ಹೈಟಿ ಭೂಕಂಪ: ಮೃತರ ಸಂಖ್ಯೆ 724ಕ್ಕೆ ಏರಿಕೆ, ಮನೆ ಕಳೆದುಕೊಂಡವರು 15 ಲಕ್ಷ ಮಂದಿ

ಧರೆಗೆ ಉರುಳಿರುವ ಕಟ್ಟಡಗಳ ಅವಶೇಷಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.

ಹೈಟಿ ಭೂಕಂಪ: ಮೃತರ ಸಂಖ್ಯೆ 724ಕ್ಕೆ ಏರಿಕೆ, ಮನೆ ಕಳೆದುಕೊಂಡವರು 15 ಲಕ್ಷ ಮಂದಿ
ಹೈಟಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಹಾನಿಗೀಡಾಗಿರುವ ಕಟ್ಟಡ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 15, 2021 | 11:27 PM

ಜೆರೆಮಿ: ಹೈಟಿ ದೇಶದಲ್ಲಿ ಶನಿವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 724ಕ್ಕೆ ಏರಿದೆ. ಪರಿಸ್ಥಿತಿಯ ಗಾಂಭೀರ್ಯ ಅರಿತ ಪ್ರಧಾನಿ ಏರಿಯಲ್ ಹೆನ್ರಿ ಒಂದು ತಿಂಗಳ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ. ಸುಮಾರು 2 ಲಕ್ಷ ಜನರು ವಾಸಿಸುವ ಜೆರೆಮಿ ನಗರದಲ್ಲಿ ತೀವ್ರ ಸ್ವರೂಪದ ಹಾನಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಪತ್ತೆಯಾಗುತ್ತಿರುವ ಶವಗಳ ಸಂಖ್ಯೆ ಹೆಚ್ಚುತ್ತಿದೆ. ಧರೆಗೆ ಉರುಳಿರುವ ಕಟ್ಟಡಗಳ ಅವಶೇಷಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.

ಹೈಟಿ ರಾಜಧಾನಿ ಪೋರ್ಟ್-ಅವು-ಪ್ರಿನ್ಸ್​ನ ಪಶ್ಚಿಮಕ್ಕೆ 160 ಕಿಮೀ ದೂರದಲ್ಲಿ ಸಂಭವಿಸಿದ ಭೂಕಂಪದಿಂದ ವ್ಯಾಪಕ ಹಾನಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.2ರಷ್ಟು ದಾಖಲಾಗಿತ್ತು. ಚರ್ಚ್​ಗಳು, ಅಂಗಡಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಮನೆಗಳು ಕುಸಿದುಬಿದ್ದಿವೆ. 2,800 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವ ನತದೃಷ್ಟರನ್ನು ರಕ್ಷಿಸುವ ಕಾರ್ಯಾಚರಣೆ ಸಾಗಿದೆ.

ಜೆರೆಮಿ ನಗರದಲ್ಲಿ ಭೂಕಂಪದ ತೀವ್ರತೆ ಹೆಚ್ಚಾಗಿತ್ತು. ಆದರೆ ಒಂದು ಅಂತಸ್ತಿನ ಮನೆಗಳೇ ಹೆಚ್ಚಿನ ಪ್ರಮಾಣದಲ್ಲಿದ್ದ ಕಾರಣ ಸಾವುನೋವಿನ ಪ್ರಮಾಣ ಇತರೆಡೆಗಳಿಗಿಂತ ಕಡಿಮೆಯಿದೆ. ಲೆಸ್ ಕೆಯೆಸ್ ನಗರದಲ್ಲಿ ಬಹುಅಂತಸ್ತಿನ ಹೊಟೆಲ್ ಉರುಳಿದ್ದು, ಸಾವುನೋವು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿದೆ.

ಪ್ರಬಲ ಭೂಕಂಪದ ನಂತರದ ಕಂಪನಗಳು ಇನ್ನೂ ವರದಿಯಾಗುತ್ತಿದ್ದು, ಶನಿವಾರ ರಾತ್ರಿ ದೇಶದ ಬಹುತೇಕ ಜನರು ಕಟ್ಟಡಗಳ ಒಳಗೆ ಮಲಗಲು ಹಿಂಜರಿದರು. ಮನೆಗಳ ಎದುರೇ ಮಲಗಿ ರಾತ್ರಿ ಕಳೆದರು. ಹೈಟಿಯಲ್ಲಿ ಸೋಮವಾರ ಚಂಡಮಾರುತ ಬೀಸುವ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಿದೆ. ರಕ್ಷಣಾ ಕಾರ್ಯಾಚರಣೆಗಳಿಗೆ ಇದು ಪೆಟ್ಟುಕೊಡಬಹುದು ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳು ಹೈಟಿ ನೆರವಿಗೆ ಧಾವಿಸಿವೆ. 65 ತಜ್ಞರನ್ನು ಹೈಟಿಗೆ ಕಳುಹಿಸಿರುವ ಅಮೆರಿಕ ವಿಶೇಷ ಉಪಕರಣಗಳು ಹಾಗೂ ವೈದ್ಯಕೀಯ ನೆರವನ್ನು ಕಳುಹಿಸಿಕೊಟ್ಟಿದೆ. ನೆರೆಯ ಡೊಮಿನಿಕನ್ ರಿಪಬ್ಲಿಕ್ 10 ಸಾವಿರ ಮಂದಿಗೆ ಬೇಕಾಗುವಷ್ಟು ಆಹಾರ ಪದಾರ್ಥಗಳನ್ನು ಹಾಗೂ ಔಷಧಿಗಳನ್ನು ರವಾನಿಸಿದೆ. ಕ್ಯೂಬಾ ಮತ್ತು ಈಕ್ವೆಡಾರ್ ದೇಶಗಳು ಸಹ ವೈದ್ಯಕೀಯ ಹಾಗೂ ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದೆ. ಮೆಕ್ಸಿಕೊ, ಚಿಲಿ, ಅರ್ಜಂಟೀನಾ, ಪರು ಮತ್ತು ವೆನೆಜುವೆಲಾ ದೇಶಗಳು ಸಹ ನೆರವು ನೀಡಿವೆ. ಹೈಟಿ ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್, ಮತ್ತಷ್ಟು ನೆರವು ಒದಗಿಸುವ ಪ್ರಯತ್ನಗಳು ಚಾಲ್ತಿಯಲ್ಲಿವೆ ಎಂದಿದ್ದಾರೆ.

ಪೆರು ದೇಶದಲ್ಲಿ 2010 ಜನವರಲ್ಲಿ ಸಂಭವಿಸಿದ್ದ ಭೂಕಂಪ ದುರಂತದ ನೆನಪು ಇನ್ನೂ ಅಲ್ಲಿನ ಜನರ ಮನಸ್ಸಿನಲ್ಲಿ ಮಾಸಿಲ್ಲ. ಅಂದು ಸಂಭವಿಸಿದ್ದ 7.0 ತೀವ್ರತೆಯ ಭೂಕಂಪದಿಂದ ರಾಜಧಾನಿ ಪೋರ್ಟ್​-ಅವು-ಪ್ರಿನ್ಸ್​ ಮತ್ತು ಅಕ್ಕಪಕ್ಕದ ನಗರಗಳನ್ನು ಅವಶೇಷಗಳಡಿ ಮುಳುಗಿಸಿತ್ತು.

ಕಳೆದ ಶನಿವಾರ ಸಂಭವಿಸಿದ ಭೂಕಂಪದಿಂದ ಹೈಟಿ ದೇಶದ ಸುಮಾರು 15 ಲಕ್ಷ ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೈಟಿಯ ಶೇ 60ರಷ್ಟು ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ಈ ಪರಿಸ್ಥಿತಿ ನಿರ್ವಹಣೆಯು ಹೈಟಿ ದೇಶ ಮತ್ತು ಅಂತರರಾಷ್ಟ್ರೀಯ ಸಮುದಾಯಕ್ಕೆ ದೊಡ್ಡ ಸವಾಲಾಗಿದೆ.

ಹೈಟಿ ಅಧ್ಯಕ್ಷ ಜೊವೆನೆಲ್ ಮೋಯ್ಸ್​ ಅವರನ್ನು ಒಂದು ತಿಂಗಳ ಹಿಂದೆ ಅವರ ಮನೆಯಲ್ಲಿಯೇ ಬಂದೂಕುಧಾರಿಗಳು ಕೊಂದಿದ್ದರು. ಬಡತನ ಮತ್ತು ಗುಂಪು ಘರ್ಷಣೆಗಳಿಂದ ನಲುಗಿರುವ ಹೈಟಿ ದೇಶವು ಇನ್ನೂ ಅಧ್ಯಕ್ಷರ ಕೊಲೆಯ ಆಘಾತದಿಂದ ಚೇತರಿಸಿಕೊಂಡಿರಲಿಲ್ಲ. ಅಷ್ಟರಲ್ಲಿಯೇ ಭೀಕರ ಭೂಕಂಪ ಅಲ್ಲಿನ ನಿವಾಸಿಗಳ ಬದುಕುನ್ನು ನರಕವಾಗಿಸಿದೆ.

(Haiti Earthquake Death toll jumps to 724 says government one month emergency announced)

ಇದನ್ನೂ ಓದಿ: ಹೈಟಿಯಲ್ಲಿ ತೀವ್ರ ಸ್ವರೂಪದ ಭೂಕಂಪ; ಒಂದು ತಿಂಗಳು ತುರ್ತು ಪರಿಸ್ಥಿತಿ ಘೊಷಿಸಿದ ಪ್ರಧಾನಿ

ಇದನ್ನೂ ಓದಿ: ಮಹಿಳೆಯರಿಗೆ ಸ್ವಾತಂತ್ರ್ಯ ಇರುತ್ತೆ ಎನ್ನುತ್ತಿದೆ ತಾಲಿಬಾನ್; ನಂಬುತ್ತಿಲ್ಲ ಅಫ್ಗಾನಿಸ್ತಾನದ ಸ್ತ್ರೀಯರು, ಅಮೆರಿಕ ಬಗ್ಗೆ ಮಡುಗಟ್ಟಿದೆ ಅಕ್ರೋಶ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ