AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನದಲ್ಲಿ ಕೂತು ಪ್ರಯಾಣಿಸುವುದು ಮಾಮೂಲಿಯೇ.. ಈಗ ಮಲಗಿಯೂ ಪ್ರಯಾಣಿಸಬಹುದು ಗೊತ್ತಾ!?

ವಿಮಾನದಲ್ಲಿ ಕುಳಿತುಕೊಂಡು ಪ್ರಯಾಣಿಸಬಹುದು ಎಂದು ನಿಮಗೆಲ್ಲಾ ಗೊತ್ತು. ಆದರೆ ಇಲ್ಲೀಗ ಮಲಗಿಯೂ ಪ್ರಯಾಣಿಸಬಹುದು. ಹಾಯಾಗಿ ನಿದ್ರಿಸುತ್ತಾ ವಾಯುವಿಹಾರ ಮಾಡಬಹುದು.

ವಿಮಾನದಲ್ಲಿ ಕೂತು ಪ್ರಯಾಣಿಸುವುದು ಮಾಮೂಲಿಯೇ.. ಈಗ ಮಲಗಿಯೂ ಪ್ರಯಾಣಿಸಬಹುದು ಗೊತ್ತಾ!?
ಸಾಂದರ್ಭಿಕ ಚಿತ್ರ
TV9 Web
| Updated By: ganapathi bhat|

Updated on:Apr 06, 2022 | 9:01 PM

Share

ಕೊರೊನಾ ನಂತರ ಬಹಳಷ್ಟು ಬದಲಾವಣೆಗಳನ್ನು ನಮ್ಮ ಸುತ್ತಮುತ್ತ ನಾವು ಗಮನಿಸುತ್ತಿದ್ದೇವೆ. ವಿಶೇಷ, ವಿಶಿಷ್ಟ ಎಂಬಂಥ ಹಲವು ವ್ಯತ್ಯಾಸಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಇದೀಗ ಹೊಸ ಅಚ್ಚರಿಯೊಂದು ಈ ಪಟ್ಟಿಗೆ ಸೇರಿಕೊಂಡಿದೆ.

ಕುಳಿತುಕೊಂಡು ವಿಮಾನದಲ್ಲಿ ಪ್ರಯಾಣಿಸಬಹುದು ಎಂದು ನಿಮಗೆಲ್ಲಾ ಗೊತ್ತು. ಆದರೆ ಇಲ್ಲೀಗ ಮಲಗಿಯೂ ಪ್ರಯಾಣಿಸಬಹುದು. ಹಾಯಾಗಿ ನಿದ್ರಿಸುತ್ತಾ ವಿಹಾರ ಮಾಡಬಹುದು. ಹೇಗೆ? ಯಾಕೆ? ಅಂತೀರಾ..

ಲುಫ್ತಾನ್ಸಾ ವಿಮಾನಯಾನ ಸಂಸ್ಥೆಯಿಂದ ಹೊಸ ಸೇವೆ ಕೊರೊನಾ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಇದು ವಿಮಾನ ಪ್ರಯಾಣದ ಸಂದರ್ಭಕ್ಕೂ ಹೊರತಾಗಿಲ್ಲ. ವಿಮಾನದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ಪ್ರಯಾಣಿಕರಿಗೆ ಖಾಸಗಿ ಸ್ಥಳ ನೀಡುವ ಸಲುವಾಗಿ ಜರ್ಮನಿಯ ಲುಫ್ತಾನ್ಸಾ ವಿಮಾನಯಾನ ಸಂಸ್ಥೆ ಹೊಸ ಕೊಡುಗೆಯೊಂದನ್ನು ನೀಡಿದೆ.

ನವೆಂಬರ್ 18ರಿಂದ ಡಿಸೆಂಬರ್​ವರೆಗೆ, ಫ್ರಾಂಕ್​ಫರ್ಟ್, ಜರ್ಮನಿ, ಸಾವೊ ಪೌಲೊ ಮತ್ತು ಬ್ರೆಜಿಲ್​ಗೆ ಸಂಚರಿಸುವ ವಿಮಾನಗಳಲ್ಲಿ ಮಲಗಿಕೊಂಡು ಪ್ರಯಾಣಿಸುವ (Sleeper’s Row) ಹೊಸ ಸೌಲಭ್ಯ ನೀಡಲಿದೆ. ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣಿಸುವವರು ಮೂರು ಅಥವಾ ನಾಲ್ಕು ಆಸನಗಳ ಒಂದು ಸಾಲನ್ನು ಆರಿಸಬಹುದಾಗಿದ್ದು, ಅದರಲ್ಲಿ ಮಲಗಿಕೊಂಡು ವಿಮಾನಯಾನ ಮಾಡಬಹುದಾಗಿದೆ. ಇದು ಬ್ಯುಸಿನೆಸ್ ಕ್ಲಾಸ್ ಬೆಡ್​ನಲ್ಲಿ ಪ್ರಯಾಣ ಮಾಡಿದ ಅನುಭವ ಕೊಡಲಿದೆ ಎಂಬುದು ಲುಫ್ತಾನ್ಸಾ ಆಶಯ.

ಪ್ರಯಾಣಿಕರಿಗೆ ಸಿಗುವ ವಿಶೇಷ ಸೌಲಭ್ಯಗಳೇನು? ವಿಮಾನಯಾನ ಮಾಡುವ ಪ್ರಯಾಣಿಕರಿಗೆ ಒಂದು ಹೊದಿಕೆ, ತಲೆದಿಂಬು ಮತ್ತೊಂದು ಸೀಟ್ ಟಾಪರ್ ನೀಡಲಾಗುತ್ತದೆ ಎಂದು ಲುಫ್ತಾನ್ಸಾ ಹೇಳಿದೆ. ಈ ವಿಶೇಷ ಸೌಲಭ್ಯವನ್ನು ಬಳಸಿಕೊಳ್ಳಲು ಆಸಕ್ತ ಪ್ರಯಾಣಿಕರು, ಟಿಕೆಟ್​ನ ಮೂಲಬೆಲೆಗೆ 260 ಡಾಲರ್​ಗಳ ಹೆಚ್ಚಿನ ಮೊತ್ತ ತೆರಬೇಕು ಎಂದೂ ತಿಳಿಸಿದೆ.

ಇದನ್ನೂ ಓದಿ ಕೊರೊನಾ ಲಸಿಕೆ ಸಿದ್ಧವಾದ್ರೆ.. ಇಡೀ ವಿಶ್ವಕ್ಕೆ ಹಂಚಲು ಎಷ್ಟು ಕಾರ್ಗೋ ವಿಮಾನಗಳು ಬೇಕಾಗುತ್ತೆ ಗೊತ್ತಾ!?

Published On - 5:06 pm, Sat, 28 November 20

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ