AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

France: ಫ್ರಾನ್ಸ್​ನಲ್ಲಿ ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಪತ್ತೆ; 2 ಲಕ್ಷ ಸಮೀಪಿಸಿದ ಕೊವಿಡ್ ಕೇಸ್

ಕೊವಿಡ್19 ಸಾಂಕ್ರಾಮಿಕ ಆರಂಭವಾದ ಬಳಿಕ ಅತಿ ಹೆಚ್ಚಿನ ಸಂಖ್ಯೆ ಕೊವಿಡ್ ಸೋಂಕು ಪ್ರಕರಣಗಳು ಇದೀಗ ವರದಿ ಆಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ವಾರಗಳ ಕಾಲ ಇಲ್ಲಿನ ನೈಟ್ ಕ್ಲಬ್​ಗಳು ಮುಚ್ಚಿರಲಿದೆ ಎಂದು ಹೇಳಲಾಗಿದೆ.

France: ಫ್ರಾನ್ಸ್​ನಲ್ಲಿ ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಪತ್ತೆ; 2 ಲಕ್ಷ ಸಮೀಪಿಸಿದ ಕೊವಿಡ್ ಕೇಸ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Dec 29, 2021 | 9:05 PM

ಪ್ಯಾರಿಸ್: ಫ್ರಾನ್ಸ್​ನಲ್ಲಿ ಒಂದೇ ದಿನ ದಾಖಲೆಯ 1,80,000 ದಷ್ಟು ಕೊರೊನಾ ಪ್ರಕರಣಗಳು ವರದಿ ಆಗಿದೆ. ಕೊವಿಡ್19 ಸಾಂಕ್ರಾಮಿಕ ಆರಂಭವಾದ ಬಳಿಕ ಅತಿ ಹೆಚ್ಚಿನ ಸಂಖ್ಯೆ ಕೊವಿಡ್ ಸೋಂಕು ಪ್ರಕರಣಗಳು ಇದೀಗ ವರದಿ ಆಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ವಾರಗಳ ಕಾಲ ಇಲ್ಲಿನ ನೈಟ್ ಕ್ಲಬ್​ಗಳು ಮುಚ್ಚಿರಲಿದೆ ಎಂದು ಹೇಳಲಾಗಿದೆ.

ಡಿಸೆಂಬರ್ 6 ರಂದು ಸುಮಾರು 1,600 ರಷ್ಟು ನೈಟ್ ಕ್ಲಬ್​ಗಳನ್ನು ಮುಚ್ಚಲಾಗಿತ್ತು. ಮುಂದಿನ ಆದೇಶದ ವರೆಗೆ ಕ್ಲಬ್​ಗಳನ್ನು ತೆರೆಯದಂತೆ ಸೂಚನೆ ನೀಡಲಾಗಿತ್ತು. ರಜೆ, ಪ್ರವಾಸ, ಹಬ್ಬಗಳ ಕಾರಣದಿಂದ ಕೊರೊನಾ ಸೋಂಕು, ಒಮಿಕ್ರಾನ್ ಪ್ರಬೇಧದ ಪ್ರಕರಣಗಳು ಹೆಚ್ಚದಂತೆ ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಮಂಗಳವಾರ ಫ್ರಾನ್ಸ್​ನಲ್ಲಿ 1,79,807 ಕೊರೊನಾ ಸೋಂಕು ಪ್ರಕರಣಗಳು ವರದಿ ಆಗಿರುವ ಬಗ್ಗೆ ಇಲ್ಲಿನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದಕ್ಕೂ ಮೊದಲು ಕಳೆದ ಶನಿವಾರ 1,00,000 ದಷ್ಟು ಕೊವಿಡ್ ಪ್ರಕರಣಗಳು ದಾಖಲಾಗಿದ್ದವು. ಒಮಿಕ್ರಾನ್ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ನೈಟ್ ಕ್ಲಬ್​ಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಮತ್ತೆ ಮುಂದೂಡಲಾಗಿದೆ. ಹಾಗೆಂದು, ಫ್ರಾನ್ಸ್​ನಲ್ಲಿ ಕೊರೊನಾ ವಿರುದ್ಧದ ಲಸಿಕೆ ನೀಡಿಕೆ ದಾಖಲೆ ಪ್ರಮಾಣದಲ್ಲಿ ನಡೆದಿದೆ. ಲಸಿಕೆ ಪಡೆಯಲು ಅರ್ಹ ವ್ಯಕ್ತಿಗಳ ಪೈಕಿ ಶೇಕಡಾ 90 ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ.

ಕರ್ನಾಟಕ ಕೊರೊನಾ ವರದಿ ಹೀಗಿದೆ ಕರ್ನಾಟಕ ರಾಜ್ಯದಲ್ಲಿ ಇಂದು (ಡಿಸೆಂಬರ್ 29) ಹೊಸದಾಗಿ 566 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30,05,798 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,59,674 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 6 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,324 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 7,771 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 400 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,62,397 ಕ್ಕೆ ಏರಿಕೆಯಾಗಿದೆ. 12,62,397 ಸೋಂಕಿತರ ಪೈಕಿ 12,39,616 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 4 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,392 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 6,388 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 566 ಜನರಿಗೆ ಕೊರೊನಾ ದೃಢ; 6 ಮಂದಿ ಸಾವು

ಇದನ್ನೂ ಓದಿ: Covid19: ಬೆಂಗಳೂರು ಅಪಾರ್ಟ್​ಮೆಂಟ್​ನಲ್ಲಿ 27, ಹಾಸನ ಕಾಫಿತೋಟದಲ್ಲಿ 23 ಮಂದಿಗೆ ಕೊರೊನಾ ದೃಢ