ಇರಾನ್ ಮೆಟ್ರೋದಲ್ಲಿ ಹಿಜಾಬ್ ನಿಯಮ ಉಲ್ಲಂಘಿಸಿದ್ದಕ್ಕೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ, ಕೋಮಾಗೆ ಜಾರಿದ ಬಾಲಕಿ
ಇರಾನ್ ಮೆಟ್ರೋದಲ್ಲಿ ಹಿಜಾಬ್ ನಿಯಮ ಉಲ್ಲಂಘಿಸಿದ್ದಕ್ಕೆ ಬಾಲಕಿ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆದಿದ್ದು, ಆಕೆ ಕೋಮಾಗೆ ಜಾರಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ. ಟೆಹ್ರಾನ್ ಸುರಂಗ ಮಾರ್ಗದಲ್ಲಿ ಈ ಘಟನೆ ನಡೆದಿದೆ, ಭಾರಿ ಭದ್ರತೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಟೆಹ್ರಾನ್ ಮೆಟ್ರೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಘರ್ಷಣೆಯಲ್ಲಿ ಅರ್ಮಿತಾ ಗರವಾಂಡ್ ಎಂಬ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ.
ಇರಾನ್(Iran) ಮೆಟ್ರೋದಲ್ಲಿ ಹಿಜಾಬ್(Hijab) ನಿಯಮ ಉಲ್ಲಂಘಿಸಿದ್ದಕ್ಕೆ ಬಾಲಕಿ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆದಿದ್ದು, ಆಕೆ ಕೋಮಾಗೆ ಜಾರಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ. ಟೆಹ್ರಾನ್ ಸುರಂಗ ಮಾರ್ಗದಲ್ಲಿ ಈ ಘಟನೆ ನಡೆದಿದೆ, ಭಾರಿ ಭದ್ರತೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಟೆಹ್ರಾನ್ ಮೆಟ್ರೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಘರ್ಷಣೆಯಲ್ಲಿ ಅರ್ಮಿತಾ ಗರವಾಂಡ್ ಎಂಬ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ.
ಆದರೆ ಇರಾನ್ ಸರ್ಕಾರ ಇದನ್ನು ಸುಳ್ಳು ಎಂದು ಹೇಳಿದ್ದು, ಕಡಿಮೆ ರಕ್ತದೊತ್ತಡದಿಂದ ಆಕೆ ಮೂರ್ಛೆ ಹೋಗಿದ್ದಳು ಎಂದು ಹೇಳಿಕೆ ನೀಡಿವೆ. ಇತ್ತೀಚೆಗಷ್ಟೇ ಹಿಜಾಬ್ ನಿಯಮವನ್ನು ಉಲ್ಲಂಘಿಸಿದ್ದ ಮಹ್ಸಾ ಅಮಿನಿಯ ಎಂಬಾಕೆಯನ್ನು ಬಂಧಿಸಲಾಗಿತ್ತು, ಆಕೆ ಅಲ್ಲೇ ಸಾವನ್ನಪ್ಪಿದ್ದಳು, ಇದಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಬಿಗಿ ಭದ್ರತೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ, ಯಾರ ಭೇಟಿಗೂ ಅನುಮತಿ ನೀಡಲಾಗುತ್ತಿಲ್ಲ. ಆಕೆಯ ಕುತ್ತಿಗೆ ಹಾಗೂ ತಲೆಗೆ ಬ್ಯಾಂಡೇಜ್ ಹಾಕಲಾಗಿದೆ. ಟೆಹ್ರಾನ್ ನಿವಾಸಿಯಾಗಿದ್ದರೂ ಪಶ್ಚಿಮ ಇರಾನ್‌ನ ಕೆರ್ಮಾನ್ಶಾನಿಂದ ಬಂದವರಾಗಿದ್ದಾರೆ.
ಇರಾನ್ ಕೂಡ ಅಫ್ಘಾನಿಸ್ತಾನದ ಹಾದಿಯನ್ನೇ ಅನುಸರಿಸುತ್ತಿದೆ. ಮಹಿಳೆಯರ ಬಗ್ಗೆ ಇರಾನ್ ಕಟ್ಟುನಿಟ್ಟಾಗಿ ವರ್ತಿಸುತ್ತಿದೆ. ಮಹಿಳೆಯರು ಹಿಜಾಬ್ ಧರಿಸಲು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಲಾಗಿದೆ. ಕಡ್ಡಾಯ ಡ್ರೆಸ್ಕೋಡ್ನ ಭಾಗವಾಗಿ ಇರಾನ್‌ನಲ್ಲಿ ಹಿಜಾಬ್ ಅನ್ನು ಅಳವಡಿಸಲಾಗಿದೆ, ಆದರೆ ಸಾಕಷ್ಟು ಮಹಿಳೆಯರು ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎನ್ನಲಾಗಿದೆ. ಇದರಿಂದ ಆತಂಕಗೊಂಡಿರುವ ಇರಾನ್ ಸರ್ಕಾರ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲು ನಿರ್ಧರಿಸಿತ್ತು.
ಮತ್ತಷ್ಟು ಓದಿ:Hijab: ಹಿಜಾಬ್ ಧರಿಸದ ಹೆಣ್ಣುಮಕ್ಕಳ ಮೇಲೆ ಕಣ್ಣಿಡಲು ಇರಾನ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ
ಇರಾನ್ ಅಧಿಕಾರಿ ಪ್ರಕಾರ, ಕಡ್ಡಾಯ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸುವ ಮಹಿಳೆಯರಿಗೆ ಸಿಸಿಟಿವಿ ಮೂಲಕ ಶಿಕ್ಷೆ ವಿಧಿಸಲಾಗುತ್ತದೆ. ಇದಕ್ಕಾಗಿ ಇರಾನ್‌ನ ಸಾರ್ವಜನಿಕ ಸ್ಥಳಗಳು ಮತ್ತು ಬೀದಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಅವರನ್ನು ಗುರುತಿಸಿದ ನಂತರ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
🚨 🚨 🚨 She, 16, is now in a coma!
after being attacked by the immoral law enforcement in the subway in Tehran.
Her name is Amrita Gravand.
*The narrator is a propagandist for disinformation pic.twitter.com/a3xsZLNgbb
— 🏴Iranian American 🇺🇸 (@IranLionness) October 3, 2023
ಮಾಧ್ಯಮ ವರದಿಗಳ ಪ್ರಕಾರ, ಹಿಜಾಬ್ ಕಾನೂನಿನ ವಿರುದ್ಧ ಪ್ರತಿರೋಧವನ್ನು ನಿಲ್ಲಿಸುವುದು ಇರಾನ್ ಸರ್ಕಾರದ ಗುರಿಯಾಗಿದೆ. ಹಿಜಾಬ್‌ಗೆ ಸಂಬಂಧಿಸಿದಂತೆ ಕಳೆದ ಹಲವು ತಿಂಗಳುಗಳಿಂದ ಇರಾನ್‌ನಲ್ಲಿ ವಿವಾದ ನಡೆಯುತ್ತಿದೆ. ವಾಸ್ತವವಾಗಿ ಈ ಸಂಪೂರ್ಣ ವಿವಾದವು 22 ವರ್ಷದ ಇರಾನ್ ಹುಡುಗಿ ಮಹ್ಸಾ ಸಾವಿನೊಂದಿಗೆ ಪ್ರಾರಂಭವಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ