ಹೈಟಿಯಲ್ಲಿ ತೀವ್ರ ಸ್ವರೂಪದ ಭೂಕಂಪ; ಒಂದು ತಿಂಗಳು ತುರ್ತು ಪರಿಸ್ಥಿತಿ ಘೊಷಿಸಿದ ಪ್ರಧಾನಿ

ಭೂಕಂಪದಿಂದ ಸಾಕಷ್ಟು ಅನಾಹುತ ಸಂಭವಿಸಿದ್ದು ಹೈಟಿಯಲ್ಲಿ ಒಂದು ತಿಂಗಳು ತುರ್ತು ಪರಿಸ್ಥಿತಿ ಹೇರುತ್ತಿರುವುದಾಗಿ ಅಲ್ಲಿನ ಪ್ರಧಾನಿ ಏರಿಯಲ್ ಹೆನ್ರಿ ಘೋಷಿಸಿದ್ದಾರೆ.

ಹೈಟಿಯಲ್ಲಿ ತೀವ್ರ ಸ್ವರೂಪದ ಭೂಕಂಪ; ಒಂದು ತಿಂಗಳು ತುರ್ತು ಪರಿಸ್ಥಿತಿ ಘೊಷಿಸಿದ ಪ್ರಧಾನಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Aug 15, 2021 | 7:57 AM

ಕೆರಿಬಿಯನ್​​ ದ್ವೀಪರಾಷ್ಟ್ರ ಹೈಟಿಯ ನೈರುತ್ಯ ಪ್ರಾಂತ್ಯದಲ್ಲಿ ಶನಿವಾರ ತೀವ್ರ ಸ್ವರೂಪದ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.2ರಷ್ಟು ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ. ಪ್ರಬಲ ಭೂಕಂಪದಿಂದ ಸುಮಾರು 304 ಜನ ಮೃತಪಟ್ಟಿದ್ದು, ಸಾವಿರಾರು ಜನರಿಗೆ ಗಾಯಗಳಾಗಿವೆ. ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಭರದಿಂದ ಮುಂದುವರೆದಿದೆ. ಭೂಕಂಪದಿಂದ ಸಾಕಷ್ಟು ಅನಾಹುತ ಸಂಭವಿಸಿದ್ದು ಹೈಟಿಯಲ್ಲಿ ಒಂದು ತಿಂಗಳು ತುರ್ತು ಪರಿಸ್ಥಿತಿ ಹೇರುತ್ತಿರುವುದಾಗಿ ಅಲ್ಲಿನ ಪ್ರಧಾನಿ ಏರಿಯಲ್ ಹೆನ್ರಿ ಘೋಷಿಸಿದ್ದಾರೆ.

ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.2ರಷ್ಟು ದಾಖಲಾಗಿದ್ದು, ಹೈಟಿ ದೇಶದ ರಾಜಧಾನಿ ಪೋರ್ಟ್–ಔ–ಪ್ರಿನ್ಸ್‌ ನಗರದಲ್ಲಿ ವಾಸಿಸುವ ಜನರು ಭೂಕಂಪಕ್ಕೆ ಬೆದರಿ ಮನೆಯಿಂದ ಆಚೆ ಓಡಿ ಬಂದಿದ್ದಾರೆ. ಏಕಾಏಕಿ ಭೂಮಿ ಜೋರಾಗಿ ಅಲುಗಾಡಿದ ಅನುಭವ ಆಗಿದೆ. ತಕ್ಷಣವೇ ಈ ಹಿಂದೆ ಆಗಿದ್ದ ಭೂಕಂಪಗಳ ನೆನಾಯಿತು ಎಂದು ಹೇಳಿಕೊಂಡಿದ್ದಾರೆ. ಒಮ್ಮೆಲೆ ಭೂಮಿ ಕಂಪಿಸಿದ್ದರಿಂದ ಅನೇಕರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಹಾಸಿಗೆಯಲ್ಲಿ ಮಲಗಿಕೊಂಡಿದ್ದ ನನಗೆ ಇದ್ದಕ್ಕಿದ್ದಂತೆ ಭೂಮಿ ಜೋರಾಗಿ ನಡುಗುತ್ತಿದೆ ಎಂಬ ಅನುಭವವಾಯಿತು. ಈ ಹಿಂದೆ 2010ರಲ್ಲಿ ಉಂಟಾಗಿದ್ದ ಭೂಕಂಪದಿಂದ ನಮ್ಮ ಕುಟುಂಬ ಹೇಗೋ ಪಾರಾಗಿದೆ. ತಕ್ಷಣವೇ ನಮಗೆ ಅಂದಿನ ನೆನಪಾಯಿತು. ತಡಮಾಡದೇ ಮನೆಬಿಟ್ಟು ಹೊರಗೆ ಓಡಿಬಂದೆ. ನಾನು ಮಾತ್ರವಲ್ಲದೇ ಮನೆಯೊಳಗೆ ತಾಯಿ ಮತ್ತು ನನ್ನ ಇಬ್ಬರು ಮಕ್ಕಳು ಇದ್ದರು. ನೆರೆ ಮನೆಯವರು ಅವರಿಗೆ ಮನೆಯಿಂದ ಆಚೆಗೆ ಓಡಿಬರುವಂತೆ ಸೂಚಿಸಿದರು. ಗಾಬರಿಯಿಂದ ಎಲ್ಲರೂ ಹೊರಗೆ ಓಡಿಬಂದು ರಸ್ತೆಯತ್ತ ಓಡಿ ಹೋದೆವು ಎಂದು ಭೂಕಂಪವನ್ನು ಅನುಭವಿಸಿದ ಸ್ಥಳೀಯ ನಿವಾಸಿ ನಯೋಮಿ ವೆರ್ನಿಯಸ್ ಆ ಕ್ಷಣದಲ್ಲಿ ತಮಗಾದ ಆತಂಕವನ್ನು ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಸುಮಾರು 1,800ಕ್ಕೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿದ್ದು, ಪ್ರಧಾನಿ ಏರಿಯಲ್​ ಹೆನ್ರಿ ಜನರಿಗೆ ಧೈರ್ಯ ತುಂಬಿದ್ದು ಸಹಾಯಕ್ಕೆ ಧಾವಿಸುವುದಾಗಿ ಹೇಳಿದ್ದಾರೆ. ಅನೇಕ ಪ್ರದೇಶಗಳು ತೀವ್ರ ಸ್ವರೂಪದಲ್ಲಿ ಹಾನಿಗೊಂಡಿದ್ದು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಕಂಪನದ ಕೇಂದ್ರ ಬಿಂದು ಪೋರ್ಟ್–ಔ–ಪ್ರಿನ್ಸ್‌ ನಗರದಿಂದ ಪಶ್ಚಿಮ ಭಾಗದ 125 ಕಿಲೋಮೀಟರ್​ (78 ಮೈಲಿ) ದೂರದಲ್ಲಿದೆ ಎಂದು ಯುಎಸ್​ ಜಿಯೋಲಾಜಿಕಲ್​ ಸರ್ವೇ ತಿಳಿಸಿದೆ.

(Strong 7.2 magnitude earthquake strikes Haiti kills 304)

ಇದನ್ನೂ ಓದಿ: Philippines Earthquake: ಫಿಲಿಪೈನ್ಸ್​​ನಲ್ಲಿ ಪ್ರಬಲ ಭೂಕಂಪ; 7.1 ತೀವ್ರತೆ ದಾಖಲು, ಏರ್​ಪೋರ್ಟ್​ ರನ್​ ವೇ ಬಳಿ ಸಣ್ಣ ಬಿರುಕು 

ಅಮೇರಿಕಾದ ಯೆಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್ ಪ್ರಾಂತ್ಯದಲ್ಲಿ ಕೇವಲ ಒಂದು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಭೂಕಂಪಗಳು!

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ