ನ್ಯೂಯಾರ್ಕ್: ಪತ್ನಿಯ ಬ್ಯಾಂಕ್ ಖಾತೆ ವಿವರಗಳನ್ನು (UBS Bank Account Info) ಬಹಿರಂಗವಾಗಿ ಹಂಚಿಕೊಂಡಿದ್ದ ಸ್ವಿಸ್ ಬ್ಯಾಂಕ್ ಯುಬಿಎಸ್ (Swiss Bank UBS) ವಿರುದ್ಧ ದಂಪತಿ (Couple) ಕೋರ್ಟ್ ಮೆಟ್ಟಿಲೇರಿದ್ದಾರೆ. ನಷ್ಟದ ಬಾಬತು ಸರಿದೂಗಿಸಲು ಲಕ್ಷಾಂತರ ಅಮೆರಿಕನ್ ಡಾಲರ್ ನೀಡುವಂತೆ ಸೂಚಿಸಲಾಗಿದೆ. ಜೊನಾಥನ್ ಮತ್ತು ಎಸ್ತರ್ ಜುಹೋವಿಟ್ಸ್ಕಿ ದಂಪತಿ ಸ್ವಿಸ್ ಬ್ಯಾಂಕ್ ಯುಬಿಎಸ್ ವಿರುದ್ಧ ಕಾನೂನು ಸಮರ ಸಾರಿದ್ದು, ಕೂಲಂಕಷ ಆಡಿಟ್ ತನಿಖೆ ಬಳಿಕ ಭಾರೀ ಪ್ರಮಾಣದಲ್ಲಿ ಖಾತೆಯಲ್ಲಿ ನಷ್ಟ ಅನುಭವಿಸಿರುವುದು ಬೆಳಕಿಗೆ ಬಂತು. ಒಂದು ಹಂತದಲ್ಲಿ ಐಆರ್ಎಸ್ ಅಪರಾಧ ವಿಭಾಗದ (IRS criminal division) ವಿರುದ್ಧವೂ ಪ್ರಕರಣ ದಾಖಲಿಸಲು ಉಲ್ಲೇಖ ಮಾಡಿದೆವು. ತಮ್ಮ ಖಾತೆ ಮಾಹಿತಿ ಹಂಚಿಕೆ ಅಗಾಧ ಪ್ರಮಾಣದಲ್ಲಿ ಏರುಪೇರು ಕಂಡಬಂದಿತ್ತು. ಕೊನೆಗೆ ಮಿಲಿಯನ್ಗಟ್ಟಲೆ ದಂಡ ಕಟ್ಟಲು ಬ್ಯಾಂಕ್ ಒಪ್ಪಿತು ಎಂದು ದಂಪತಿ ತಿಳಿಸಿದ್ದಾರೆ.
ಎಸ್ತರ್ ಜುಹೋವಿಟ್ಸ್ಕಿ ಯುಎಸ್ ಪೌರತ್ವ (U.S. citizen) ಹೊಂದಿಲ್ಲ. ಆದರೂ ಐಆರ್ಎಸ್ (Internal Revenue Service) ಆಣಿತಿಯಂತೆ ತನ್ನ ಪತ್ನಿಯ ಬ್ಯಾಂಕ್ ವಿವರವನ್ನು ಸ್ವಿಸ್ ಬ್ಯಾಂಕ್ ಯುಬಿಎಸ್ ಹಸ್ತಾಂತರಿಸಿತ್ತು. ಇದು ಸರಿಯಲ್ಲ ಎಂಬುದು ದಂಪತಿಯ ವಾದವಾಗಿದೆ. ಈ ಸಂಬಂಧ ಆರ್ಥಿಕ ನಗರಿ ಮ್ಯಾನ್ಹಟ್ಟನ್ ನಲ್ಲಿರುವ ಫೆಡರಲ್ ಕೋರ್ಟ್ಗೆ ಅರ್ಜಿ ಹಾಕಿಕೊಂಡಿದ್ದಾರೆ. ಎಸ್ತರ್ ಜುಹೋವಿಟ್ಸ್ಕಿ ಇಸ್ರೇಲ್ ಮತ್ತು ಆಸ್ಟ್ರಿಯಾ ದೇಶಗಳ ಪೌರತ್ವ ಹೊಂದಿದ್ದಾರೆ. ಅವತು ಮೆದುಳು ಸಂಬಂಧಿ ಕಾಯಿಲೆಯಿಂದ (ಡಿಸ್ಲೆಕ್ಸಿಯಾ -dyslexia) ಬಳಲುತ್ತಿದ್ದರು. ಅವರ ಖಾತೆಯನ್ನು ಪತಿ ಜೊನಾಥನ್ ನಿರ್ವಹಿಸುತ್ತಿದ್ದರು. ಆದರೆ ಜೊನಾಥನ್ ದ್ವಿಪೌರತ್ವ ಪಡೆದಿದ್ದರು.
ಕಾಳ ಧನ ಸಂಗ್ರಹಕ್ಕೆ ಸ್ವರ್ಗವೆನಿಸಿದ್ದ ಸ್ವಿಸ್ ಬ್ಯಾಂಕ್ಗಳ ಮೇಲೆ ಅಮೆರಿಕಾದ ತೆರಿಗೆ ಅಧಿಕಾರಿಗಳು ಇತ್ತೀಚೆಗೆ ನಿರಂತರವಾಗಿ ಕಣ್ಣಿಟ್ಟಿದ್ದಾರೆ. ಅಮೆರಿಕ ಪ್ರಜೆಗಳು ತೆರಿಗೆ ತಪ್ಪಿಸಿ, ಈ ಬ್ಯಾಂಕ್ಗಳಲ್ಲಿ ಹಣ ಠೇವಣಿಯಿಡುವುದಕ್ಕೆ ಕುಮ್ಮಕ್ಕು ನೀಡಿದ್ದ ಆರೋಪದ ಮೇಲೆ UBS ಬ್ಯಾಂಕ್ಗಳಿಗೆ 780 ದಶಲಕ್ಷ ಡಾಲರ್ ದಂಡ ವಿಧಿಸಿದ್ದರು. ಅದಾದ ಬಳಿಕ ಸಾವಿರಾರು ಅಮೆರಿಕ ಪ್ರಜೆಗಳ ಮಾಹಿತಿಯನ್ನು UBS ಬ್ಯಾಂಕ್ ಅಮೆರಿಕಾದ ತೆರಿಗೆ ಅಧಿಕಾರಿಗಳಿಗೆ ಒದಗಿಸಿತ್ತು.
ಎಸ್ಬಿಐ ಬ್ಯಾಂಕ್ ರಾಬರಿ, ಓರ್ವ ಉದ್ಯೋಗಿ ಹತ್ಯೆ, ಕ್ಯಾಮರಾದಲ್ಲಿ ಘಟನೆ ಸೆರೆ ಮುಂಬೈ: ಆಘಾತಕಾರಿ ಘಟನೆಯಲ್ಲಿ ಮುಂಬೈನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದಹಿಸರ್ ಶಾಖೆಯಲ್ಲಿ ದರೋಡೆ ನಡೆದಿದ್ದು, ಘಟನೆಯ ವೇಳೆ ಓರ್ವ ಉದ್ಯೋಗಿ ಹತ್ಯೆಗೀಡಾಗಿದ್ದು, ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬುಧವಾರ ಸಾಯಂಕಾಲ ಈ ಘಟನೆ ನಡೆದಿದೆ. ಬ್ಯಾಂಕ್ನ ಸರ್ವೈಲೆನ್ಸ್ ಕ್ಯಾಮರಾಗಳಲ್ಲಿ ಇಡೀ ವೃತ್ತಾಂತ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ದರೋಡೆಯ ಬಳಿಕ ಇಬ್ಬರೂ ಆಗುಂತಕರು ಪರಾರಿಯಾಗಿದ್ದಾರೆ. ಮೃತ ಉದ್ಯೋಗಿ ಎಸ್ಬಿಐನ ಹೊರಗುತ್ತಿಗೆ ನೌಕರ ಎಂದು ತಿಳಿದುಬಂದಿದೆ.
ಇಬ್ಬರು ಮುಸುಕುಧಾರಿ ಆಗುಂತಕರು ಒಳ ಪ್ರವೇಶಿಸಿದ್ದರು. ಒಬ್ಬ ದರೋಡೆ ಮಾಡುತ್ತಿದ್ದರೆ ಮತ್ತೊಬ್ಬ ಗನ್ ಝಳಪಿಸುತ್ತಾ ಬ್ಯಾಂಕ್ ಸಿಬ್ಬಂದಿಯನ್ನು ಬೆದರಿಸುತ್ತಿರುವುದು ಕಂಡುಬಂದಿದೆ. ದರೋಡೆಯ ಬಳಿಕ ಸುದ್ದಿ ತಲುಪುತ್ತಿದ್ದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದಹಿಸರ್ ಶಾಖೆಯಲ್ಲಿ ದರೋಡೆ ನಡೆಸುವಾಗ ಗುಂಡು ಹಾರಿಸಿ, ಒಬ್ಬ ಸಿಬ್ಬಂದಿಯನ್ನು ಸಾಯಿಸಿದ್ದ ಪ್ರಕರಣದಲ್ಲಿ ಮುಂಬೈ ಪೊಲೀಸರು ಇಬ್ಬರು ದರೋಡೆಕೋರರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ದರೋಡೆ ಮಾಡಿದ್ದ ಸುಮಾರು 2.5 ಲಕ್ಷ ರೂಪಾಯಿ ಹಣ ಮತ್ತು ಆಯುಧಗಳನ್ನ ವಶಪಡಿಸಿಕೊಂಡಿದ್ದಾರೆ. ಒಟ್ಟು 8 ಪೊಲೀಸ್ ತಂಡಗಳು ದರೋಡೆಕೋರರ ಬೆನ್ನುಹತ್ತಿದ್ದವು.