ಪತ್ನಿಗೆ ದಿನ ರಾತ್ರಿ ಡ್ರಗ್ಸ್​ ಕೊಟ್ಟು, ಪರ ಪುರುಷರನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿಸಿ ವಿಡಿಯೋ ಮಾಡ್ತಿದ್ದ ಪತಿಯ ಬಂಧನ

ತನ್ನ ಪತ್ನಿಗೆ ದಿನ ರಾತ್ರಿ ಡ್ರಗ್ಸ್​ ನೀಡಿ ಆಕೆಯನ್ನು ಮಲಗಿಸಿ ಆ ಸಮಯದಲ್ಲಿ ಸ್ನೇಹಿತರನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿಸಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿಗೆ ದಿನ ರಾತ್ರಿ ಡ್ರಗ್ಸ್​ ಕೊಟ್ಟು, ಪರ ಪುರುಷರನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿಸಿ ವಿಡಿಯೋ ಮಾಡ್ತಿದ್ದ ಪತಿಯ ಬಂಧನ
ಪೊಲೀಸ್
Image Credit source: Africa News

Updated on: Jun 23, 2023 | 10:20 AM

ತನ್ನ ಪತ್ನಿಗೆ ದಿನ ರಾತ್ರಿ ಡ್ರಗ್ಸ್​ ನೀಡಿ ಆಕೆಯನ್ನು ಮಲಗಿಸಿ ಆ ಸಮಯದಲ್ಲಿ ಸ್ನೇಹಿತರನ್ನು ಕರೆಸಿ ಆಕೆಯ ಮೇಲೆ ಅತ್ಯಾಚಾರ ಮಾಡಿಸಿ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಫ್ರಾನ್ಸ್​ನಲ್ಲಿ ನಡೆದ ಘಟನೆ ಇದಾಗಿದ್ದು, ವ್ಯಕ್ತಿಯು ಇದುವರೆಗೆ 51 ವಿಡಿಯೋಗಳನ್ನು ಮಾಡಿದ್ದಾನೆ. ಈ ಅಭ್ಯಾಸವನ್ನು ಕಳೆದ 10 ವರ್ಷಗಳಿಂದ ಆತ ಮುಂದುವರೆಸಿಕೊಂಡು ಬಂದಿದ್ದ. 26 ರಿಂದ 73 ವರ್ಷದೊಳಗಿನ 51 ಪುರುಷರನ್ನು ಪೊಲೀಸರು ಬಂಧಿಸಿದ್ದಾರೆ. ಇದುವರೆಗೆ ಆಕೆಯ ಮೇಲೆ 93 ಬಾರಿ ಅತ್ಯಾಚಾರ ನಡೆದಿದೆ ಎಂದು ಹೇಳಲಾಗಿದೆ.

ಅದರಲ್ಲಿ ಅಗ್ನಿ ಶಾಮಕ ಸಿಬ್ಬಂದಿ, ಲಾರಿ ಚಾಲಕ, ಮುನ್ಸಿಪಲ್ ಕೌನ್ಸಿಲರ್, ಬ್ಯಾಂಕ್, ಐಟಿ ಉದ್ಯೋಗಿ, ಜೈಲು ಸಿಬ್ಬಂದಿ ಕೂಡ ಇದ್ದಾರೆ.

ಮತ್ತಷ್ಟು ಓದಿ: Hyderabad: ಮದುವೆಯಾಗಲು ಒಪ್ಪಲಿಲ್ಲ ಎಂದು ಮಹಿಳಾ ಟೆಕ್ಕಿಯ ಕತ್ತು ಸೀಳಿದ ಯುವಕ

ಡೊಮಿನಿಕ್ ಎಂಬ ವ್ಯಕ್ತಿ ಊಟದಲ್ಲಿ ಆಂಟಿ ಆಂಗ್ಲೇಶನ್ ಡ್ರಗ್ ಅನ್ನು ಬೆರೆಸಿ ಆಕೆ ಕುಡಿಸಿ ಬಳಿಕ ಅತ್ಯಾಚಾರ ಮಾಡಿಸುತ್ತಿದ್ದ.
ಡೊಮಿನಿಕ್ ಎಂಬಾತ ಎಲ್ಲಾ ಅತ್ಯಾಚಾರವನ್ನು ವಿಡಿಯೋ ಮಾಡಿ ಅಬ್ಯುಸಸ್ ಎನ್ನುವ ಫೈಲ್​ನಲ್ಲಿ ಯುಎಸ್​ಬಿ ಡ್ರೈವ್​ನಲ್ಲಿ ಇಟ್ಟಿದ್ದ ಎಂದು ವರದಿ ಹೇಳಿದೆ.

2011 ರಿಂದ 2020ರ ನಡುವೆ ಆಕೆಯ ಮೇಲೆ ಅತ್ಯಾಚಾರ ನಡೆದಿದೆ. ದಂಪತಿಗೆ 3 ಮಕ್ಕಳಿದ್ದಾರೆ. ಮಹಿಳೆಗೆ ಮನೆಯಲ್ಲಿರುವ ಗುಪ್ತ ಕ್ಯಾಮರಾಗಳ ಬಗ್ಗೆ ತಿಳಿದ ಬಳಿಕ ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:34 am, Fri, 23 June 23

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us