Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಜೀರಿಯಾದಲ್ಲಿ ಇಂಧನದ ಟ್ಯಾಂಕರ್ ಸ್ಫೋಟದಿಂದ 94 ಜನ ಸಾವು

ನೈಜೀರಿಯಾದಲ್ಲಿ ಇಂಧನ ತುಂಬಿದ್ದ ಟ್ಯಾಂಕರ್ ಸ್ಫೋಟಗೊಂಡಿದ್ದು, ಈ ದುರಂತದಲ್ಲಿ 94 ಜನರು ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಮಂಗಳವಾರ ತಡರಾತ್ರಿ ಉತ್ತರ ನೈಜೀರಿಯಾದ ಜಿಗಾವಾ ರಾಜ್ಯದಲ್ಲಿ ಇಂಧನ ಟ್ಯಾಂಕರ್ ಅಪಘಾತಕ್ಕೀಡಾಗಿ ಸ್ಫೋಟಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ನೈಜೀರಿಯಾದಲ್ಲಿ ಇಂಧನದ ಟ್ಯಾಂಕರ್ ಸ್ಫೋಟದಿಂದ 94 ಜನ ಸಾವು
ನೈಜೀರಿಯಾದಲ್ಲಿ ಇಂಧನದ ಟ್ಯಾಂಕರ್ ಸ್ಫೋಟ
Follow us
ಸುಷ್ಮಾ ಚಕ್ರೆ
|

Updated on: Oct 16, 2024 | 5:43 PM

ಅಬುಜಾ: ನೈಜೀರಿಯಾದಲ್ಲಿ ಇಂಧನದ ಟ್ಯಾಂಕರ್ ಸ್ಫೋಟಗೊಂಡಿದ್ದು, 94 ಜನರು ಮೃತಪಟ್ಟಿದ್ದಾರೆ. ಹಾಗೇ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನೈಜೀರಿಯಾದ ರಾಜಧಾನಿ ಅಬುಜಾದ ಉತ್ತರಕ್ಕೆ ಸುಮಾರು 530 ಕಿಲೋಮೀಟರ್ ದೂರದಲ್ಲಿರುವ ತೌರಾ ಸ್ಥಳೀಯ ಸರ್ಕಾರಿ ಪ್ರದೇಶದ ಮಜಿಯಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ.

ಉತ್ತರ ನೈಜೀರಿಯಾದಲ್ಲಿ ಚೆಲ್ಲಿದ್ದ ಇಂಧನವನ್ನು ಸಂಗ್ರಹಿಸಲು ನೆರೆದಿದ್ದ ಸ್ಥಳೀಯರ ಬಳಿ ಅಪಘಾತಕ್ಕೀಡಾದ ಟ್ಯಾಂಕರ್ ಸ್ಫೋಟಗೊಂಡಿದ್ದು, ಇದರಿಂದಾಗಿ 94 ಜನರು ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಜಿಗಾವಾ ರಾಜ್ಯದ ಗ್ರಾಮವಾದ ಮಜಿಯಾದಲ್ಲಿ ಸ್ಥಳೀಯ ಕಾಲಮಾನ ಮಂಗಳವಾರ ತಡರಾತ್ರಿ ಸಂಭವಿಸಿದ ಸ್ಫೋಟದಿಂದ ಟೋಲ್ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ

“ಚಾಲಕನ ನಿಯಂತ್ರಣ ಕಳೆದುಕೊಂಡ ಟ್ಯಾಂಕರ್ ಪಲ್ಟಿಯಾಗಿದೆ. ಇದರಿಂದ ಇಂಧನ ಹೊರಗೆ ಚೆಲ್ಲಿದೆ. ಈ ವೇಳೆ ಟ್ಯಾಂಕರ್ ಸ್ಫೋಟವಾಗಿ ಸುತ್ತಲೂ ಸೇರಿದ್ದ 94 ಜನ ಮೃತಪಟ್ಟಿದ್ದಾರೆ. ಕನಿಷ್ಠ 50 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಟ್ಯಾಂಕರ್ ಅಪಘಾತಕ್ಕೀಡಾದ ನಂತರ ಟ್ಯಾಂಕರ್‌ನಿಂದ ಇಂಧನ ಸಂಗ್ರಹಿಸಲು ನೆರೆದಿದ್ದ ಸ್ಥಳೀಯ ನಿವಾಸಿಗಳು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ರಿಂಗಿಮ್ ಮತ್ತು ಹಡೆಜಿಯಾ ಪಟ್ಟಣಗಳಲ್ಲಿನ ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಸಾಮೂಹಿಕ ಅಂತ್ಯಕ್ರಿಯೆಯನ್ನು ನಡೆಸಲಾಗುವುದು.

ಇದನ್ನೂ ಓದಿ: ವಿಜಯದಶಮಿಯಂದು ಧಾರವಾಡದಲ್ಲಿ ಘೋರ ಅಪಘಾತ: ಟಿಪ್ಪರ ಡಿಕ್ಕಿಗೆ ಯುವಕನ ಅಂಗಾಂಗಗಳು ಚೆಲ್ಲಾಪಿಲ್ಲಿ

ಕಳೆದ ತಿಂಗಳು ಉತ್ತರ-ಮಧ್ಯ ನೈಜೀರಿಯಾದಲ್ಲಿ ಕನಿಷ್ಠ 48 ಜನರು ಪ್ರಯಾಣಿಕರು ಮತ್ತು ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಇಂಧನ ಟ್ಯಾಂಕರ್ ಸ್ಫೋಟಗೊಂಡು ಇತರ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ