Happiest Countries in the World: ವಿಶ್ವದ ಅತ್ಯಂತ ಸಂತೋಷಭರಿತ 10 ರಾಷ್ಟ್ರಗಳಿವು, ಭಾರತಕ್ಕೆ ಎಷ್ಟನೇ ಸ್ಥಾನ?
ವಿಶ್ವಸಂಸ್ಥೆಯು ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ಪೈಕಿ 10 ರಲ್ಲಿ 8 ದೇಶಗಳು ಯುರೋಪಿಯನ್ ರಾಷ್ಟ್ರಗಳಾಗಿವೆ.
ವಿಶ್ವಸಂಸ್ಥೆಯು ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ವಿಶ್ವದ ಅತ್ಯಂತ ಸಂತೋಷಭರಿತ ದೇಶಗಳ ಪೈಕಿ 10 ರಲ್ಲಿ 8 ದೇಶಗಳು ಯುರೋಪಿಯನ್ ರಾಷ್ಟ್ರಗಳಾಗಿವೆ. ಯುನೈಟೆಡ್ ನೇಷನ್ಸ್ ಸಸ್ಟೈನೇಬಲ್ ಡೆವಲಪ್ಮೆಂಟ್ ಸಲ್ಯೂಷನ್ಸ್ ನೆಟ್ವರ್ಕ್ ಪ್ರಕಟಿಸಿರುವ ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ ಪ್ರಕಾರ, ಫೆನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷಭರಿತ ದೇಶ, ವಿಶೇಷವೆಂದರೆ ಸತತ ಆರನೇ ವರ್ಷವೂ ಈ ದೇಶ ಪ್ರಥಮ ಸ್ಥಾನ ಪಡೆದಿದೆ.
ಎರಡು ಹಾಗೂ ಮೂರನೇ ಸ್ಥಾನ ಕ್ರಮವಾಗಿ ಡೆನ್ಮಾರ್ಕ್ ಮತ್ತು ಐಲೆಂಡ್ ಪಡೆದುಕೊಂಡಿದೆ. ದೇಶದ ಜನರ ಆರೋಗ್ಯ, ಆದಾಯ, ಜನರ ಸ್ಪಂದನೆ, ಜನರು ಜೀವನದ ಕುರಿತ ನಿರ್ಣಯ ತೆಗೆದುಕೊಳ್ಳುವಲ್ಲಿ ಸ್ವಾತಂತ್ರ್ಯ, ಜನತೆಗೆ ಔದಾರ್ಯ ಮತ್ತು ಭ್ರಷ್ಟಾಚಾರರಹಿತ ವಾತಾವರಣ ಮುಂತಾದವುಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.
ಮತ್ತಷ್ಟು ಓದಿ: ಸ್ವಾಮಿ ನಿತ್ಯಾನಂದನ ನಕಲಿ ಕೈಲಾಸದೊಂದಿಗೆ ಅಮೆರಿಕದ 30 ನಗರಗಳು ಕೈಜೋಡಿಸಿವೆಯಂತೆ! ನಿತ್ಯಾನಂದನ ವಂಚನೆ ಪುರಾಣ ಕೇಳಿ ಬೇಸ್ತು ಬಿದ್ದ ಅಮೆರಿಕನ್ನರು!
ಸಂತೋಷದ ಶ್ರೇಯಾಂಕದಲ್ಲಿ ಸ್ವೀಡನ್ ಆರನೇ ಸ್ಥಾನದಲ್ಲಿದೆ, ನಾರ್ವೆ ಏಳನೇ, ಸ್ವಿಟ್ಜರ್ಲೆಂಡ್ ಎಂಟನೇ, ಲಕ್ಸೆಂಬರ್ಗ್ ಒಂಬತ್ತನೇ ಮತ್ತು ನ್ಯೂಜಿಲೆಂಡ್ 10 ನೇ ಸ್ಥಾನದಲ್ಲಿದೆ. ಇವುಗಳಲ್ಲಿ ಯಾವುದೂ ಏಷ್ಯಾದ ದೇಶವಲ್ಲ. ಈ ಪಟ್ಟಿಯಲ್ಲಿ ಅಮೆರಿಕ 15ನೇ ಸ್ಥಾನದಲ್ಲಿದ್ದು, ಬ್ರಿಟನ್ 19ನೇ ಸ್ಥಾನದಲ್ಲಿದೆ.
ನಾವು ಭಾರತದ ಬಗ್ಗೆ ಮಾತನಾಡಿದರೆ, ಸಂತೋಷದ ದೇಶಗಳ ಶ್ರೇಯಾಂಕದಲ್ಲಿ ಅದು ತುಂಬಾ ಹಿಂದುಳಿದಿದೆ. ಭಾರತವು 150 ದೇಶಗಳಲ್ಲಿ 136 ನೇ ಸ್ಥಾನದಲ್ಲಿದೆ. ಆದರೆ, ಕಳೆದ ಬಾರಿ 139ನೇ ಸ್ಥಾನದಲ್ಲಿದ್ದ ಭಾರತದ ಶ್ರೇಯಾಂಕ ಸುಧಾರಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ