Watch ಬಿಸಿಗಾಳಿಗೆ ಕರಗಿದ ಹಿಮನದಿ; ಪ್ರವಾಹಕ್ಕೆ ಕುಸಿದು ಬಿತ್ತು ಪಾಕಿಸ್ತಾನದ ಐತಿಹಾಸಿಕ ಹಸನಾಬಾದ್ ಸೇತುವೆ
ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಶಿಶ್ಪರ್ ಪರ್ವತದ ಬಳಿ ಇರುವ ಶಿಶ್ಪರ್ ಹಿಮನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಹೆಚ್ಚಿನ ತಾಪಮಾನದಿಂದಾಗಿ ಹಿಮನದಿ ಕರಗಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಪ್ರವಾಹ ಉಂಟಾಗುತ್ತಿದೆ.
ಪಾಕಿಸ್ತಾನದ (Pakistan) ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ಐತಿಹಾಸಿಕ ಹಸನಾಬಾದ್ ಸೇತುವೆಯು (Hassanabad Bridge) ಹಿಮ ಸರೋವರದ ಪ್ರವಾಹದಿಂದಾಗಿ (Flood) ಶನಿವಾರ ಕುಸಿದು ಬಿದ್ದಿದೆ . ಕಾರಕೋರಂ ಹೆದ್ದಾರಿಯಲ್ಲಿನ ಸೇತುವೆಯು ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಶಿಶ್ಪರ್ ಪರ್ವತದ ಬಳಿ ಇರುವ ಶಿಶ್ಪರ್ ಹಿಮನದಿಯ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಹೆಚ್ಚಿನ ತಾಪಮಾನದಿಂದಾಗಿ ಹಿಮನದಿ ಕರಗಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಪ್ರವಾಹ ಉಂಟಾಗುತ್ತಿದೆ. ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವಾಲಯದ ಸಚಿವೆ ಮತ್ತು ಸೆನೆಟರ್ ಶೆರ್ರಿ ರೆಹಮಾನ್ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ, ಸೇತುವೆಯು ಕುಸಿದು ಬೀಳುತ್ತಿರುವ ದೃಶ್ಯ ಮತ್ತು ನೀರಿನ ಮಟ್ಟ ಹೆಚ್ಚುತ್ತಿರುವುದು ಕಾಣಿಸುತ್ತದೆ. ಸೇತುವೆ ಕೊಚ್ಚಿ ಹೋಗಿರುವುದರಿಂದ ಸೇತುವೆಯ ಸಮೀಪ ನಿಂತಿರುವ ಜನರನ್ನು ದೂರ ಸರಿಯುವಂತೆ ಹೇಳಲಾಗಿದೆ. ಕೆಲವು ದಿನಗಳ ಹಿಂದೆ ಹವಾಮಾನ ಬದಲಾವಣೆ ಸಚಿವಾಲಯವು ಹೆಚ್ಚಿನ ತಾಪಮಾನದಿಂದಾಗಿ ಪಾಕಿಸ್ತಾನ ಪ್ರವಾಹಕ್ಕೆ ಎಡೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿತ್ತು. ಕರಗುವ ಶಿಸ್ಪರ್ ಹಿಮನದಿಯಿಂದಾಗಿ ಸೇತುವೆಗಳ ಕಂಬಗಳ ಅಡಿ ಸವೆತವುಂಟಾಗಿದೆ. ಹಿಮ ಕರಗುವಿಕೆಯಿಂದಾಗುವ ಪ್ರವಾಹದಿಂದ (GLOF) ಕೆಕೆಎಚ್ ನಲ್ಲಿ ಹಸನಾಬಾದ್ ಸೇತುವೆ ಕುಸಿದಿದೆ. 48 ಗಂಟೆಗಳಲ್ಲಿ ತಾತ್ಕಾಲಿಕ ಸೇತುವೆ ಮಾಡಲಾಗುವುದು ಎಂದು ಎಫ್ಡಬ್ಲ್ಯುಒ ಹೇಳಿರುವುದಾಗಿ ಶೆರ್ರಿ ಹೇಳಿದ್ದಾರೆ.
A few days ago @ClimateChangePK had warned that Pakistan’s vulnerability is high due to high temps. Hassanabad bridge on the KKH collapsed due to GLOF from the melting Shisper glacier which caused erosion under pillars. Am told FWO will have a temporary bridge up in 48 hours. 1/2 pic.twitter.com/Sjl9QIMI0G
ಇದನ್ನೂ ಓದಿ— SenatorSherryRehman (@sherryrehman) May 7, 2022
ಅದೇ ಸಮಯದಲ್ಲಿ ವಿಶೇಷವಾಗಿ ಉತ್ತರದಲ್ಲಿ ಜಿಬಿ (ಗಿಲ್ಗಿಟ್-ಬಾಲ್ಟಿಸ್ತಾನ್),ಕೆಪಿ (ಖೈಬರ್ ಪಾಕ್ತುನಖಾವ)ಯಲ್ಲಿ ಪರಿಸ್ಥಿತಿ ದುರ್ಬಲವಾಗಿವೆ. ಪಾಕಿಸ್ತಾನವು ಧ್ರುವ ಪ್ರದೇಶದ ಹೊರಗೆ ಅತಿ ಹೆಚ್ಚು ಹಿಮನದಿಗಳನ್ನು ಹೊಂದಿದೆ. ಹೆಚ್ಚಿನ ಜಾಗತಿಕ ತಾಪಮಾನದಿಂದಾಗಿ ಹಿಮ ಕರಗುತ್ತಿದ್ದು, ಹೊರಸೂಸುವಿಕೆಯನ್ನು ಕಡಿಮೆ ಮಾಡಲು, ಮಾತಿನಂತೆ ನಡೆಯಲು ನಮಗೆ ಜಾಗತಿಕ ನಾಯಕರು ಬೇಕು ಎಂದು ಶೆರ್ರಿ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ. ಈ ಪ್ರದೇಶದಲ್ಲಿ ಪ್ರವಾಹದಿಂದಾಗಿ ಸಾವಿರಾರು ಸ್ಥಳೀಯರು ಮತ್ತು ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.
Published On - 1:47 pm, Wed, 11 May 22