ಡೆನಿಯಲ್ಸ್ ಜೊತೆಗಿನ ಸಂಬಂಧವನ್ನು ಅಲ್ಲಗಳೆದಿರುವ ಟ್ರಂಪ್ ತನಿಖೆಯನ್ನು ತಮ್ಮ ವಿರುದ್ಧ ನಡಡೆಯುತ್ತಿರುವ ಷಡ್ಯಂತ್ರ ಎಂದು ಹೇಳಿದ್ದಾರೆ. ಅವರ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಮೈಕ್ ಪೆನ್ಸ್ ತನಿಖೆಯನ್ನು ರಾಜಕೀಯ ಪ್ರೇರಿತ ವಿಚಾರಣೆ ಎಂದಿದ್ದಾರೆ. ಅಮೆರಿಕದ ಬೇರೆ ಬೇರೆ ಭಾಗಗಳಲ್ಲೂ ಟ್ರಂಪ್ ವಿರುದ್ಧ ತನಿಖೆಗಳು ನಡೆಯುತ್ತಿವೆ.

ಇದನ್ನೂ ಓದಿ: A Pen Hospital in Kolkata: ಬಂಗಾಳದ ರಾಜಧಾನಿಯಲ್ಲಿರುವ ಪೆನ್ ಆಸ್ಪತ್ರೆ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲಿಂದ ಅಸ್ತಿತ್ವದಲ್ಲಿದೆ!

ರಾಷ್ಟ್ರಕ್ಕೆ ಸಂಬಂಧಿಸಿದ ವರ್ಗೀಕೃತ ದಾಖಲಾತಿಗಳ ಅಸಮರ್ಪಕ ನಿರ್ವಹಣೆ ಮತ್ತು ಜನೆವರಿ 6 ರಂದು ನಡೆದ ಹಿಂಸಾಚಾರಲ್ಲಿ ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲೂ ಯುಎಸ್ ಸರ್ಕಾರ ಅವರ ವಿರುದ್ಧ ತನಿಖೆ ನಡೆಸಬಹುದಾಗಿದೆ.
ಕೆಲ ರಾಜಕೀಯ ಪರಿಣಿತರ ಪ್ರಕಾರ ಟ್ರಂಪ್ ವಿರುದ್ಧ ನಡೆಯುತ್ತಿರುವ ವಿಚಾರಣೆ 2024 ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಲಿದೆ ಎಂದು ಹೇಳಿದರೆ ಬೇರೆ ಕೆಲವರು ವಿಚಾರಣೆ ಅವರಿಗೆ ವರದಾನವಾಗಿ ಸಾಬೀತಾಗಲಿದೆ ಎನ್ನುತ್ತಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Tue, 21 March 23