ಕೆಲವೇ ತಿಂಗಳಲ್ಲಿ ಜರ್ಮನಿಯಲ್ಲಿ ಬಹುತೇಕರು ಕೊರೊನಾದಿಂದ ಗುಣಮುಖರಾಗುತ್ತಾರೆ ಇಲ್ಲವೇ ಸಾಯುತ್ತಾರೆ: ಆರೋಗ್ಯ ಸಚಿವರ ಖಡಕ್​ ವಾರ್ನ್​

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಜರ್ಮನಿ ಕಳೆದ ವಾರ ಕಠಿಣ ನಿರ್ಬಂಧಗಳನ್ನು ಘೋಷಿಸಿದೆ.  ಲಸಿಕೆ ಹಾಕದವರಿಗೆ ಚಿತ್ರಮಂದಿರಗಳು, ಜಿಮ್​​ಗಳು, ಹೋಟೆಲ್​​ಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ ಹೇರಲಾಗುವುದು ಎಂದು ಹೇಳಿದೆ. 

ಕೆಲವೇ ತಿಂಗಳಲ್ಲಿ ಜರ್ಮನಿಯಲ್ಲಿ ಬಹುತೇಕರು ಕೊರೊನಾದಿಂದ ಗುಣಮುಖರಾಗುತ್ತಾರೆ ಇಲ್ಲವೇ ಸಾಯುತ್ತಾರೆ: ಆರೋಗ್ಯ ಸಚಿವರ ಖಡಕ್​ ವಾರ್ನ್​
ಜರ್ಮನಿ ಆರೋಗ್ಯ ಸಚಿವ
Follow us
TV9 Web
| Updated By: Lakshmi Hegde

Updated on: Nov 23, 2021 | 11:21 AM

ಕೆಲವೇ ತಿಂಗಳುಗಳಲ್ಲಿ ಅಂದರೆ ಚಳಿಗಾಲ ಮುಗಿಯುವುದರೊಳಗೆ ಜರ್ಮನಿಯಲ್ಲಿ ಬಹುತೇಕರು ಅಥವಾ ಎಲ್ಲರೂ ಕೊರೊನಾ ಲಸಿಕೆಯನ್ನು ಪಡೆಯುತ್ತಾರೆ, ಕೊರೊನಾದಿಂದ ಗುಣಮುಖರಾಗುತ್ತಾರೆ ಇಲ್ಲವೇ ಸಾಯುತ್ತಾರೆ ಎಂದು ಜರ್ಮನ್​ ಆರೋಗ್ಯ ಸಚಿವ ಜೆನ್ಸ್ ಸ್ಪಾನ್ ಎಚ್ಚರಿಸಿದ್ದಾರೆ. ಜರ್ಮನಿಯಲ್ಲಿ ಕೊರೊನಾದ ಡೆಲ್ಟಾ ರೂಪಾಂತರ ವೈರಸ್ ಕಾಟ ಹೆಚ್ಚಾಗಿದೆ. ಈ ಮಧ್ಯೆ ಜರ್ಮನಿಯ ದಕ್ಷಿಣ ನೆರೆರಾಷ್ಟ್ರ ಆಸ್ಟ್ರಿಯಾ ಮತ್ತೆ ದೇಶಾದ್ಯಂತ ಲಾಕ್​ಡೌನ್​ ಹೇರಿದೆ.  ಅದರ ಬೆನ್ನಲ್ಲೇ ಜೆನ್ಸ್ ಸ್ಪಾನ್ ಹೀಗೊಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ಈ ಮೂಲಕ ಆದಷ್ಟು ಬೇಗನೇ ಎಲ್ಲರೂ ಕೊವಿಡ್​ 19 ಲಸಿಕೆ ಪಡೆಯಿರಿ ಎಂದು ಹೇಳಿದ್ದಾರೆ.

ಜರ್ಮನಿಯಲ್ಲಿ ಇತ್ತೀಚೆಗೆ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆಯಲ್ಲಿ ದಾಖಲೆಯ ಏರಿಕೆ ಕಾಣುತ್ತಿದೆ. ಆಸ್ಪತ್ರೆಗಳಲ್ಲಿ ಐಸಿಯು ಬೆಡ್​ಗಳ ಕೊರತೆ ಎದುರಾಗಿದ್ದು ವರದಿಯಾಗಿದೆ.  ಈ ಬಗ್ಗೆ ಆಸ್ಪತ್ರೆಗಳ ವೈದ್ಯರೇ ಎಚ್ಚರಿಕೆ ನೀಡುತ್ತಿದ್ದಾರೆ. ಜರ್ಮನಿಯಲ್ಲಿ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದರೂ ಕೂಡ ಇದುವರೆಗೆ ಶೇ.68ರಷ್ಟು ಜನರು ಮಾತ್ರ ಪೂರ್ಣ ಪ್ರಮಾಣದಲ್ಲಿ ಕೊರೊನಾ ಲಸಿಕೆ ಪಡೆದಿದ್ದಾರೆ. ಆದರೆ ಕೊರೊನಾ ಸಾಂಕ್ರಾಮಿಕವನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ಪ್ರಮಾಣ ತುಂಬ ಕಡಿಮೆಯಾಯಿತು ಎಂದು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಯುರೋಪ್​​ನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಜರ್ಮನಿ. ಇಲ್ಲಿ ಸೋಮವಾರ 30,643 ಹೊಸ ಕೊವಿಡ್​ 19 ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 5.3ಮಿಲಿಯನ್​​ಗೆ ತಲುಪಿದೆ. ಇನ್ನು 24ಗಂಟೆಯಲ್ಲಿ 62 ಮಂದಿ ಕೊರೊನಾದಿಂದ ಮೃತಪಟ್ಟಿದ್ದು ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 1,00,000ಕ್ಕೆ ಏರಿಕೆಯಾಗಿದೆ.  ಇದೀಗ ಮತ್ತೆ ಏರಿಕೆಯಾಗುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಆಸ್ಪತ್ರೆಗಳಲ್ಲೂ ಅವ್ಯವಸ್ಥೆ ಆಗಿದೆ. ನಿಭಾಯಿಸುವುದು ಕಷ್ಟವಿದೆ ಎಂದು ಜೆನ್ಸ್ ಸ್ಪಾನ್ ತಿಳಿಸಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಜರ್ಮನಿ ಕಳೆದ ವಾರ ಕಠಿಣ ನಿರ್ಬಂಧಗಳನ್ನು ಘೋಷಿಸಿದೆ.  ಲಸಿಕೆ ಹಾಕದವರಿಗೆ ಚಿತ್ರಮಂದಿರಗಳು, ಜಿಮ್​​ಗಳು, ಹೋಟೆಲ್​​ಗಳು ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧ ಹೇರಲಾಗುವುದು ಎಂದು ಹೇಳಿದೆ.  ಬವೇರಿಯಾ ಮತ್ತು ಸ್ಯಾಕ್ಸೋನಿ ಸೇರಿ ಜರ್ಮನಿಯ ಹಲವು ಪ್ರದೇಶಗಳಲ್ಲಿ ಕ್ರಿಸ್​ಮಸ್​ ಮಾರುಕಟ್ಟೆಯನ್ನು ನಿರ್ಬಂಧಿಸಲಾಗಿದೆ. ಲಸಿಕೆ ಹಾಕಿಸದವರು ಅನಿವಾರ್ಯ ಕಾರಣ ಹೊರತು, ಸಾರ್ವಜನಿಕ ಸ್ಥಳಕ್ಕೆ ಬರಬೇಡಿ ಎಂದೂ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:  ಫೂಟ್​ಬಾಲ್​ ತಾರೆಯೆನಿಸಿದ್ದ ಡಿಯೇಗೋ ಮೆರಡೋನ ವಿರುದ್ಧ ರೇಪ್​ ಆರೋಪ; ನನ್ನ ಬಾಲ್ಯವನ್ನು ಕರಾಳವಾಗಿಸಿದರು ಎಂದ ಮಹಿಳೆ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ