Sign In

By signing in or creating an account, you agree with Associated Broadcasting Company's Terms & Conditions and Privacy Policy.

Hong Kong real estate: ಹಾಂಕಾಂಗ್​ನಲ್ಲಿ ಈ ಮನೆಯ ತಿಂಗಳ ಬಾಡಿಗೆ 1.26 ಕೋಟಿ ರೂಪಾಯಿ

ಹಾಂಕಾಂಗ್​ನಲ್ಲಿ ರಿಯಲ್ ಎಸ್ಟೇಟ್ ಬಹಳ ದುಬಾರಿ. ಆಸ್ತಿ ಖರೀದಿಗೆ ಮಾತ್ರವಲ್ಲ, ಬಾಡಿಗೆಗೆ ಪಡೆಯುವುದು ಸಹ ಇಲ್ಲಿ ಪರಮ ದುಬಾರಿ. ಈಚೆಗೆ ವಿಲಾಸಿ ಮನೆಯೊಂದನ್ನು ತಿಂಗಳಿಗೆ 1.25 ಕೋಟಿ ರೂಪಾಯಿಗೆ ಪಡೆಯಲಾಗಿದೆ.

Hong Kong real estate: ಹಾಂಕಾಂಗ್​ನಲ್ಲಿ ಈ ಮನೆಯ ತಿಂಗಳ ಬಾಡಿಗೆ 1.26 ಕೋಟಿ ರೂಪಾಯಿ
ಹಾಂಕಾಂಗ್ ನೋಟ (ಚಿತ್ರಕೃಪೆ: ಟ್ವಿಟ್ಟರ್)
Follow us
Srinivas Mata
|

Updated on: Mar 20, 2021 | 6:24 PM

ಹಾಂಕಾಂಗ್​ನಲ್ಲಿ ಆಸ್ತಿ ಖರೀದಿ ಮಾಡೋದು ಬಲು ದುಬಾರಿ. ಆದರೆ ಬಾಡಿಗೆಯಲ್ಲೂ ಕೆಲ ದಿನಗಳ ಹಿಂದೆ ಅಲ್ಲೊಂದು ಹೊಸ ದಾಖಲೆಯೇ ಆಗಿದೆ. ಇದನ್ನು ನೋಡಿದರೆ ಏನೋ ಕೊರೊನಾ ಬಿಕ್ಕಟ್ಟಿನಿಂದ ಚೇತರಿಕೆ ಆದಂತೆ ಕಾಣಿಸ್ತಿದೆ ಅಂದುಕೊಳ್ಳಬಹುದು. ಅಷ್ಟಕ್ಕೂ ಅಲ್ಲಿ ಏನಾಗಿದೆ ಅಂದರೆ, ವಾರ್ಫ್ ಹೋಲ್ಡಿಂಗ್ ಲಿಮಿಟೆಡ್​ನಿಂದ ವಿಲಾಸಿ ಮನೆಯೊಂದನ್ನು ತಿಂಗಳಿಗೆ 1.35 ಮಿಲಿಯನ್ ಹಾಂಕಾಂಗ್ ಡಾಲರ್ ಲೆಕ್ಕಕ್ಕೆ ಬಾಡಿಗೆಗೆ ನೀಡಲಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, ತಿಂಗಳಿಗೆ 1,25,92,696. ಹೌದು, ನೀವು ಸರಿಯಾಗಿ ಓದುತ್ತಿದ್ದೀರಿ; 11 ಪ್ಲಾಂಟೇಷನ್ ರಸ್ತೆ ಪ್ರಾಜೆಕ್ಟ್​ನಲ್ಲಿ ನೀಡಿರುವ ವಿಲಾಸಿ ಮನೆಯ ಬಾಡಿಗೆ 1.26 ಕೋಟಿ ರೂಪಾಯಿ ಆಗುತ್ತದೆ. ವರ್ಷಕ್ಕೆ 15 ಕೋಟಿ ರೂಪಾಯಿ ಆಗುತ್ತದೆ ಅಂದುಕೊಳ್ಳಿ. ಆದರೆ ಇಷ್ಟು ದೊಡ್ಡ ಮೊತ್ತಕ್ಕೆ ಬಾಡಿಗೆಗೆ ಪಡೆದ ಆ ಶ್ರೀಮಂತರು ಯಾರು ಎಂಬ ಮಾಹಿತಿ ಬಯಲಾಗಿಲ್ಲ.

ಹಾಂಕಾಂಗ್​ನಲ್ಲಿ ಮನೆಯೊಂದಕ್ಕೆ ಪಾವತಿಸಿರುವ ಅತಿ ದೊಡ್ಡ ಮೊತ್ತ ಇದು ಎನ್ನಲಾಗಿದೆ. ಅದ್ಯಾರೋ ಪುಣ್ಯಾತ್ಮರಿಗೆ ತಾವಂದುಕೊಂಡಂತೆ ಮನೆಯನ್ನು ಖರೀದಿ ಮಾಡುವುದಕ್ಕೆ ಸಿಕ್ಕಿರುವುದಿಲ್ಲ. ಅದಕ್ಕಾಗಿಯೇ ತಾತ್ಕಾಲಿಕವಾಗಿ ಬಾಡಿಗೆ ಮನೆಯಲ್ಲಿ ಇದ್ದು, ತಮಗೆ ಬೇಕಾದಂಥ ಮನೆ ಸಿಕ್ಕ ಮೇಲೆ ಖರೀದಿಸೋಣ ಅಂದುಕೊಂಡಿರಬೇಕು ಎನ್ನುತ್ತಾರೆ ಸ್ಥಳೀಯ ರಿಯಲ್ ಎಸ್ಟೇಟ್ ತಜ್ಞರು.

10,804 ಚದರಡಿಯ ಮನೆ 10,804 ಚದರಡಿಯ ಈ ಮನೆ ವಿಕ್ಟೋರಿಯಾ ಕಡಲ ಕಡೆಗೆ ಮುಖ ಮಾಡಿ ನಿಂತಿದೆ. ಈ ಮನೆಯಲ್ಲಿ ಖಾಸಗಿ ಗ್ಯಾರೇಜ್, ಉದ್ಯಾನ, ಎಲಿವೇಟರ್ ಇದೆ. 11 ಪ್ಲಾಂಟೇಷನ್ ರಸ್ತೆಯಲ್ಲಿ ಇರುವ 7 ಮನೆಗಳಲ್ಲಿ ನಾಲ್ಕನ್ನು ಮಾರುವ ಆಲೋಚನೆ ವಾರ್ಫ್ ಹೋಲ್ಡಿಂಗ್ ಲಿಮಿಟೆಡ್​ದು. ಉಳಿದಿದ್ದನ್ನು ಬಾಡಿಗೆ ಆದಾಯಕ್ಕೆ ಇಟ್ಟುಕೊಳ್ಳುತ್ತದಂತೆ. ಹಾಂಕಾಂಗ್​ನಲ್ಲಿ ಮನೆಗಳ ಲಭ್ಯತೆಯೇ ಕಡಿಮೆ. ಇದರ ಜತೆಗೆ ವಿಲಾಸಿ ಮನೆಗಳ ಮಾರಾಟಕ್ಕೆ ಡೆವಲಪರ್​ಗಳಿಗೆ ತುಂಬ ಸಮಯ ಹಿಡಿಸುತ್ತದೆ. ಆದ್ದರಿಂದ ಕೆಲವು ಆಸ್ತಿಗಳನ್ನು ಬಾಡಿಗೆಗೆ ನೀಡಲಾಗುತ್ತದೆ ಎನ್ನುತ್ತಾರೆ ನೈಟ್ ಫ್ರಾಂಕ್ ಎಲ್​ಎಲ್​ಪಿಯ ಕಾರ್ಯ ನಿರ್ವಾಹಕ ನಿರ್ದೇಶಕ ಥಾಮಸ್ ಲ್ಯಾಮ್.

ಈಚೆಗೆ ಹಾಂಕಾಂಗ್​ನಲ್ಲಿ ಹೈ ಎಂಡ್ ವಸತಿ ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಅಪಾರ್ಟ್​ಮೆಂಟ್ ಮತ್ತು ಭೂಮಿಯ ಮಾರಾಟ ಆಗಿದೆ. ಕಳೆದ ತಿಂಗಳು ಸಿಕೆ ಅಸೆಟ್ ಹೋಲ್ಡಿಂಗ್ಸ್ ಲಿಮಿಟೆಡ್​ನಿಂದ 459 ಮಿಲಿಯನ್ ಹಾಂಕಾಂಗ್ ಡಾಲರ್​ಗೆ (ಭಾರತದ ರೂಪಾಯಿ ಲೆಕ್ಕದಲ್ಲಿ 428 ಕೋಟಗೂ ಹೆಚ್ಚು) ಮಾರಲಾಗಿದ್ದು, ಇದು ಏಷ್ಯಾದಲ್ಲೇ ಇಂಥ ಆಸ್ತಿಗೆ ದೊರೆತ ದಾಖಲೆ ಬೆಲೆಯಾಗಿದೆ.

ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ‘ಡ್ರ್ಯಾಗನ್’ ವಿರುದ್ಧದ ಆಕ್ರೋಶ..!

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ಕುಟುಂಬ ರಾಜಕಾರಣದಿಂದ ಹೊರಬರುವ ವರೆಗೂ ಮತ್ತೆ ಬಿಜೆಪಿಗೆ ಬರಲ್ಲ: ಯತ್ನಾಳ್
ಕುಟುಂಬ ರಾಜಕಾರಣದಿಂದ ಹೊರಬರುವ ವರೆಗೂ ಮತ್ತೆ ಬಿಜೆಪಿಗೆ ಬರಲ್ಲ: ಯತ್ನಾಳ್
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ