AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಪ್ರತಿಭಟನೆ; ಸಿಎಂ ಮನವಿಗೂ ಒಪ್ಪದ ಚೌಡಹಳ್ಳಿ ಗ್ರಾಮಸ್ಥರು

ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಪ್ರತಿಭಟನೆ; ಸಿಎಂ ಮನವಿಗೂ ಒಪ್ಪದ ಚೌಡಹಳ್ಳಿ ಗ್ರಾಮಸ್ಥರು

ಮಂಜುನಾಥ ಕೆಬಿ
| Edited By: |

Updated on: Nov 15, 2026 | 12:43 PM

Share

ಹಾಸನದ ಚೌಡಹಳ್ಳಿಯಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಪ್ರಕರಣ ಸಂಬಂಧ ಗ್ರಾಮಸ್ಥರ ಪ್ರತಿಭಟನೆ ತೀವ್ರಗೊಂಡಿದೆ. ದೂರವಾಣಿ ಮೂಲಕ ಶಾಶ್ವತ ಪರಿಹಾರದ ಭರವಸೆ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ ಮನವಿಗೂ ಗ್ರಾಮಸ್ಥರು ಪಟ್ಟು ಸಡಿಲಿಸದೆ ಧರಣಿ ಮುಂದುವರಿಸಿದ್ದಾರೆ. ಸಮಸ್ಯೆ ಬಗ್ಗೆ ಶಾಸಕ ಎಚ್.ಕೆ.ಸುರೇಶ್ ಕೂಡ ಸಿಎಂಗೆ ದೂರವಾಣಿ ಕರೆ ಮೂಲಕ ಮನವರಿಕೆ ಮಾಡಿದ್ದಾರೆ.

ಹಾಸನ, ನವೆಂಬರ್​​ 15: ಕಾಡಾನೆ ದಾಳಿಯಿಂದ 48 ವರ್ಷದ ಜಯಮ್ಮ ಬಲಿ ಪ್ರಕರಣ ಸಂಬಂಧ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಹಿಳೆಯ ಶವ ಇಟ್ಟುಕೊಂಡು ಧರಣಿ ನಡೆಸಲಾಗುತ್ತಿದ್ದು, ಧರಣಿ ಕೈಬಿಡುವಂತೆ ಶಾಸಕ H.K.ಸುರೇಶ್​ ಮತ್ತು ಸಂಸದ ಶ್ರೇಯಸ್ ಪಟೇಲ್​​ ಮನವಿಗೂ ಪ್ರತಿಭಟನಾಕಾರರು ಒಪ್ಪಿಲ್ಲ. ಕಾಡಾನೆಹಾವಳಿ ತಡೆಗೆ ಶಾಶ್ವತಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿರುವ ಕಾರಣ ಧರಣಿ ಸ್ಥಳದಿಂದಲೇ ಸಿಎಂ ಡಿಕೆಶಿಗೆ ಸಂಸದ ಶ್ರೇಯಸ್ ಫೋನ್ ಮಾಡಿದ್ದಾರೆ. ಈ ವೇಳೆ ಬ್ಯಾರಿಕೇಡ್​​​ ಹಾಕಲು ರೈಲ್ವೆ ಅಧಿಕಾರಿಗಳಿಗೆ ಸೂಚಿಸುವೆ ಎಂದ ಸಿಎಂ, ಒಂದು ನಿಯೋಗ ಮಾಡಿಕೊಂಡು ಬೆಂಗಳೂರಿಗೆ ಬರಲು ಸೂಚನೆ ನೀಡಿದ್ದಾರೆ. ಅಲ್ಲದೆ ನಿಮ್ಮ ಬಳಿಗೆ ಅಧಿಕಾರಿಗಳನ್ನು ಕಲಿಸುತ್ತೇನೆ. ಈ ಸಂಬಂಧ ಶೀಘ್ರದಲ್ಲೇ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಲ್ಲದೆ, ತನಗೆ ಸ್ವಲ್ಪ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಸಂಬಂಧಪಟ್ಟ ಸಚಿವರ ಜೊತೆ ಸಭೆ ಮಾಡುತ್ತೇವೆ. ನೀವು ಯಾವುತ್ತು ದಿನಾಂಕ ನಿಗದಿ ಮಾಡಿದರೆ ಅಂದು ಎಲ್ಲಾ ಅಧಿಕಾರಿಗಳ ಜೊತೆ ಬರುತ್ತೇನೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಲಾಗುವುದು ಎಂದಿದ್ದಾರೆ. ಆದರೆ ಸಿಎಂ ಡಿಕೆಶಿ ಮನವಿಗೂ ಚೌಡಹಳ್ಳಿ ಗ್ರಾಮಸ್ಥರು ಪಟ್ಟು ಸಡಿಲಿಸಿಲ್ಲ. ಸಮಸ್ಯೆ ಬಗ್ಗೆ ಶಾಸಕ ಎಚ್.ಕೆ.ಸುರೇಶ್ ಕೂಡ ಸಿಎಂಗೆ ದೂರವಾಣಿ ಕರೆ ಮೂಲಕ ಮನವರಿಕೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More